ಎಲ್ಲಾ ಎಂದುಕೊಂಡಂತೆ ನಡೆದಿದ್ದರೆ, ಇಷ್ಟೊತ್ತಿಗಾಗಲೇ ಡೆವಿಲ್ ಚಿತ್ರ ಬಿಡುಗಡೆಯಾಗಿ ಒಟಿಟಿಗೂ ಸಹ ಬಂದಿರಬೇಕಿತ್ತು. ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಬಿಡುಗಡೆಯಾಗಿರುವ ದರ್ಶನ್ ಇನ್ನೂ ಸಹ ಚಿತ್ರೀಕರಣದಲ್ಲಿ ಪಾಲ್ಗೊಂಡಿಲ್ಲ.
ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್‌ಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಇನ್ನು ದರ್ಶನ್ ಇತ್ತೀಚೆಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ಮುಂದಿನ ಸಿನಿಮಾಗಳ ಬಗ್ಗೆಯೂ ಸಹ ಮಾಹಿತಿ ನೀಡಿದರು.
ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಮಿಲನ ಪ್ರಕಾಶ್ ಕಾಂಬಿನೇಶನ್‌ನ ಎರಡನೇ ಚಿತ್ರವಾದ ಡೆವಿಲ್ ಚಿತ್ರೀಕರಣ ಮುಕ್ಕಾಲು ಭಾಗ ಪೂರ್ಣವಾಗಿದ್ದು, ಇನ್ನುಳಿದ ಕೆಲಸಗಳು ಬಾಕಿ ಇವೆ. ಜೈಲಿನಿಂದ ಹೊರಬಂದ ಬಳಿಕ ಬಿಡುಗಡೆಯಾಗಲಿರುವ ಮೊದಲ ಚಿತ್ರವಾದ ಡೆವಿಲ್ ಮೇಲೆ ಅಭಿಮಾನಿಗಳಿಗೆ ಅಪರಾವಾದ ನಂಬಿಕೆಯಿದೆ.
ಹೀಗೆ ಭರವಸೆ ಮೂಡಿಸಿರುವ ಡೆವಿಲ್ ಚಿತ್ರತಂಡ ಇದೇ ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಟೀಸರ್ ಒಂದನ್ನು ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಘೋಷಣೆ ಮಾಡಿದೆ.
ಈ ಘೋಷಣೆ ಕಂಡು ದರ್ಶನ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದರೆ, ಮತ್ತೊಂದೆಡೆ ಚಿತ್ರದ ಶೀರ್ಷಿಕೆಯಲ್ಲಿ ಬದಲಾವಣೆಯಾಗಿರುವುದು ಕಂಡುಬಂದಿದೆ. ಹೌದು, ಈ ಹಿಂದೆ ಚಿತ್ರದ ಹೆಸರು ʼಡೆವಿಲ್ ದ ಹೀರೊʼ ಎಂದಿತ್ತು. ಆದರೆ ಈಗ ಕೇವಲ ʼಡೆವಿಲ್ʼ ಎಂದು ಶೀರ್ಷಿಕೆಯಲ್ಲಿ ಬಳಸಲಾಗಿದೆ. ಈ ಮೂಲಕ ʼದ ಹೀರೊʼ ಎಂಬ ಸಾಲನ್ನು ಅಳಿಸಿಹಾಕಿದೆ ಚಿತ್ರತಂಡ.
ಇನ್ನು ಈ ಬದಲಾವಣೆಗೆ ದರ್ಶನ್ ಜೈಲಿಗೆ ಹೋಗಿ ಬಂದದ್ದೇ ಕಾರಣ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ʼಡೆವಿಲ್ ದ ಹೀರೊʼ ಎಂಬುದು ಖಳನಾಯಕನ ಗುಣಗಾನ ಮಾಡುವಂತಿದೆ. ಹೀಗಾಗಿ ಇದರಿಂದ ಜೈಲಿಗೆ ಹೋಗಿ ಬಂದ ದರ್ಶನ್ ಚಿತ್ರದ ಶೀರ್ಷಿಕೆಯಿಂದ ʼದ ಹೀರೋʼ ಪದವನ್ನು ತೆಗೆದುಹಾಕಿ ಕೇವಲ ಡೆವಿಲ್ ಎಂದು ಬರೆದುಕೊಂಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


