ಐಪಿಎಲ್ ಪಂದ್ಯವನ್ನು ಮೈದಾನದಲ್ಲಿ ವೀಕ್ಷಿಸುವುದು ಇದೀಗ ಕ್ರಿಕೆಟ್ ಅಭಿಮಾನಿಗಳ ಖರ್ಚನ್ನು ಹೆಚ್ಚಿಸಲಿದೆ. ದೇಶದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ಟಿಕೆಟ್‌ಗಳಿಗೆ ಜಿಎಸ್‌ಟಿ ದರವನ್ನು ಶೇಕಡಾ 28ರಿಂದ ನೇರವಾಗಿ ಶೇಕಡಾ 40ಕ್ಕೆ ಏರಿಸಲಾಗಿದೆ.
ಈ ಬೃಹತ್ ತೆರಿಗೆ ಏರಿಕೆಯಿಂದಾಗಿ ಐಪಿಎಲ್ ಟಿಕೆಟ್‌ಗಳು ಈಗ ಕ್ಯಾಸಿನೊ, ರೇಸ್ ಕ್ಲಬ್ ಹಾಗೂ ಐಷಾರಾಮಿ ವಸ್ತುಗಳೊಂದಿಗೆ ಅತಿ ಹೆಚ್ಚು ಜಿಎಸ್‌ಟಿ ಸ್ಲ್ಯಾಬ್‌ಗೆ ಸೇರಿವೆ. ಪರಿಣಾಮವಾಗಿ, ಭಾರತದಾದ್ಯಂತ ಕ್ರಿಕೆಟ್ ಪ್ರೇಮಿಗಳು ಹೆಚ್ಚಿನ ದರ ಕಟ್ಟಬೇಕಾದ ಪರಿಸ್ಥಿತಿ ಎದುರಿಸಬೇಕಾಗಿದೆ.ಹೊಸ ಜಿಎಸ್‌ಟಿ ದರವು ಈ ತಿಂಗಳ ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿದೆ.
ನಿಮ್ಮ ಟಿಕೆಟ್ ಬೆಲೆ ಎಷ್ಟು ಏರಿಕೆಯಾಗುತ್ತದೆ?
ಹೊಸ ನಿಯಮದ ಪ್ರಕಾರ, ಪ್ರತಿ ₹1000 ಖರ್ಚಿಗೆ ₹120 ಹೆಚ್ಚು ಪಾವತಿಸಬೇಕಾಗುತ್ತದೆ.
₹500 ಟಿಕೆಟ್‌ನ ಬೆಲೆ ಈಗ ₹640 ರಿಂದ ₹700 ಕ್ಕೆ ಏರಿಕೆಯಾಗಲಿದೆ.
₹1,000 ಟಿಕೆಟ್ ಬೆಲೆ ₹1,280 ರಿಂದ ₹1,400 ಆಗಲಿದೆ.
₹2,000 ಟಿಕೆಟ್‌ನ ಬೆಲೆ ₹2,560 ರಿಂದ ₹2,800 ಕ್ಕೆ ಹೆಚ್ಚಾಗಲಿದೆ.
ಈ ಹೊಸ ನಿಯಮವು ಕೇವಲ ಐಪಿಎಲ್ ಮತ್ತು ಕೆಲವು ಪ್ರೀಮಿಯಂ ಕ್ರೀಡಾಕೂಟಗಳಿಗೆ ಮಾತ್ರ ಅನ್ವಯಿಸುತ್ತದೆ. ಸಾಮಾನ್ಯ ಕ್ರಿಕೆಟ್ ಪಂದ್ಯಗಳಿಗೆ ಶೇಕಡ 18ರಷ್ಟು ಜಿಎಸ್‌ಟಿ ಮುಂದುವರೆಯಲಿದೆ. ಕ್ರೀಡಾ ಮನರಂಜನೆಯನ್ನು ಐಷಾರಾಮಿ ಎಂದು ಪರಿಗಣಿಸುವ ಈ ಹೊಸ ನೀತಿಯು ದೇಶದಾದ್ಯಂತ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ನೇರವಾಗಿ ವೀಕ್ಷಿಸುವವರ ಮೇಲೆ ಹೆಚ್ಚು ಪರಿಣಾಮ ಬೀರಲಿದೆ.
ಬ್ಯಾಂಕ್ ಹುದ್ದೆ ಆಕಾಂಕ್ಷಿಗಳಿಗೆ ಬಂಪರ್: 13,217 IBPS RRB ಹುದ್ದೆಗಳಿಗೆ ಅರ್ಜಿ ಆಹ್ವಾನ!
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


