Friday, September 18, 2026
spot_img
More
    spot_img
    HomeLatest news2026ರಲ್ಲಿ ಫಿಟ್ ಆಗ್ಬೇಕಾ? ಪೌಷ್ಟಿಕತಜ್ಞೆ ನೀಡಿದ 10 ಹೆಲ್ತ್ ಮಂತ್ರಗಳನ್ನು ಇಂದೇ ಪಾಲಿಸಿ

    2026ರಲ್ಲಿ ಫಿಟ್ ಆಗ್ಬೇಕಾ? ಪೌಷ್ಟಿಕತಜ್ಞೆ ನೀಡಿದ 10 ಹೆಲ್ತ್ ಮಂತ್ರಗಳನ್ನು ಇಂದೇ ಪಾಲಿಸಿ

    ಬೆಂಗಳೂರು: ಹೊಸ ವರ್ಷ ಆರಂಭವಾಗುತ್ತಿದ್ದಂತೆ ಬಹುತೇಕರು ಜೀವನದಲ್ಲಿ ದೊಡ್ಡ ಬದಲಾವಣೆಗಳ ಬಗ್ಗೆ ನಿರ್ಣಯಗಳನ್ನು (Resolutions) ತೆಗೆದುಕೊಳ್ಳುತ್ತಾರೆ. ಆದರೆ ಆರೋಗ್ಯ ಸುಧಾರಣೆಗೆ ದೊಡ್ಡ ನಿರ್ಧಾರಗಳಿಗಿಂತ ದಿನನಿತ್ಯದ ಸಣ್ಣ ಹವ್ಯಾಸಗಳನ್ನು ಸರಿಪಡಿಸಿಕೊಳ್ಳುವುದೇ ಹೆಚ್ಚು ಪರಿಣಾಮಕಾರಿ ಎಂದು ಪೌಷ್ಟಿಕತಜ್ಞರು ಸಲಹೆ ನೀಡುತ್ತಾರೆ.

    Advertisement

    ಪ್ರಖ್ಯಾತ ಪೌಷ್ಟಿಕತಜ್ಞೆ ದೀಪ್ಶಿಖಾ ಜೈನ್ ಅವರು 2026ರ ಹೊಸ ವರ್ಷಕ್ಕೆ ಆರೋಗ್ಯಕರ ಜೀವನಶೈಲಿಗಾಗಿ ಅನುಸರಿಸಬಹುದಾದ 10 ಸರಳ ಸೂತ್ರಗಳನ್ನು ಹಂಚಿಕೊಂಡಿದ್ದಾರೆ. ಇವು ದಿನನಿತ್ಯ ಪಾಲಿಸಿದರೆ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಸ್ಪಷ್ಟ ಬದಲಾವಣೆ ಕಾಣಬಹುದು ಎಂದು ಅವರು ಹೇಳಿದ್ದಾರೆ.

    ಆರೋಗ್ಯಕರ ಜೀವನಕ್ಕೆ 10 ಸೂತ್ರಗಳು

    1.ಫ್ರಿಡ್ಜ್ ಆರೋಗ್ಯಕರವಾಗಿರಲಿ:
    ಫ್ರಿಡ್ಜ್‌ನಲ್ಲಿರುವ ಜಂಕ್ ಫುಡ್‌ಗಳನ್ನು ಕಡಿಮೆ ಮಾಡಿ. ಹಣ್ಣು, ತರಕಾರಿ ಹಾಗೂ ತಾಜಾ ಆಹಾರಗಳಿಗೆ ಆದ್ಯತೆ ನೀಡಿ. ಸಂಸ್ಕರಿತ ಆಹಾರಕ್ಕಿಂತ ನೈಸರ್ಗಿಕ ಆಹಾರ ಉತ್ತಮ.

    2.ಪ್ರತಿದಿನ ಸ್ವಲ್ಪ ಓಟ:
    ದಿನಕ್ಕೆ ಕನಿಷ್ಠ 10 ನಿಮಿಷಗಳ ಓಟ ಮೆದುಳನ್ನು ಚುರುಕುಗೊಳಿಸಿ, ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ಮಾನಸಿಕ ಸ್ಪಷ್ಟತೆಗೆ ಇದು ಸಹಕಾರಿ.

    3.ಹೊಟ್ಟೆಯ ಆರೋಗ್ಯಕ್ಕೆ ಗಮನ:
    ಜೀರ್ಣಕ್ರಿಯೆ ಸರಾಗವಾಗಿರಲು ಪ್ರಿಬಯೋಟಿಕ್ ಮತ್ತು ಪ್ರೊಬಯೋಟಿಕ್ ಆಹಾರಗಳು ಅಗತ್ಯ. ಇಡ್ಲಿ, ದೋಸೆ, ಮಜ್ಜಿಗೆ, ಮೊಸರು, ಆಪಲ್ ಮತ್ತು ಸಂಪೂರ್ಣ ಗೋಧಿ ಆಹಾರವನ್ನು ಡಯಟ್‌ನಲ್ಲಿ ಸೇರಿಸಬೇಕು.

    4.ದಿನಚರಿ ಬರೆಯುವ ಹವ್ಯಾಸ:
    ದಿನದ ಭಾವನೆಗಳನ್ನು ಬರೆಯುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಮಾನಸಿಕ ಆರೋಗ್ಯಕ್ಕೆ ಇದು ಉತ್ತಮ ಅಭ್ಯಾಸ.

    5.ಬೇಗ ಮಲಗುವ ರೂಢಿ:
    ತಡವಾಗಿ ಮಲಗುವುದರಿಂದ ಒತ್ತಡ ಹೆಚ್ಚಾಗುತ್ತದೆ. ಪ್ರತಿದಿನ ಸಮಯಕ್ಕೆ ಮಲಗುವುದರಿಂದ ದೇಹದಲ್ಲಿನ ಕಾರ್ಟಿಸೋಲ್ ಮಟ್ಟ ನಿಯಂತ್ರಣದಲ್ಲಿರುತ್ತದೆ.

    6.ದಿನಕ್ಕೆ 10,000 ಹೆಜ್ಜೆಗಳು:
    ನಿಯಮಿತವಾಗಿ ನಡೆಯುವುದರಿಂದ ಮಧುಮೇಹ, ರಕ್ತದೊತ್ತಡದಂತಹ ಸಮಸ್ಯೆಗಳು ದೂರವಾಗುತ್ತವೆ. ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.

    7.ಆರೋಗ್ಯಕರ ಕೊಬ್ಬು ಸೇವನೆ:
    ಅಕ್ರೋಟ್, ಚಿಯಾ ಸೀಡ್ಸ್, ಮೊಟ್ಟೆ ಮೊದಲಾದ ಆರೋಗ್ಯಕರ ಕೊಬ್ಬು ಇರುವ ಆಹಾರಗಳನ್ನು ದಿನದ ಆರಂಭದಲ್ಲೇ ಸೇವಿಸುವುದು ಉತ್ತಮ.

    8.ಪ್ರೋಟೀನ್ ಸಮೃದ್ಧ ಆಹಾರ:
    ಪ್ರತಿ ಊಟದಲ್ಲೂ ಪ್ರೋಟೀನ್ ಅಂಶ ಇರಲಿ. ಇದು ಮಾಂಸಖಂಡಗಳ ಬಲವರ್ಧನೆಗೆ ಮತ್ತು ಅತಿಯಾದ ಹಸಿವನ್ನು ನಿಯಂತ್ರಿಸಲು ಸಹಾಯಕ.

    9.ತೂಕ ಎತ್ತುವ ವ್ಯಾಯಾಮ:
    ಕೇವಲ ಕಾರ್ಡಿಯೋವಷ್ಟೇ ಅಲ್ಲದೆ, ಸ್ವಲ್ಪ ವೇಟ್ ಟ್ರೈನಿಂಗ್ ಮಾಡಿದರೆ ದೀರ್ಘಕಾಲದ ಆರೋಗ್ಯಕ್ಕೆ ಲಾಭ.

    10.ಗುರಿಗಳನ್ನು ಬರೆದಿಡಿ:
    ನಿಮ್ಮ ಗುರಿಗಳನ್ನು ಬರೆಯುವ ಅಭ್ಯಾಸ ಬೆಳೆಸಿಕೊಳ್ಳಿ. ಇದು ಗುರಿ ಸಾಧನೆಗೆ ಪ್ರೇರಣೆಯಾಗುತ್ತದೆ.

    ಹೊಸ ವರ್ಷದಲ್ಲಿ ಜೀವನಶೈಲಿಯನ್ನು ಸಂಪೂರ್ಣ ಬದಲಾಯಿಸುವ ಬದಲು, ಈ ಸಣ್ಣ ಆದರೆ ಪರಿಣಾಮಕಾರಿ ಹವ್ಯಾಸಗಳನ್ನು ಅಳವಡಿಸಿಕೊಂಡರೆ ಆರೋಗ್ಯಕರ ಬದುಕು ಸಾಧ್ಯವೆಂದು ತಜ್ಞರು ಸಲಹೆ ನೀಡುತ್ತಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading