Monday, March 30, 2026
spot_img
More
    spot_img
    HomeLatest newsಗಣೇಶ ಮೆರವಣಿಗೆ: ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬಂದ್, ಯಲಹಂಕಕ್ಕೆ ಹೋಗುವ ಮುನ್ನ ಗಮನಿಸಿ!

    ಗಣೇಶ ಮೆರವಣಿಗೆ: ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬಂದ್, ಯಲಹಂಕಕ್ಕೆ ಹೋಗುವ ಮುನ್ನ ಗಮನಿಸಿ!

    ಆಗಸ್ಟ್ 31 ರಂದು ಯಲಹಂಕ ನ್ಯೂಟೌನ್, ಸಿಂಗಾಪುರ, ಚಿಕ್ಕಬೆಟ್ಟಹಳ್ಳಿ, ದೊಡ್ಡಬೆಟ್ಟಹಳ್ಳಿ, ಮತ್ತು ವಿದ್ಯಾರಣ್ಯಪುರ ಪ್ರದೇಶಗಳಲ್ಲಿ ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಇದರಿಂದಾಗಿ ಈ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ವಾಹನಗಳ ಸುಗಮ ಸಂಚಾರಕ್ಕಾಗಿ ಬೆಳಿಗ್ಗೆ 9 ರಿಂದ ರಾತ್ರಿ 10 ಗಂಟೆಯವರೆಗೆ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

    ಸಂಚಾರ ನಿರ್ಬಂಧ:

    ಜಾಲಹಳ್ಳಿ, ಪೀಣ್ಯ, ಯಶವಂತಪುರ, ವಿಜಯನಗರ, ಕೆಂಗೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಯಲಹಂಕ ಕಡೆಗೆ ಸಾಗುವ ಎಲ್ಲಾ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.ಎಂ.ಎಸ್. ಪಾಳ್ಯ ಜೆಲ್ಲಿ ಮಿಷನ್ ಕ್ರಾಸ್ – ಜಿಕೆವಿಕೆ ಬ್ಯಾಕ್ ಗೇಟ್ ತಿರುಮಲ ಧಾಬಾ ಅತ್ತೂರು ಜಂಕ್ಷನ್ ಮದರ್ ಡೈರಿ ಜಂಕ್ಷನ್ ಮಾರ್ಗದಲ್ಲಿ ಬೆಳಿಗ್ಗೆ 9.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.

    ಪರ್ಯಾಯ ಮಾರ್ಗಗಳು

    ಜಾಲಹಳ್ಳಿ, ಪೀಣ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಯಲಹಂಕಕ್ಕೆ:
    ಗಂಗಮ್ಮ ವೃತ್ತದಲ್ಲಿ ಬಲ ತಿರುವು ಪಡೆದು ಬಿಇಎಲ್ ವೃತ್ತಕ್ಕೆ ಹೋಗಿ, ಅಲ್ಲಿ ಎಡ ತಿರುವು ಪಡೆದು ದೊಡ್ಡಬೊಮ್ಮಸಂದ್ರ ಕಮಾನು, ನಂಜಪ್ಪ ವೃತ್ತ, ತಿಂಡ್ಲು ಮುಖ್ಯ ರಸ್ತೆ, ಜಿಕೆವಿಕೆ ಡಬಲ್ ರಸ್ತೆಯಲ್ಲಿ ಎಡ ತಿರುವು ಪಡೆದು, ಜಿಕೆವಿಕೆ ಬ್ಯಾಕ್ ಗೇಟ್‌ ಕ್ರಾಸ್‌ ಮಾಡಬೇಕು. ನಂತರ ಉನ್ನಿಕೃಷ್ಣ ಮುಖ್ಯ ರಸ್ತೆ ಮೂಲಕ ಯಲಹಂಕ ತಲುಪಬಹುದು.

    ಯಶವಂತಪುರ, ವಿಜಯನಗರ, ಕೆಂಗೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಯಲಹಂಕಕ್ಕೆ:
    ಬಿಇಎಲ್ ವೃತ್ತದಲ್ಲಿ ಬಲ ತಿರುವು ಪಡೆದು ದೊಡ್ಡಬೊಮ್ಮಸಂದ್ರ ಕಮಾನು, ನಂಜಪ್ಪ ವೃತ್ತ, ತಿಂಡ್ಲು ಮುಖ್ಯ ರಸ್ತೆ, ಜಿಕೆವಿಕೆ ಡಬಲ್ ರಸ್ತೆ ಮಾರ್ಗದಲ್ಲಿ ಎಡ ತಿರುವು ಪಡೆದು, ಜಿಕೆವಿಕೆ ಬ್ಯಾಕ್ ಗೇಟ್‌ನಲ್ಲಿ ಬಲ ತಿರುವು ಪಡೆಯಿರಿ. ನಂತರ ಉನ್ನಿಕೃಷ್ಣ ಮುಖ್ಯ ರಸ್ತೆ ಮೂಲಕ ಯಲಹಂಕ ತಲುಪಿ.

    ಯಲಹಂಕದಿಂದ ಯಶವಂತಪುರ, ವಿಜಯನಗರ, ಕೆಂಗೇರಿ, ಜಾಲಹಳ್ಳಿ, ಪೀಣ್ಯ ಪ್ರದೇಶಗಳಿಗೆ:
    ಯಲಹಂಕ ಕಡೆಯಿಂದ ಬರುವಾಗ ಜಿಕೆವಿಕೆ ಹಿಂಭಾಗದ ಗೇಟ್‌ನಲ್ಲಿ ಜಿಕೆವಿಕೆ ಡಬಲ್ ರಸ್ತೆ, ತಿಂಡ್ಲು ಕ್ರಾಸ್ ಬಳಿ ಎಡ ತಿರುವು ಪಡೆದು ನಂಜಪ್ಪ ವೃತ್ತ ಮುಖ್ಯ ರಸ್ತೆ, ದೊಡ್ಡಬೊಮ್ಮಸಂದ್ರ ಕಮಾನು ಮತ್ತು ಬಿಇಎಲ್ ವೃತ್ತದ ಮೂಲಕ ನಿಮ್ಮ ಗಮ್ಯಸ್ಥಾನ ತಲುಪಬಹುದು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬಿಗ್ ನ್ಯೂಸ್! ಬೆಂಗಳೂರು ಕರಗ ಉತ್ಸವಕ್ಕೆ ಸಜ್ಜು—1000ಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆ, ₹1.70 ಕೋಟಿ ವೆಚ್ಚ!

    “ಬೆಂಗಳೂರು ಕರಗ ಉತ್ಸವ 2026” ಮತ್ತೆ ನಗರಕ್ಕೆ ಸಾಂಸ್ಕೃತಿಕ ಸಂಭ್ರಮ ತರಲು ಸಜ್ಜಾಗಿದೆ! ಏಪ್ರಿಲ್ 1ರಂದು ನಡೆಯಲಿರುವ ಈ ಐತಿಹಾಸಿಕ ಉತ್ಸವಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ಭದ್ರತೆ ಮತ್ತು ವ್ಯವಸ್ಥೆಗಾಗಿ ಸರ್ಕಾರದಿಂದ ವಿಶೇಷ...

    ಬ್ರೇಕಿಂಗ್ರಾ! ಮನವಮಿ ಹಬ್ಬಕ್ಕೆ ಮಾರುಕಟ್ಟೆ ಬಂದ್ ಆಗುತ್ತಾ? ಹೂಡಿಕೆದಾರರಿಗೆ ಕ್ಲಿಯರ್ ಮಾಹಿತಿ!

    “ಸ್ಟಾಕ್ ಮಾರ್ಕೆಟ್ ಹಾಲಿಡೇ 2026” ಇದೀಗ ಹೂಡಿಕೆದಾರರಲ್ಲಿ ದೊಡ್ಡ ಗೊಂದಲ ಮೂಡಿಸಿದೆ. ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಅಥವಾ ಶುಕ್ರವಾರ ಷೇರು ಮಾರುಕಟ್ಟೆ ಬಂದ್ ಆಗುತ್ತದೆಯಾ? ಎಂಬ ಪ್ರಶ್ನೆ ಟ್ರೇಡರ್‌ಗಳ ನಡುವೆ ಭಾರೀ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading