Friday, May 15, 2026
spot_img
More
    spot_img
    HomeLatest newsವಿಡಿಯೋ: ವಿಧಾನಸಭೆ ಅಧಿವೇಶನಕ್ಕೆ ಚಿರತೆಯಂತೆ ಬಟ್ಟೆ ಧರಿಸಿ ಬಂದ ಶಾಸಕ!

    ವಿಡಿಯೋ: ವಿಧಾನಸಭೆ ಅಧಿವೇಶನಕ್ಕೆ ಚಿರತೆಯಂತೆ ಬಟ್ಟೆ ಧರಿಸಿ ಬಂದ ಶಾಸಕ!

    ಮಾನವ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಎಲ್ಲಾ ರಾಜ್ಯಗಳಲ್ಲಿಯೂ ಹೆಚ್ಚಾಗುತ್ತಿದೆ. ಈ ಕುರಿತು ಸರ್ಕಾರದ ಗಮನ ಸೆಳೆಯಲು ಶಾಸಕರೊಬ್ಬರು ವಿಧಾಸಭೆ ಅಧಿವೇಶನಕ್ಕೆ ಚಿರತೆಯನ್ನು ಹೋಲುವ ಬಟ್ಟೆ ಧರಿಸಿ ಆಗಮಿಸುವ ಮೂಲಕ ಗಮನ ಸೆಳೆದಿದ್ದಾರೆ.

    ಮಹಾರಾಷ್ಟ್ರ ರಾಜ್ಯದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಜುನ್ನಾರ್ ವಿಧಾನಸಭಾ ಕ್ಷೇತ್ರದ ಶಾಸಕ ಶರದ್ ಸೋನವನೆ ಬುಧವಾರ ವಿಧಾನಸಭೆಗೆ ಚಿರತೆಯಂತೆ ಕಾಣುವ ಬಟ್ಟೆ ಧರಿಸಿ ಆಗಮಿಸಿದ್ದರು.

    ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, “ರಾಜ್ಯದಲ್ಲಿ ಹೆಚ್ಚುತ್ತಿರುವ ಚಿರತೆ ದಾಳಿ ಪ್ರಕರಣಗಳ ವಿರುದ್ಧ ಪ್ರತಿಭಟನೆ ನಡೆಸಲು ಚಿರತೆ ಮಾದರಿ ಉಡುಪು ತೊಟ್ಟು ವಿಧಾನಸಭೆಗೆ ಆಗಮಿಸಿದ್ದೇನೆ” ಎಂದು ಹೇಳಿದರು.

    “ರಾಜ್ಯದಲ್ಲಿ ನಡೆಯುತ್ತಿರುವ ಚಿರತೆ ದಾಳಿಗಳಿಗೆ ತುರ್ತು ಪರಿಸ್ಥಿತಿ ಘೋಷಿಸಬೇಕು. 2014ರಿಂದಲೂ ನಾನು ಈ ವಿಚಾರದ ಕುರಿತು ಧ್ವನಿ ಎತ್ತುತ್ತಿದ್ದೇನೆ. ಆದರೆ ಸರ್ಕಾರ ನನ್ನನ್ನು ನಿರ್ಲಕ್ಷ್ಯ ಮಾಡುತ್ತಲೇ ಬಂದಿದೆ. ಚಿರತೆ ರಕ್ಷಣಾ ಕೇಂದ್ರಗಳನ್ನು ನಿರ್ಮಿಸಬೇಕು, ಚಿರತೆಗಳನ್ನು ಹಿಡಿದು ಆ ಕೇಂದ್ರಗಳಲ್ಲಿ ಇರಿಸಬೇಕು” ಎಂದು ಶಾಸಕರು ಆಗ್ರಹಿಸಿದರು.

    “ರಾಜ್ಯದಲ್ಲಿ ಹೆಚ್ಚುತ್ತಿರುವ ಚಿರತೆ ದಾಳಿಗಳ ವಿರುದ್ಧ, ವಿಶೇಷವಾಗಿ ಪುಣೆ ಜಿಲ್ಲೆಯ ಗ್ರಾಮೀಣ ಭಾಗಗಳಾದ ಜುನರ್ ಮತ್ತು ಶಿರೂರಿನಲ್ಲಿ ಸಂಭವಿಸುತ್ತಿರುವ ಘಟನೆಗಳ ಬಗ್ಗೆ ಗಮನ ಸೆಳೆಯಲು ಈ ರೀತಿ ಉಡುಪು ಧರಿಸಿ ಬಂದಿದ್ದೇನೆ” ಎಂದು ಶಾಸಕರು ತಿಳಿಸಿದರು.

    “ನನ್ನ ಕ್ಷೇತ್ರದಲ್ಲಿ ಕಳೆದ ಮೂರು ತಿಂಗಳಲ್ಲಿ 55 ಜನರು ಚಿರತೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. 2014–15ರ ಚಳಿಗಾಲ ಅಧಿವೇಶನದಲ್ಲೇ ನಾನು ಸರ್ಕಾರವನ್ನು ಈ ವಿಷಯದ ಕುರಿತು ಎಚ್ಚರಿಸಿದ್ದೆ. ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ” ಎಂದು ಶಾಸಕರು ಆರೋಪ ಮಾಡಿದರು.

    ಕಾಡಿಗೆ ಮೇಕೆಗಳನ್ನು ಬಿಡಿ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಚಿರತೆ ದಾಳಿಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಮಂಗಳವಾರ ಅರಣ್ಯ ಸಚಿವ ಗಣೇಶ್ ನಾಯಕ್, “ಚಿರತೆಗಳು ಆಹಾರ ಹುಡುಕಾಟಕ್ಕಾಗಿ ಮಾನವ ವಸತಿ ಪ್ರದೇಶಗಳ ಕಡೆಗೆ ಬರದಂತೆ ಮಾಡಲು, ಕಾಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೇಕೆಗಳನ್ನು ಬಿಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ”ಎಂದು ಹೇಳಿದ್ದರು.

    ರಾಜ್ಯದಲ್ಲಿ ಚಿರತೆ ದಾಳಿ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಎನ್‌ಸಿಪಿ (ಎಸ್‌ಪಿ) ಶಾಸಕ ಜಿತೇಂದ್ರ ಅವ್ಹಾಡ್ ವಿಧಾನಸಭೆಯಲ್ಲಿ ಗಮನ ಸೆಳೆಯವ ಸೂಚನೆ ಮಂಡಿಸಿದ್ದರು. ಆಗ ಮಾತನಾಡಿದ್ದ ಸಚಿವರು, “ಚಿರತೆ ದಾಳಿಯಲ್ಲಿ ನಾಲ್ವರು ಸತ್ತರೆ ರಾಜ್ಯ ಸರ್ಕಾರಕ್ಕೆ 1 ಕೋಟಿ ಪರಿಹಾರ ನೀಡಬೇಕಾಗುತ್ತದೆ. ಆದ್ದರಿಂದ, ಸಾವುಗಳ ನಂತರ ಪರಿಹಾರ ನೀಡುವುದಕ್ಕೆ ಬದಲಾಗಿ, 1 ಕೋಟಿ ರೂ.ಗಳ ಮೇಕೆಗಳನ್ನು ಕಾಡಿನಲ್ಲಿ ಬಿಡಿ, ಆಗ ಚಿರತೆಗಳು ಮಾನವ ವಸತಿ ಪ್ರದೇಶಗಳತ್ತ ಬರುವುದಿಲ್ಲ” ಎಂದು ಹೇಳಿದ್ದರು.

    ಅರಣ್ಯ ಸಚಿವ ಗಣೇಶ್ ನಾಯಕ್, “ಚಿರತೆ ದಾಳಿಯ ಆತಂಕ ಹೆಚ್ಚಾಗಿ ವರದಿಯಾಗುತ್ತಿರುವ ಪ್ರದೇಶಗಳಲ್ಲಿ ಮೇಕೆಯನ್ನು ಕಾಡಿಗೆ ಬಿಡುವುದನ್ನು ಶೀಘ್ರದಲ್ಲೇ ಜಾರಿಗೆ ತರುತ್ತೇವೆ.  ಚಿರತೆಗಳ ವರ್ತನೆ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಕಂಡುಬಂದಿದೆ. ಹಿಂದೆ ಅವುಗಳನ್ನು ಕಾಡು ಪ್ರಾಣಿಗಳೆಂದು ಕರೆಯಲಾಗುತ್ತಿತ್ತು, ಆದರೆ ಈಗ ಅವು ಕಬ್ಬಿನ ಹೊಲಗಳಲ್ಲಿ ವಾಸಿಸುತ್ತಿವೆ” ಎಂದು ವಿವರಣೆ ನೀಡಿದ್ದರು.

    “ಅಹಿಲ್ಯಾ ನಗರ, ಪುಣೆ ಮತ್ತು ನಾಸಿಕ್ ಜಿಲ್ಲೆಗಳಲ್ಲಿ ಚಿರತೆ ದಾಳಿ ಸಂಬಂಧಿತ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಹೆಣ್ಣು ಚಿರತೆಗಳು ನಾಲ್ಕು ಮರಿಗಳಿಗೆ ಜನ್ಮ ನೀಡುತ್ತಿವೆ. ಆದ್ದರಿಂದ ಚಿರತೆಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ” ಎಂದು ಹೇಳಿದ್ದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬೆಂಗಳೂರಿನಲ್ಲಿ ಮುಂಗಾರು ಆರ್ಭಟ: ಆಲಿಕಲ್ಲು ಮಳೆ, ಗುಡುಗು-ಸಿಡಿಲಿಗೆ ನಗರ ತತ್ತರ

    ಬೆಂಗಳೂರು: ಸಂಜೆ ಐಟಿ ರಾಜಧಾನಿ ಬೆಂಗಳೂರಿನ ಮೇಲೆ ಪ್ರಕೃತಿ ತನ್ನ ಕೋಪವನ್ನು ಸಂಪೂರ್ಣವಾಗಿ ತೋರಿಸಿತು. ಕಾರ್ಮೋಡ ಕವಿದ ಆಕಾಶದಿಂದ ಮೊದಲು ಗುಡುಗು-ಸಿಡಿಲಿನ ಆರ್ಭಟ, ಬಳಿಕ ಆಲಿಕಲ್ಲು ಮಳೆ ಮತ್ತು ಜೋರು ಗಾಳಿ ನಗರವನ್ನು...

    ಇಂಡೋನೇಷ್ಯಾದ ಡೇ-ಕೇರ್‌ನಲ್ಲಿ 53 ಮಕ್ಕಳಿಗೆ ನಡೆದ ಅಮಾನವೀಯ ದೌರ್ಜನ್ಯ: ವಿಡಿಯೋ ನೋಡಿ ಜಗತ್ತೇ ಬೆಚ್ಚಿ ಬಿದ್ದಿತು

    ಇಂಡೋನೇಷ್ಯಾದ ಜಾವಾ ದ್ವೀಪದ ಯೋಗ್ಯಕರ್ತ ನಗರದಲ್ಲಿ ನಡೆದ ಒಂದು ಆಘಾತಕಾರಿ ಘಟನೆ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. 'ಲಿಟಲ್ ಅರೇಶಾ' ಎಂಬ ಡೇ-ಕೇರ್ ಕೇಂದ್ರದಲ್ಲಿ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ 53 ಮಕ್ಕಳನ್ನು...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading