Thursday, March 26, 2026
spot_img
More
    spot_img
    HomeTop StoryIPL 2025 | ಔಟ್‌ ಇದ್ದರೂ ರೋಹಿತ್ ಶರ್ಮಾ ನಾಟ್‌ಔಟ್:‌ ಮುಂಬೈ ಫಿಕ್ಸಿಂಗ್ ಇಂಡಿಯನ್ಸ್‌ ಎಂದ...

    IPL 2025 | ಔಟ್‌ ಇದ್ದರೂ ರೋಹಿತ್ ಶರ್ಮಾ ನಾಟ್‌ಔಟ್:‌ ಮುಂಬೈ ಫಿಕ್ಸಿಂಗ್ ಇಂಡಿಯನ್ಸ್‌ ಎಂದ ನೆಟ್ಟಿಗರು; ವಿಡಿಯೊ

    ಜೈಪುರ: ನಿನ್ನೆ ( ಮೇ 1 ) ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 50ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 100 ರನ್‌ಗಳ ಬೃಹತ್‌ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

    ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ ಟಾಪರ್‌ ಆರ್ಡರ್‌ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 217 ರನ್‌ ಕಲೆಹಾಕಿ ರಾಜಸ್ಥಾನ್‌ ರಾಯಲ್ಸ್‌ಗೆ 218 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ರಾಜಸ್ಥಾನ್‌ ರಾಯಲ್ಸ್‌ 16.1 ಓವರ್‌ಗಳಲ್ಲಿ 117 ರನ್‌ಗೆ ಆಲ್‌ಔಟ್‌ ಆಯಿತು.

    ಈ ಮೂಲಕ ಅತತ ಆರನೇ ಗೆಲುವನ್ನು ಕಂಡ ಮುಂಬೈ ಇಂಡಿಯನ್ಸ್‌ ಪ್ಲೇಆಫ್‌ ಪ್ರವೇಶಿಸುವ ಘಟ್ಟ ತಲುಪಿದೆ. ಇನ್ನು ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ನ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳೂ ಸಹ ಅದ್ಭುತ ಪ್ರದರ್ಶನ ನೀಡಿದವು.

    ಬ್ಯಾಟಿಂಗ್‌ನಲ್ಲಿ ತಂಡದ ಟಾಪ್‌ ಆರ್ಡರ್‌ ಅಬ್ಬರಿಸಿತು. ಮುಂಬೈ ಇಂಡಿಯನ್ಸ್‌ ಪರ ರಿಕಲ್ಟನ್‌ 61 (38) ಹಾಗೂ ರೋಹಿತ್‌ ಶರ್ಮಾ 53 (26) ರನ್‌ ಕಲೆಹಾಕಿ ಅಬ್ಬರದ ಆರಂಭ ನೀಡಿದರು. ಬಳಿಕ ಮೂರನೇ ವಿಕೆಟ್‌ಗೆ ಜತೆಯಾದ ನಾಯಕ ಹಾರ್ದಿಕ್‌ ಪಾಂಡ್ಯ ಹಾಗೂ ಸೂರ್ಯಕುಮಾರ್‌ ಯಾದವ್‌ ತಲಾ 208.70 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದರು. ಸೂರ್ಯಕುಮಾರ್‌ ಯಾದವ್‌ ಅಜೇಯ 48 (23) ಹಾಗೂ ಹಾರ್ದಿಕ್‌ ಪಾಂಡ್ಯ ಅಜೇಯ 48 (23) ರನ್‌ ಬಾರಿಸಿದರು.

    ಹೀಗೆ ಅಬ್ಬರದ ಆರಂಭ ನೀಡಿದ ರೋಹಿತ್‌ ಶರ್ಮಾ ಫಜಲ್‌ಹಕ್‌ ಫಾರೂಕಿ ಎಸೆದ ಎರಡನೇ ಓವರ್‌ನ ಐದನೇ ಎಸೆತದಲ್ಲಿ ಅಂಪೈರ್‌ನಿಂದ ಔಟ್‌ ಎಂಬ ತೀರ್ಮಾನ ಪಡೆದಿದ್ದರು. ಎಲ್‌ಬಿಡಬ್ಲ್ಯೂಗೆ ಮನವಿ ಮಾಡಿದಾಗ ಅಂಪೈರ್‌ ಔಟ್‌ ಎಂಬ ತೀರ್ಪನ್ನು ನೀಡಿದ್ದರು. ಆದರೆ ಈ ನಿರ್ಣಯಕ್ಕೆ ಸವಾಲೆಸೆದ ರೋಹಿತ್‌ ಡಿಆರ್‌ಎಸ್ ತೆಗೆದುಕೊಂಡರು.

    ಆದರೆ ಡಿಆರ್‌ಎಸ್‌ ಮುಗಿದ ಒಂದು ಸೆಕೆಂಡ್‌ ಬಳಿಕ ರೋಹಿತ್‌ ಶರ್ಮಾ ರಿವ್ಯೂ ತೆಗೆದುಕೊಂಡರು. ನಿಯಮದ ಪ್ರಕಾರ ಸಮಯ ಮುಗಿದ ಮೇಲೆ ರಿವ್ಯೂ ತೆಗೆದುಕೊಂಡರೆ ಅದನ್ನು ಅಂಪೈರ್‌ ನಿರಾಕರಿಸಬೇಕು. ಆದರೆ ನಿನ್ನೆಯ ಪಂದ್ಯದಲ್ಲಿ ಸಮಯ ಮುಗಿದ ಬಳಿಕ ರೋಹಿತ್‌ ರಿವ್ಯೂ ಕೇಳಿದರೂ ಅಂಪೈರ್‌ಗಳು ಅದನ್ನು ಪರಿಗಣಿಸಿದ್ದಾರೆ. ಈ ಘಟನೆ ಸದ್ಯ ಕ್ರಿಕೆಟ್‌ ಪ್ರೇಮಿಗಳನ್ನು ಹಾಗೂ ನೆಟ್ಟಿಗರನ್ನು ಕೆರಳಿಸಿದ್ದು ಫಿಕ್ಸಿಂಗ್‌ ಎಂದು ಆರೋಪಿಸಿದ್ದಾರೆ. ಮುಂಬೈ ಅಂಪೈರ್‌ ಇಂಡಿಯನ್ಸ್, ಮುಂಬೈ ಅಂಪೈರ್‌ ಇಂಡಿಯನ್ಸ್‌ ಎಂದು ಟ್ರೋಲ್‌ ಮಾಡಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್ರಾ! ಮನವಮಿ ಹಬ್ಬಕ್ಕೆ ಮಾರುಕಟ್ಟೆ ಬಂದ್ ಆಗುತ್ತಾ? ಹೂಡಿಕೆದಾರರಿಗೆ ಕ್ಲಿಯರ್ ಮಾಹಿತಿ!

    “ಸ್ಟಾಕ್ ಮಾರ್ಕೆಟ್ ಹಾಲಿಡೇ 2026” ಇದೀಗ ಹೂಡಿಕೆದಾರರಲ್ಲಿ ದೊಡ್ಡ ಗೊಂದಲ ಮೂಡಿಸಿದೆ. ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಅಥವಾ ಶುಕ್ರವಾರ ಷೇರು ಮಾರುಕಟ್ಟೆ ಬಂದ್ ಆಗುತ್ತದೆಯಾ? ಎಂಬ ಪ್ರಶ್ನೆ ಟ್ರೇಡರ್‌ಗಳ ನಡುವೆ ಭಾರೀ...

    ಬ್ರೇಕಿಂಗ್! ಮಾರುಕಟ್ಟೆ ರಾಕೆಟ್—ಸೆನ್ಸೆಕ್ಸ್ 1300 ಪಾಯಿಂಟ್ ಜಿಗಿತ! ರೂಪಾಯಿ ಕುಸಿತ, ಚಿನ್ನ ಏರಿಕೆ… ಏನಿದು ಮಿಶ್ರ ಸಿಗ್ನಲ್?

    “ಸ್ಟಾಕ್ ಮಾರ್ಕೆಟ್ 24 ಮಾರ್ಚ್ 2026” ಹೂಡಿಕೆದಾರರಿಗೆ ಒಂದೇ ದಿನದಲ್ಲಿ ರೋಲರ್ ಕೋಸ್ಟರ್ ಅನುಭವ ನೀಡಿದೆ! ಒಂದೆಡೆ ಷೇರು ಮಾರುಕಟ್ಟೆ ಭರ್ಜರಿ ಏರಿಕೆ ಕಂಡಿದ್ದರೆ, ಇನ್ನೊಂದೆಡೆ ರೂಪಾಯಿ ಕುಸಿತ ಮತ್ತು ಚಿನ್ನದ ಬೆಲೆ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading