Monday, March 30, 2026
spot_img
More
    spot_img
    HomeBreaking Newsಆ ಇಬ್ಬರ ಭಯಕ್ಕೆ ಮಾಸ್ಕ್‌ಮ್ಯಾನ್‌ ಹೆಣ ಹೂತಿರುವ ನಿಜವಾದ ಜಾಗಗಳನ್ನು ತೋರಿಸಿಲ್ಲ- ಗಿರೀಶ್ ಮಟ್ಟೆಣ್ಣವರ್‌

    ಆ ಇಬ್ಬರ ಭಯಕ್ಕೆ ಮಾಸ್ಕ್‌ಮ್ಯಾನ್‌ ಹೆಣ ಹೂತಿರುವ ನಿಜವಾದ ಜಾಗಗಳನ್ನು ತೋರಿಸಿಲ್ಲ- ಗಿರೀಶ್ ಮಟ್ಟೆಣ್ಣವರ್‌

    ನೂರಾರು ಶವಗಳನ್ನು ತೋರಿಸುತ್ತೇನೆ ಎಂದು ಹೇಳುತ್ತಿದ್ದ ಚಿನ್ನಯ್ಯ ಒಟ್ಟು 17 ಕಡೆ ಅಗೆಸಿದ.ಕೇವಲ ಎರಡು ಕಡೆ ಮಾತ್ರ ಅಸ್ತಿಪಂಜರದ ಅವಶೇಷಗಳು ಪತ್ತೆಯಾಗಿವೆ. ಗಿರೀಶ್‌ ಮಟ್ಟೆಣ್ಣವರ್‌ ಹೊಸ ವಿಡಿಯೊವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಮೊದಲೆಲ್ಲ ನೂರಾರು ಶವಗಳನ್ನು ಹೂತಿದ್ದೆ ಎನ್ನುತ್ತಿದ್ದ ಚಿನ್ನಯ್ಯ ಸರಿಯಾದ ಜಾಗಗಳನ್ನು ತೋರಿಸಿಲ್ಲ ಎನ್ನುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

    ಗಿರೀಶ್‌ ಮಟ್ಟೆಣ್ಣವರ್‌ ಹೊಸ ವಿಡಿಯೊವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಮೊದಲೆಲ್ಲ ನೂರಾರು ಶವಗಳನ್ನು ಹೂತಿದ್ದೆ ಎನ್ನುತ್ತಿದ್ದ ಚಿನ್ನಯ್ಯ ಸರಿಯಾದ ಜಾಗಗಳನ್ನು ತೋರಿಸಿಲ್ಲ ಎನ್ನುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

    ಗಿರೀಶ್‌ ಮಟ್ಟೆಣ್ಣವರ್‌ ಚಿನ್ನಯ್ಯ ಯಾವಾಗ ದೂರು ಕೊಟ್ಟನೋ ಆಗ ನಕಲಿ ದೇವಮಾನವನ ಡಿ ಗ್ಯಾಂಗ್‌ ಹಾಗೂ ನಕಲಿ ಪತ್ರಕರ್ತನ ಸಿಂಡಿಕೇಟ್‌ ಉಜಿರೆಯಿಂದ ಆತನ ಊರಿಗೆ ಹೋಗಿ ಆತನ ಮನೆಯ ಮಾಲೀಕನಿಗೆ ಹಾಗೂ ಊರಿನ ಮುಖಂಡರಿಗೆ ಆಮಿಷ ಕೊಟ್ಟು ಆತನ ಕುಟುಂಬವನ್ನು ಮನೆಯಿಂದ ಹೊರಗೆ ಹಾಕಿಸುವ ಪ್ರಯತ್ನ ಮಾಡಿದೆ ಎಂದಿದ್ದಾರೆ.

    ನಾನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಂದೇಶ ಕಳುಹಿಸಿ ಆತನ ಕುಟುಂಬಕ್ಕೆ ರಕ್ಷಣೆ ಕೊಡಿ ಎಂದಿದ್ದೆ. ಅದರ ಸಾಕ್ಷಿ ಸಹ ಇದೆ. ಈ ರೀತಿ ರಕ್ಷಣೆ ಕೊಡಿ ಎಂದರೆ ಯಾರೂ ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಅವತ್ತೇ ಆತನಿಗೆ ಮೊದಲ ಧಮ್ಕಿ ಹಾಕಿದರು. ಆ ಸಮಯದಲ್ಲಿ ಏನಾದರೂ ಸಂಬಂಧಪಟ್ಟ ಅಧಿಕಾರಿಗಳು ರಕ್ಷಣೆ ಕೊಟ್ಟಿದ್ದರೆ ಇಷ್ಟೊತ್ತಿಗೆ ನೂರಾರು ಶವಗಳು ಅಚೆ ಬಂದಿರುತ್ತಿದ್ದವು. ಆ ಹೆದರಿಕೆಯಿಂದಲೇ ಬಹುಶಃ ಆತ ತಪ್ಪು ತಪ್ಪು ಜಾಗಗಳನ್ನು ತೋರಿಸಿರಬಹುದು ಎಂಬ ಮಾಹಿತಿಗಳು ನಮಗೆ ಬರುತ್ತಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ,ಟ್ರಾಫಿಕ್ ಫೈನ್‌ಗೆ 50% ರಿಯಾಯಿತಿ: ನಾಲ್ಕು ದಿನಗಳಲ್ಲಿ ₹14.8 ಕೋಟಿ ಸಂಗ್ರಹಿಸಿ ದಾಖಲೆ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬಿಗ್ ನ್ಯೂಸ್! ಬೆಂಗಳೂರು ಕರಗ ಉತ್ಸವಕ್ಕೆ ಸಜ್ಜು—1000ಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆ, ₹1.70 ಕೋಟಿ ವೆಚ್ಚ!

    “ಬೆಂಗಳೂರು ಕರಗ ಉತ್ಸವ 2026” ಮತ್ತೆ ನಗರಕ್ಕೆ ಸಾಂಸ್ಕೃತಿಕ ಸಂಭ್ರಮ ತರಲು ಸಜ್ಜಾಗಿದೆ! ಏಪ್ರಿಲ್ 1ರಂದು ನಡೆಯಲಿರುವ ಈ ಐತಿಹಾಸಿಕ ಉತ್ಸವಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ಭದ್ರತೆ ಮತ್ತು ವ್ಯವಸ್ಥೆಗಾಗಿ ಸರ್ಕಾರದಿಂದ ವಿಶೇಷ...

    ಬ್ರೇಕಿಂಗ್ರಾ! ಮನವಮಿ ಹಬ್ಬಕ್ಕೆ ಮಾರುಕಟ್ಟೆ ಬಂದ್ ಆಗುತ್ತಾ? ಹೂಡಿಕೆದಾರರಿಗೆ ಕ್ಲಿಯರ್ ಮಾಹಿತಿ!

    “ಸ್ಟಾಕ್ ಮಾರ್ಕೆಟ್ ಹಾಲಿಡೇ 2026” ಇದೀಗ ಹೂಡಿಕೆದಾರರಲ್ಲಿ ದೊಡ್ಡ ಗೊಂದಲ ಮೂಡಿಸಿದೆ. ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಅಥವಾ ಶುಕ್ರವಾರ ಷೇರು ಮಾರುಕಟ್ಟೆ ಬಂದ್ ಆಗುತ್ತದೆಯಾ? ಎಂಬ ಪ್ರಶ್ನೆ ಟ್ರೇಡರ್‌ಗಳ ನಡುವೆ ಭಾರೀ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading