ಬರ್ಮಿಂಗ್‌ಹ್ಯಾಮ್: ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಂದು ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ತುಸು ಚೇತರಿಕೆ ಕಂಡಿದೆ.
ನಿನ್ನೆ ( ಜುಲೈ 3 ) ಬೆನ್ ಡಕೆಟ್ (0), ಜಾಕ್ ಕ್ರಾವ್ಲೆ (19) ಹಾಗೂ ಓಲಿ ಪೊಪ್ (0) ಅವರ ವಿಕೆಟ್‌ಗಳನ್ನು ಕಳೆದುಕೊಂಡು ಕೆಟ್ಟ ಆರಂಭ ಮಾಡಿದ್ದ ಇಂಗ್ಲೆಂಡ್ ಇಂದು ಜೋ ರೂಟ್ (22) ನಾಯಕ ಬೆನ್ ಸ್ಟೋಕ್ಸ್ (0) ವಿಕೆಟ್ ಕಳೆದುಕೊಳ್ಳುವ ಮೂಲಕ ದಿನದಾಟದ ಆರಂಭದಲ್ಲೇ ಮುಗ್ಗರಿಸಿತು. ಹೀಗೆ 84 ರನ್‌ಗೆ 5 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್‌ಗೆ ಹ್ಯಾರಿ ಬ್ರೂಕ್ ಹಾಗೂ ಜೆಮಿ ಸ್ಮಿತ್ ಆಸರೆಯಾಗಿದ್ದಾರೆ.
ಇಬ್ಬರೂ ಸಹ ಶತಕ ಪೂರೈಸಿದ್ದು, ಅತ್ಯಮೂಲ್ಯ 200 ರನ್‌ಗಳ ಜತೆಯಾಟವಾಡಿದ್ದಾರೆ.
ಭಾರತದ ಪರ ಈವರೆಗೆ ಮೊಹಮ್ಮದ್ ಸಿರಾಜ್ 3 ವಿಕೆಟ್ ಹಾಗೂ ಆಕಾಶ್ ದೀಪ್ 2 ವಿಕೆಟ್ ಪಡೆದರು.
ಅಪ್ಪು ನೆನೆದು ನಂದಿನಿ ಬ್ರಾಂಡ್‌ಗೆ ಪ್ರೋತ್ಸಾಹಿಸಿ ಎಂದು ಮನವಿ ಮಾಡಿಕೊಂಡ ಡಿಕೆ ಸುರೇಶ್
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗೆ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


