ರಾಜ್ಯದಲ್ಲಿ ಕನ್ನಡ ಭಾಷೆಯ ವಿಚಾರವಾಗಿ ಹಲವಾರು ಜಗಳಗಳು ನಡೆದುಹೋಗಿವೆ. ಕೆಲಸ ಹರಸಿ ಬರುವ ವಲಸಿಗರು ಹತ್ತು, ಹದಿನೈದು ವರ್ಷಗಳಾದರೂ ಎರಡಕ್ಷರ ಕನ್ನಡ ಕಲಿಯದೇ ಸ್ಥಳೀಯರ ಜೊತೆ ಹಿಂದಿಯಲ್ಲಿ ಸಂವಹಿಸಿ ವಾಗ್ವಾದ ನಡೆದ ಹಲವಾರು ಉದಾಹರಣೆಗಳಿವೆ.
ಆದರೆ ಅಂತಹ ವಲಸಿಗರ ಮಧ್ಯೆ ಕನ್ನಡ ಕಲಿತು ಮಾತನಾಡುವ ಬಿಹಾರ ಮೂಲದ ಯುಟ್ಯೂಬರ್ ಸಹ ಇದ್ದಾರೆ. ಹಾಗೆಯೇ ವಿದೇಶಿ ಮಹಿಳೆಯೊಬ್ಬರು ಆಟೊ ಡ್ರೈವರ್ ಜತೆ ಕನ್ನಡದಲ್ಲಿ ಮಾತನಾಡಿದ್ದ ವಿಡಿಯೊ ಸಹ ವೈರಲ್ ಆಗಿತ್ತು.
ಇಂತಹ ಚಂದದ ಉದಾಹರಣೆಗೆ ಈಗ ರಷ್ಯಾ ಮೂಲದ ಪುಟ್ಟ ಬಾಲಕಿ ಸೇರ್ಪಡೆಗೊಂಡಿದ್ದಾಳೆ. ಶಾಲೆಯಲ್ಲಿ ತನ್ನ ಸಹಪಾಠಿ ಜತೆ ಸೇರಿ ಮೂರು ವರ್ಷಗಳಲ್ಲಿಯೇ ಕನ್ನಡದ ಹಾಡನ್ನು ಕಲಿತು ಅದನ್ನು ಅಚ್ಚುಕಟ್ಟಾಗಿ ಹಾಡಿದ್ದಾಳೆ.
ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪುಟ್ಟ ಬಾಲಕಿಗಿರುವ ಕನಿಷ್ಟ ಜ್ಞಾನ ಹಣ ಸಂಪಾದಿಸಲು ಬಂದಿರುವ ಹಿರಿಯರಿಗಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


