Saturday, March 28, 2026
spot_img
More
    spot_img
    HomeSportsCricketಗಿಲ್ ಇಲ್ಲದ್ದಕ್ಕೆ ಸೋತೆವು, ಕ್ರಿಕೆಟ್ ಗೊತ್ತಿಲ್ಲದವರೆಲ್ಲ ನನಗೆ ಬೈದ್ರು; ಐಪಿಎಲ್ ತಂಡದ ಓನರ್‌ ವಿರುದ್ಧ ಗಂಭೀರ್...

    ಗಿಲ್ ಇಲ್ಲದ್ದಕ್ಕೆ ಸೋತೆವು, ಕ್ರಿಕೆಟ್ ಗೊತ್ತಿಲ್ಲದವರೆಲ್ಲ ನನಗೆ ಬೈದ್ರು; ಐಪಿಎಲ್ ತಂಡದ ಓನರ್‌ ವಿರುದ್ಧ ಗಂಭೀರ್ ಕಿಡಿ

    ವಿಶಾಖಪಟ್ಟಣದಲ್ಲಿ ನಿನ್ನೆ ( ಡಿಸೆಂಬರ್ 6 ) ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಸರಣಿಯನ್ನು 2 – 1 ಅಂತರದಿಂದ ವಶಪಡಿಸಿಕೊಂಡಿತು.

    ಆದರೆ ಟೀಮ್ ಇಂಡಿಯಾ ಮೊದಲಿಗೆ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡೂ ಪಂದ್ಯಗಳನ್ನು ಸೋತು ಬರೋಬ್ಬರಿ 25 ವರ್ಷಗಳ ಬಳಿಕ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯನ್ನು ಸೋತ ಮುಖಭಂಗ ಅನುಭವಿಸಿತ್ತು

    ಈ ಸೋಲಿಗೆ ಕ್ರಿಕೆಟ್ ಪರಿಣಿತರು ಹಾಗೂ ಅಭಿಮಾನಿಗಳು ಸೇರಿದಂತೆ ಎಲ್ಲರೂ ದೊಡ್ಡ ಮಟ್ಟದಲ್ಲಿ ಟೀಕೆ ಮಾಡಿದ್ದರು. ಅದರಲ್ಲೂ ಕೋಚ್ ಗೌತಮ್ ಗಂಭೀರ್ ಅವರನ್ನು ಅತಿ ಹೀನಾಯವಾಗಿ ಟ್ರೋಲ್ ಮಾಡಲಾಗಿತ್ತು. ಟೆಸ್ಟ್‌ನಲ್ಲಿ ಅನುಭವ ಇರುವ ಆಟಗಾರರನ್ನು ಬಿಟ್ಟು ಅನುಭವ ಇಲ್ಲದ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿದ್ದೇ ಈ ಸೋಲಿಗೆ ಕಾರಣ ಎಂದು ಕಿಡಿಕಾರಿದ್ದರು.

    ಇದೀಗ ಏಕದಿನ ಸರಣಿ ಗೆದ್ದ ಬಳಿಕ ಆ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಗಂಭೀರ್ ಕ್ರಿಕೆಟ್‌ ಗೊತ್ತಿಲ್ಲದವರೆಲ್ಲ ಟ್ರೋಲ್ ಮಾಡಿದರು ಎಂದು ಕೌಂಟರ್ ಕೊಟ್ಟಿದ್ದಾರೆ.

    ನಾವು ನಮ್ಮ ನಾಯಕನಿಲ್ಲದೇ ಆಟವನ್ನಾಡಿದೆವು. ಆತ ಎರಡೂ ಇನ್ನಿಂಗ್ಸ್ ಆಡಲಿಲ್ಲ. ಸೋಲಿಗೆ ಅದೇ ಕಾರಣವಾಯಿತು. 7 ಪಂದ್ಯಗಳಲ್ಲಿ ಸಾವಿರಕ್ಕೂ ಹೆಚ್ಚು ರನ್ ಬಾರಿಸಿದ ಆಟಗಾರನಿಲ್ಲದೇ ಪಂದ್ಯ ಆಡಿದ್ದರ ಪರಿಣಾಮವದು ಎಂದು ಗಿಲ್ ಇಲ್ಲದೇ ಪಂದ್ಯವಾಡಿದ್ದು ಸೋಲಿಗೆ ಕಾರಣ ಎಂದು ಗಂಭೀರ್ ತಿಳಿಸಿದರು.

    ಇನ್ನು ಕೋಚ್ ಬದಲಾವಣೆ ಮಾಡಬೇಕು ಎಂದು ಟ್ವೀಟ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ನ ಸಹ ಮಾಲೀಕ ಪಾರ್ಥ್ ಜಿಂದಾಲ್ ಬಗ್ಗೆ ಹೆಸರೇಳದೇ ಪ್ರತಿಕ್ರಿಯಿಸಿದ ಗಂಭೀರ್ ಅನೇಕ ಮಂದಿ ಹಲವು ರೀತಿ ಕಾಮೆಂಟ್ ಮಾಡಿದರು, ಐಪಿಎಲ್ ತಂಡವೊಂದರ ಕೋಚ್ ತಮ್ಮ ಪರಿಮಿತಿ ಮೀರಿ ಕಾಮೆಂಟ್ ಮಾಡಿ ಕೋಚ್ ಬದಲಾವಣೆಯಾಗಬೇಕು ಎಂದಿದ್ದರು ಎಂದು ಟೀಕಿಸಿದ್ದಾರೆ.

    ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ಪಾರ್ಥ್ ಜಿಂದಾಲ್ ಎದುರಾಳಿ ತಂಡದ ಹತ್ತಿರಕ್ಕೂ ಬರದೇ ತವರಿನಲ್ಲಿ ಸೋತಿದೆ. ಟೆಸ್ಟ್ ಪಂದ್ಯಗಳ ಅನುಭವ ಇರದ ಆಟಗಾರರನ್ನು ಕೈಬಿಟ್ಟರೆ ಹೀಗೆಯೇ ಆಗುವುದು. ತಂಡ ಎಲ್ಲಿಯೂ ಟೆಸ್ಟ್ ಪಂದ್ಯವನ್ನು ಸಮರ್ಥವಾಗಿ ಆಡಲೇ ಇಲ್ಲ. ಹೀಗಾಗಿ ಇದು ಕೋಚ್ ಬದಲಾಯಿಸಬೇಕಾದ ಸಮಯ ಎಂದು ಬರೆದುಕೊಂಡಿದ್ದರು.

    ಏಕದಿನ ರ‍್ಯಾಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿರುವ ಕೊಹ್ಲಿ ನಂಬರ್ 1 ಆಗಲು ಇಂದಿನ ಪಂದ್ಯದಲ್ಲಿ ಇಷ್ಟು ರನ್ ಬಾರಿಸಲೇಬೇಕಿತ್ತು


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್ರಾ! ಮನವಮಿ ಹಬ್ಬಕ್ಕೆ ಮಾರುಕಟ್ಟೆ ಬಂದ್ ಆಗುತ್ತಾ? ಹೂಡಿಕೆದಾರರಿಗೆ ಕ್ಲಿಯರ್ ಮಾಹಿತಿ!

    “ಸ್ಟಾಕ್ ಮಾರ್ಕೆಟ್ ಹಾಲಿಡೇ 2026” ಇದೀಗ ಹೂಡಿಕೆದಾರರಲ್ಲಿ ದೊಡ್ಡ ಗೊಂದಲ ಮೂಡಿಸಿದೆ. ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಅಥವಾ ಶುಕ್ರವಾರ ಷೇರು ಮಾರುಕಟ್ಟೆ ಬಂದ್ ಆಗುತ್ತದೆಯಾ? ಎಂಬ ಪ್ರಶ್ನೆ ಟ್ರೇಡರ್‌ಗಳ ನಡುವೆ ಭಾರೀ...

    ಬ್ರೇಕಿಂಗ್! ಮಾರುಕಟ್ಟೆ ರಾಕೆಟ್—ಸೆನ್ಸೆಕ್ಸ್ 1300 ಪಾಯಿಂಟ್ ಜಿಗಿತ! ರೂಪಾಯಿ ಕುಸಿತ, ಚಿನ್ನ ಏರಿಕೆ… ಏನಿದು ಮಿಶ್ರ ಸಿಗ್ನಲ್?

    “ಸ್ಟಾಕ್ ಮಾರ್ಕೆಟ್ 24 ಮಾರ್ಚ್ 2026” ಹೂಡಿಕೆದಾರರಿಗೆ ಒಂದೇ ದಿನದಲ್ಲಿ ರೋಲರ್ ಕೋಸ್ಟರ್ ಅನುಭವ ನೀಡಿದೆ! ಒಂದೆಡೆ ಷೇರು ಮಾರುಕಟ್ಟೆ ಭರ್ಜರಿ ಏರಿಕೆ ಕಂಡಿದ್ದರೆ, ಇನ್ನೊಂದೆಡೆ ರೂಪಾಯಿ ಕುಸಿತ ಮತ್ತು ಚಿನ್ನದ ಬೆಲೆ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading