ನ್ಯೂ ಚಂಡೀಗಢ್: ನಿನ್ನೆ ( ಏಪ್ರಿಲ್ 8 ) ಮುಲ್ಲಾನ್‌ಪುರ್ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಪಂಜಾಬ್ ಕಿಂಗ್ಸ್ 18 ರನ್‌ಗಳ ಗೆಲುವನ್ನು ದಾಖಲಿಸಿದೆ. ಈ ಸೋಲಿನ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಲ್ಲಿ ನಾಲ್ಕನೇ ಸೋಲನ್ನು ಕಂಡಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಪ್ರಿಯಾಂಶ್ ಆರ್ಯ ಶತಕ, ಶಶಾಂಕ್ ಸಿಂಗ್ ಹಾಗೂ ಮಾರ್ಕೊ ಯಾನ್‌ಸೆನ್ ಅಬ್ಬರದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ದಾಖಲಿಸಿ ಚೆನ್ನೈ ಸೂಪರ್ ಕಿಂಗ್ಸ್‌ಗೆ 220 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 201 ರನ್‌ಗಳನ್ನು ಕಲೆಹಾಕಿತು.
ಇನ್ನು ಕಳೆದ ಪಂದ್ಯಗಳಲ್ಲಿ ಸಾಲು ಸಾಲು ವಿಫಲತೆ ಕಂಡಿದ್ದ ಎಂಎಸ್ ಧೋನಿ ಈ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಪಂದ್ಯ ಫಿನಿಶ್ ಮಾಡಲು ಯತ್ನಿಸಿ ಸಫಲರಾಗದೇ 12 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 27 ರನ್ ಬಾರಿಸಿ ಅಂತಿಮವಾಗಿ 6 ಎಸೆತಗಳಲ್ಲಿ ಗೆಲ್ಲಲು 28 ರನ್ ಬೇಕಿದ್ದಾಗ ಯಶ್ ಠಾಕೂರ್ ಎಸೆದ ಕೊನೆಯ ಓವರ್‌ನ ಮೊದಲ ಎಸೆತಕ್ಕೆ ವಿಕೆಟ್ ಒಪ್ಪಿಸಿದರು.
ಲಾಕಿ ಫರ್ಗ್ಯುಸನ್ ಎಸೆದ 18ನೇ ಓವರ್‌ನ ಅಂತಿಮ ಎಸೆತ ಫುಲ್ ಟಾಸ್ ಎಸೆತವಾಗಿತ್ತು. ಅಂಪೈರ್ ಅದನ್ನು ನೋಬಾಲ್ ಎಂದು ತೀರ್ಪು ನೀಡಿದ್ದರು. ಧೋನಿ ಆ ಎಸೆತಕ್ಕೆ ಸಿಕ್ಸರ್ ಬಾರಿಸಿದರು. ಆದರೆ ಇದು ನೋ ಬಾಲ್ ಅಲ್ಲ ಎಂದು ಥರ್ಡ್ ಅಂಪೈರ್ ನಿರ್ಣಯವನ್ನು ನೀಡಿದರು. ಈ ವೇಳೆ ಹೈಟ್ ನೋ ಬಾಲ್ ಚೆಕ್ ಮಾಡಲು ಧೋನಿ ನಡುವಿನ ಎತ್ತರದ ಜೊತೆ ಹೋಲಿಕೆ ಮಾಡಲಾಯಿತು.
ಧೋನಿ ನಡು 1.01 ಮೀಟರ್ ಎತ್ತರವಿದ್ದು, ಲಾಕಿ ಫರ್ಗ್ಯುಸನ್ ಎಸೆದ ಎಸೆತ 0.98 ಮೀಟರ್ ಎತ್ತರವಿತ್ತು ಎಂದು ರಿವ್ಯೂನಲ್ಲಿ ತಿಳಿದುಬಂತು. ಆದರೆ ಈ ರಿವ್ಯೂ ಗಮನಿಸಿದ ಧೋನಿ ಅಭಿಮಾನಿಗಳು ಧೋನಿ ನಡುವಿನ ಮೇಲೆ ಎಸೆತ ಸಾಗಿದ್ದು, ಇದು ಕ್ಲಿಯರ್ ನೋ ಬಾಲ್ ಎಂದು ಆರೋಪ ಮಾಡುತ್ತಿದ್ದಾರೆ.
ಆದರೆ ಅಸಲಿಯತ್ತಿಗೆ ಧೋನಿ ಇಲ್ಲಿ ತಮ್ಮ ಕಾಲನ್ನು ಬಾಗಿಸಿದ್ದು, ಆದ ಕಾರಣ ಚೆಂಡು ಸೊಂಟದ ಮೇಲೆ ಹಾದು ಹೋಗಿರುವಂತೆ ಕಾಣುತ್ತಿದೆ. ಧೋನಿ ಬಾಗದೇ ಸರಿಯಾಗಿ ನಿಂತಿದ್ದರೆ ಈ ರೀತಿಯ ಗೊಂದಲ ಉಂಟಾಗುತ್ತಿರಲಿಲ್ಲ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


