ಜೀವ ಉಳಿಸುವ ತುರ್ತು ಸಂದರ್ಭದಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮತ್ತೆ ಮುಂಚೂಣಿಗೆ ಬಂದಿದೆ. ಸೆಪ್ಟೆಂಬರ್ 11ರ ಗುರುವಾರ ರಾತ್ರಿ, ಮೆಟ್ರೋ ರೈಲಿನಲ್ಲಿ ‘ಗ್ರೀನ್ ಕಾರಿಡಾರ್’ ರಚಿಸುವ ಮೂಲಕ ಮಾನವ ಹೃದಯವೊಂದನ್ನು ಯಶಸ್ವಿಯಾಗಿ ಸಾಗಾಟ ಮಾಡಲಾಗಿದೆ. ಇದು ಬೆಂಗಳೂರು ಮೆಟ್ರೋದಲ್ಲಿ ನಡೆದ ಎರಡನೇ ಅಂಗಾಂಗ ಸಾಗಾಟ ಕಾರ್ಯಾಚರಣೆಯಾಗಿದೆ.
ಹೃದಯ ಸಾಗಾಟ ವಿವರಗಳು
ಸ್ಪರ್ಶ್ ಆಸ್ಪತ್ರೆಯಿಂದ ಯಶವಂತಪುರ ಇಂಡಸ್ಟ್ರಿ ಮೆಟ್ರೋ ನಿಲ್ದಾಣಕ್ಕೆ ಹೃದಯವನ್ನು ಆಂಬ್ಯುಲೆನ್ಸ್ ಮೂಲಕ ತರಲಾಯಿತು. ಅಲ್ಲಿಂದ, ಮೆಟ್ರೋ ರೈಲಿನ ಮೂಲಕ ಸಂಪಿಗೆ ರೋಡ್ ಮೆಟ್ರೋ ನಿಲ್ದಾಣದವರೆಗೆ ಕೊಂಡೊಯ್ಯಲಾಯಿತು. ನಂತರ, ಮತ್ತೆ ಆಂಬ್ಯುಲೆನ್ಸ್ ಮೂಲಕ ಶೇಷಾದ್ರಿಪುರದಲ್ಲಿರುವ ಅಪೋಲೋ ಆಸ್ಪತ್ರೆಗೆ ತಲುಪಿಸಲಾಯಿತು.
ರಾತ್ರಿ 11:01ಕ್ಕೆ ಯಶವಂತಪುರ ಇಂಡಸ್ಟ್ರಿ ಮೆಟ್ರೋ ನಿಲ್ದಾಣದಿಂದ ಹೊರಟ ರೈಲು, ಕೇವಲ 20 ನಿಮಿಷಗಳಲ್ಲಿ ಏಳು ನಿಲ್ದಾಣಗಳನ್ನು ದಾಟಿ 11:21ಕ್ಕೆ ಸಂಪಿಗೆ ರೋಡ್ ಮೆಟ್ರೋ ನಿಲ್ದಾಣವನ್ನು ತಲುಪಿತು. ಈ ಕ್ಷಿಪ್ರ ಸಾಗಾಟದಿಂದಾಗಿ, ನಿರ್ಣಾಯಕ ಸಮಯದಲ್ಲಿ ಹೃದಯವನ್ನು ಸ್ವೀಕರಿಸುವವರಿಗೆ ತಲುಪಿಸಲು ಸಾಧ್ಯವಾಯಿತು.
ಹೃದಯ ಸಾಗಾಟಕ್ಕೆಂದೇ ಪ್ರತ್ಯೇಕ ರೈಲನ್ನು ಬಳಸಲಾಗಿಲ್ಲ. ಬದಲಾಗಿ, ಎಂದಿನಂತೆ ಸಂಚರಿಸುತ್ತಿದ್ದ ಪ್ರಯಾಣಿಕರ ರೈಲಿನಲ್ಲಿ, ಈ ವೈದ್ಯಕೀಯ ತುರ್ತು ಪರಿಸ್ಥಿತಿಗಾಗಿ ಒಂದು ನಿರ್ದಿಷ್ಟ ಕೋಚ್ ಅನ್ನು ಸಂಪೂರ್ಣವಾಗಿ ವೈದ್ಯಕೀಯ ತಂಡ ಮತ್ತು ಹೃದಯ ಸಾಗಾಟಕ್ಕೆ ಮೀಸಲಿಡಲಾಗಿತ್ತು. . ಮೆಟ್ರೋ ಭದ್ರತಾ ಸಿಬ್ಬಂದಿ ಮತ್ತು ವೈದ್ಯಕೀಯ ತಂಡದ ಸಮನ್ವಯದೊಂದಿಗೆ ಪ್ರಯಾಣವು ಸಂಪೂರ್ಣ ಸುರಕ್ಷಿತವಾಗಿತ್ತು.
ಬಿಎಂಆರ್‌ಸಿಎಲ್ ಅಧಿಕಾರಿಗಳು ಈ ಕುರಿತು ಹೇಳಿಕೆ ನೀಡಿ, ಈ ಯಶಸ್ವಿ ಕಾರ್ಯಾಚರಣೆಯು ನಮ್ಮ ಮೆಟ್ರೋ ಕೇವಲ ಪ್ರಯಾಣಿಕರ ಸಾರಿಗೆಯಲ್ಲದೆ, ತುರ್ತು ವೈದ್ಯಕೀಯ ಸಂದರ್ಭಗಳಲ್ಲಿಯೂ ನಗರದ ಜನರಿಗೆ ಸಹಾಯ ಮಾಡುತ್ತದೆ ಎಂಬುದನ್ನು ತೋರಿಸಿದೆ ಎಂದು ತಿಳಿಸಿದ್ದಾರೆ. ಈ ಘಟನೆಯು ಬೆಂಗಳೂರಿನ ವೈದ್ಯಕೀಯ ಸೇವೆಗಳಲ್ಲಿ ನಮ್ಯ ಮೆಟ್ರೋ ಮಹತ್ವದ ಪಾತ್ರ ವಹಿಸುತ್ತಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಮದ್ದೂರಿನಲ್ಲಿ ಪ್ರಚೋದನಕಾರಿ ಭಾಷಣ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿರುದ್ಧ ಎಫ್‌ಐಆರ್ ದಾಖಲು
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


