ಮೈಸೂರು: ಸಾಂಸ್ಕೃತಿಕ ನಗರಿಯ ಘಟಿಕೋತ್ಸವ ಭವನದಲ್ಲಿ ನಡೆದ 2018 ಹಾಗೂ 2019ನೇ ಸಾಲಿನ ಕನ್ನಡ ಚಲನಚಿತ್ರಗಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಈ ವೇಳೆ 2018 ಹಾಗೂ 2019ರಲ್ಲಿ ತೆರೆಗೆ ಬಂದ ಚಿತ್ರಗಳು ಹಾಗೂ ಆ ವರ್ಷಗಳಲ್ಲಿ ಸೆನ್ಸಾರ್ ಆದ ಚಿತ್ರಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ನಟರು ತೆರೆ ಮೇಲೆ ಹೇಗಿರುತ್ತಾರೋ ಅದೇ ರೀತಿ ನಿಜ ಜೀನವದಲ್ಲೂ ಸಹ ಬದುಕಬೇಕು ಎಂದು ಹೇಳಿಕೆಯನ್ನು ನೀಡಿದರು. ಈ ಹೇಳಿಕೆ ಸದ್ಯ ಭಾರೀ ಚರ್ಚೆಗಳನ್ನು ಹುಟ್ಟುಹಾಕಿದ್ದು, ತೆರೆ ಮೇಲೆ ಒಳ್ಳೆಯ ಪಾತ್ರಗಳನ್ನು ಮಾಡಿ ಯುವ ಜನತೆಗೆ ಸಂದೇಶ ಕೊಟ್ಟು ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರುವ ದರ್ಶನ್‌ಗೆ ಕೊಟ್ಟ ಕೌಂಟರ್ ಇರಬಹುದಾ ಎಂಬ ಪ್ರಶ್ನೆ ಎದ್ದಿದೆ.
ʼಚಿತ್ರಗಳನ್ನು ಮಾಡಿದರೆ ಸಮಾಜದಲ್ಲಿ ಬದಲಾವಣೆಯಾಗುವಂತಹ ಚಿತ್ರಗಳನ್ನು ಮಾಡಬೇಕು. ಈ ಹಿಂದೆಯೂ ಸಹ ಚಿತ್ರಗಳಿಂದ ಸಮಾಜದಲ್ಲಿ ಬಹಳಷ್ಟು ಬದಲಾವಣೆಯಾಗಿರುವುದನ್ನು ಕಂಡಿದ್ದೇವೆ, ಸಿನಿಮಾ ನೋಡಿ ಪರಿವರ್ತನೆಯಾದ ಬಹಳಷ್ಟು ಜನರನ್ನು ನೋಡಿದ್ದೇವೆ. ಹೀರೊಗಳ ಹಾಗೆ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳುವವರನ್ನೂ ಸಹ ನೋಡಿದ್ದೇವೆ. ಈಗ ಚಿತ್ರ ನೋಡಿ ಬದಲಾವಣೆಯಾಗುವಂಥದ್ದು ಬಹಳ ಕಡಿಮೆಯಾಗಿದೆʼ ಎಂದು ಸಿದ್ದರಾಮಯ್ಯ ತಿಳಿಸಿದರು.
ಮುಂದುವರಿದು ಮಾತನಾಡಿದ ಮುಖ್ಯಮಂತ್ರಿ ʼಸಿನಿಮಾ ತಾರೆಯರೆಂದರೆ ಜನರಿಗೆ ಬಹಳ ಗೌರವ. ಹಾಗೆಯೇ ಅವರನ್ನು ಅನುಸರಿಸುವುದೂ ಸಹ ಜಾಸ್ತಿ ಇರುತ್ತದೆ. ಹಾಗಾಗಿ ನೀವು ತೆರೆ ಮೇಲೆ ಹೇಗೆ ನಟಿಸುತ್ತೀರೋ ಹಾಗೆಯೇ ನಿಜ ಜೀವನದಲ್ಲಿಯೂ ಸಹ ಇದ್ದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯʼ ಎಂದು ಹೇಳಿದರು. ಇದು ದರ್ಶನ್‌ಗೆ ಪರೋಕ್ಷವಾಗಿ ಬುದ್ದಿವಾದ ಹೇಳಿದಂತಿತ್ತು.
ಅಲ್ಲದೇ ʼರಾಜ್‌ಕುಮಾರ್ ಅವರು ಸಿನಿಮಾದಲ್ಲಿ ಹೇಗೆ ಇರುತ್ತಾ ಇದ್ದರೋ ಅದೇ ರೀತಿ ನಿಜ ಜೀವನದಲ್ಲೂ ಸಹ ಅಳವಡಿಸಿಕೊಳ್ಳುವ ಕೆಲಸವನ್ನು ಮಾಡುತ್ತಾ ಇದ್ದರು. ಅದಕ್ಕಾಗಿಯೇ ಅವರನ್ನು ಇಷ್ಟು ವರ್ಷಗಳಾದರೂ ಸಹ ನೆನಪಿಸಿಕೊಳ್ಳುವ ಕೆಲಸವನ್ನು ಜನರು ಮಾಡುತ್ತಾರೆ. ಅವರು ಮಾಡಿರುವ ಸಿನಿಮಾಗಳು ಸಮಾಜದಲ್ಲಿ ಬದಲಾವಣೆ ತರುವಂತಹ ಕೆಲಸ ಮಾಡಿವೆʼ ಎಂದರು.
ಪ್ಯಾನ್ ಕಾರ್ಡ್ ಬಳಕೆದಾರರಿಗೆ ಅಲರ್ಟ್: ಆಧಾರ್ ಲಿಂಕ್ ಕಡ್ಡಾಯ; ಡಿಸೆಂಬರ್ 31 ರೊಳಗೆ ಮಾಡದಿದ್ದರೆ ಕಾರ್ಡ್ ರದ್ದು!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


