Saturday, March 28, 2026
spot_img
More
    spot_img
    HomeTop Storyಮುಡಾ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್:‌ ಸಿದ್ದರಾಮಯ್ಯ ವಿರುದ್ಧ ಸುಪ್ರೀಂ ಮೆಟ್ಟಿಲು ಹತ್ತಲು ಸ್ನೇಹಮಯಿ ಕೃಷ್ಣ ಹಿಂದೇಟು

    ಮುಡಾ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್:‌ ಸಿದ್ದರಾಮಯ್ಯ ವಿರುದ್ಧ ಸುಪ್ರೀಂ ಮೆಟ್ಟಿಲು ಹತ್ತಲು ಸ್ನೇಹಮಯಿ ಕೃಷ್ಣ ಹಿಂದೇಟು

    ಮೈಸೂರು: ಕಳೆದ ಕೆಲ ತಿಂಗಳಿನಿಂದ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಮೈಸೂರು ಮುಡಾ ಹಗರಣಕ್ಕೆ ಪ್ರಕರಣಕ್ಕೆ ಈಗ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ.

    ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಸಲ್ಲಿಸಿದ ಅರ್ಜಿ ಹೈಕೋರ್ಟ್‌ನಲ್ಲಿ ವಜಾ ಆಗುತ್ತಿದ್ದಂತೆ ಅರ್ಜಿದಾರ ಸ್ನೇಹಮಯಿ ಕೃಷ್ಣ, ಈ ಬಗ್ಗೆ ಮುಂದಿನ ವಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತೇನೆ ಎಂದು ಹೇಳಿದ್ದರು.

    ಆದರೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವ ಅವರು, ಸುಪ್ರೀಂಕೋರ್ಟ್‌ಗೆ ಯಾವುದೇ ಕಾರಣಕ್ಕೂ ಅರ್ಜಿ ಸಲ್ಲಿಸಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

    ಈ ಬಗ್ಗೆ ಪೋಸ್ಟ್‌ ಮಾಡಿರುವ ಅವರು, ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಲು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ನನಗೆ ತಾವೆಲ್ಲರೂ ಪ್ರಶ್ನೆ ಮಾಡುತ್ತಿದ್ದದ್ದು ಸರಿಯಷ್ಟೆ. ಹೈಕೋರ್ಟ್‌ ನನ್ನ ಅರ್ಜಿಗೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನ ಅಂಶಗಳನ್ನು ಓದಿದ ನಂತರ ಎರಡು ದಿನಗಳ ಕಾಲ ಚಿಂತನೆ ನಡೆಸಿ, ನನ್ನ ಬಳಿ ಇರುವ ಸಾಕ್ಷ್ಯಾಧಾರಗಳನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ, ನನ್ನ ಕೆಲವು ಆತ್ಮೀಯ ವಕೀಲರೊಂದಿಗೆ ಹಿತೈಷಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ನನ್ನ ಇದುವರೆಗಿನ ಕಾನೂನು ಹೋರಾಟದ ಅನುಭವವನ್ನು ಆಧರಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ನ್ಯಾಯಾಲಯದಲ್ಲಿ ನಾನು ಮಾಡಿರುವ ಆರೋಪವನ್ನು ಸಾಬೀತುಪಡಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸಬಹುದು ಎಂಬ ವಿಶ್ವಾಸ ಮೂಡಿದೆ ಎಂದು ಮಾಹಿತಿ ನೀಡಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್ರಾ! ಮನವಮಿ ಹಬ್ಬಕ್ಕೆ ಮಾರುಕಟ್ಟೆ ಬಂದ್ ಆಗುತ್ತಾ? ಹೂಡಿಕೆದಾರರಿಗೆ ಕ್ಲಿಯರ್ ಮಾಹಿತಿ!

    “ಸ್ಟಾಕ್ ಮಾರ್ಕೆಟ್ ಹಾಲಿಡೇ 2026” ಇದೀಗ ಹೂಡಿಕೆದಾರರಲ್ಲಿ ದೊಡ್ಡ ಗೊಂದಲ ಮೂಡಿಸಿದೆ. ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಅಥವಾ ಶುಕ್ರವಾರ ಷೇರು ಮಾರುಕಟ್ಟೆ ಬಂದ್ ಆಗುತ್ತದೆಯಾ? ಎಂಬ ಪ್ರಶ್ನೆ ಟ್ರೇಡರ್‌ಗಳ ನಡುವೆ ಭಾರೀ...

    ಬ್ರೇಕಿಂಗ್! ಮಾರುಕಟ್ಟೆ ರಾಕೆಟ್—ಸೆನ್ಸೆಕ್ಸ್ 1300 ಪಾಯಿಂಟ್ ಜಿಗಿತ! ರೂಪಾಯಿ ಕುಸಿತ, ಚಿನ್ನ ಏರಿಕೆ… ಏನಿದು ಮಿಶ್ರ ಸಿಗ್ನಲ್?

    “ಸ್ಟಾಕ್ ಮಾರ್ಕೆಟ್ 24 ಮಾರ್ಚ್ 2026” ಹೂಡಿಕೆದಾರರಿಗೆ ಒಂದೇ ದಿನದಲ್ಲಿ ರೋಲರ್ ಕೋಸ್ಟರ್ ಅನುಭವ ನೀಡಿದೆ! ಒಂದೆಡೆ ಷೇರು ಮಾರುಕಟ್ಟೆ ಭರ್ಜರಿ ಏರಿಕೆ ಕಂಡಿದ್ದರೆ, ಇನ್ನೊಂದೆಡೆ ರೂಪಾಯಿ ಕುಸಿತ ಮತ್ತು ಚಿನ್ನದ ಬೆಲೆ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading