Saturday, May 30, 2026
spot_img
More
    spot_img
    HomeStateDistrictಕೆಆರ್‌ಎಸ್‌ ಹಿನ್ನೀರಿನಲ್ಲಿ ಅನೈತಿಕ ಚಟುವಟಿಕೆ ವರದಿ ಬೆನ್ನಲ್ಲೇ ಕಿಡಿಗೇಡಿಗಳನ್ನು ಬಂಧಿಸಿದ ಪೊಲೀಸರು

    ಕೆಆರ್‌ಎಸ್‌ ಹಿನ್ನೀರಿನಲ್ಲಿ ಅನೈತಿಕ ಚಟುವಟಿಕೆ ವರದಿ ಬೆನ್ನಲ್ಲೇ ಕಿಡಿಗೇಡಿಗಳನ್ನು ಬಂಧಿಸಿದ ಪೊಲೀಸರು

    ಮೈಸೂರು: ಕಾವೇರಿ ಹಿನ್ನೀರಿನಲ್ಲಿ ಅನೈತಿಕ ಚಟುವಟಿಕೆ ಬಗ್ಗೆ ವರದಿ ಬಂದ ಬಳಿಕ ಪೊಲೀಸರು ಕ್ವಿಕ್ ರಿಯಾಕ್ಷನ್ ತೆಗೆದುಕೊಂಡಿದ್ದು, ಮೀನಾಕ್ಷಿಪುರಕ್ಕೆ ಹೋಗುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ.

    Advertisement

    ತಾಲ್ಲೂಕಿನ ಮೀನಾಕ್ಷಿಪುರದಲ್ಲಿ ಯುವಕ-ಯುವತಿಯರು ನೀರಿನ ಆಳಕ್ಕೆ ಕಾರು ಇಳಿಸಿ ಮೋಜು ಮಸ್ತಿ ಮಾಡಿದ್ದು, ಕೆಆರ್‌ಎಸ್‌ ಹಿನ್ನೀರು ಪ್ರದೇಶ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆಯಾ ಎಂಬ ಪ್ರಶ್ನೆ ಮೂಡಿತ್ತು.

    ವಾರದ ಹಿಂದೆಯಷ್ಟೇ ಸಿಎಂ ಸಿದ್ದರಾಮಯ್ಯ ಅವರು ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಿದ್ದರು. ಬಾಗಿನ ಅರ್ಪಣೆ ಮಾಡಿದ ಬಳಿಕವೇ ಡ್ಯಾಂ ಹಿನ್ನೀರಿನಲ್ಲಿ ಅನೈತಿಕ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

    ಯುವಕ-ಯುವತಿಯರು ಮದ್ಯದ ಅಮಲಿನಲ್ಲಿಯೇ ನೀರಿನಲ್ಲಿ ಇಳಿದು ಜೀವದ ಜೊತೆಯೇ ಆಟವಾಡಿದ್ದು, ಕಾವೇರಿ ಮಾತೆಯ ನೀರಿಗೆ ಮೂತ್ರ ವಿಸರ್ಜನೆ ಕೂಡ ಮಾಡಿದ್ದರು.

    ಈಜಾಡುವ ನೆಪದಲ್ಲಿ ಅನೈರ್ಮಲ್ಯ ಮಾಡಿದ್ದ ಯುವಸಮೂಹ, ರಾಶಿ- ರಾಶಿ ಪ್ಲಾಸ್ಟಿಕ್ ಪ್ಲೇಟ್ಸ್, ಲೋಟೋ, ಖಾಲಿ ಬಿಯರ್ ಬಾಟಲಿಗಳನ್ನು ನೀರಿಗೆ ಎಸೆದು ಹೋಗಿದ್ದರು.

    ಈ ವರದಿ ಎಲ್ಲೆಡೆ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕ್ವಿಕ್ ರಿಯಾಕ್ಷನ್ ತೆಗೆದುಕೊಂಡಿದ್ದು, ಮೀನಾಕ್ಷಿಪುರಕ್ಕೆ ಹೋಗುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ.

    ಅಕ್ರಮ ಮದ್ಯ ಸಾಗಿಸುತ್ತಿದ್ದ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹಲವು ಕಾರುಗಳಲ್ಲಿದ್ದ ಮದ್ಯದ ಬಾಟಲಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

    ಇನ್ನು ಕಾವೇರಿ ಹಿನ್ನೀರಿನಲ್ಲಿ ಎಣ್ಣೆ ಹೊಡೆಯುವವರನ್ನು ಕೂಡ ಅರೆಸ್ಟ್ ಮಾಡಲಾಗಿದ್ದು, ಅಕ್ರಮ ಮದ್ಯ ಸೇವನೆ, ಮೋಜು- ಮಸ್ತಿಗೆ ಪೊಲೀಸರು ಫುಲ್‌ ಸ್ಟಾಪ್‌ ಇಟ್ಟಿದ್ದಾರೆ.

    ಫಾಲೋವರ್ಸ್‌ ಎಕ್ಸ್‌ಪ್ಲೋಡ್ ಮಾಡ್ಬೇಕಾ? ಈ ಇನ್‌ಸ್ಟಾಗ್ರಾಮ್‌ ಟ್ರಿಕ್ಸ್‌ ಮಿಸ್ ಮಾಡ್ಬೇಡಿ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಕಾಕ್ರೋಚ್ ಜನತಾ ಪಾರ್ಟಿ: ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ವೈರಲ್ ಟ್ರೆಂಡ್!

    ಕಾಕ್ರೋಚ್ ಜನತಾ ಪಾರ್ಟಿ ಎಂಬ ಪದ ಸಾಮಾಜಿಕ ಜಾಲತಾಣದಲ್ಲಿ ಯಾವಾಗ, ಹೇಗೆ ವೈರಲ್ ಆಯಿತು? ಈ ಟ್ರೆಂಡ್ ಹಿಂದಿನ ಸಂಪೂರ್ಣ ಕಥೆ ಓದಿ.

    ಬೆಂಗಳೂರಿನಲ್ಲಿ ಮುಂಗಾರು ಆರ್ಭಟ: ಆಲಿಕಲ್ಲು ಮಳೆ, ಗುಡುಗು-ಸಿಡಿಲಿಗೆ ನಗರ ತತ್ತರ

    ಬೆಂಗಳೂರು: ಸಂಜೆ ಐಟಿ ರಾಜಧಾನಿ ಬೆಂಗಳೂರಿನ ಮೇಲೆ ಪ್ರಕೃತಿ ತನ್ನ ಕೋಪವನ್ನು ಸಂಪೂರ್ಣವಾಗಿ ತೋರಿಸಿತು. ಕಾರ್ಮೋಡ ಕವಿದ ಆಕಾಶದಿಂದ ಮೊದಲು ಗುಡುಗು-ಸಿಡಿಲಿನ ಆರ್ಭಟ, ಬಳಿಕ ಆಲಿಕಲ್ಲು ಮಳೆ ಮತ್ತು ಜೋರು ಗಾಳಿ ನಗರವನ್ನು...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading