ಚಿತ್ರದುರ್ಗದ ಅಭಿಮಾನಿ ರೇಣುಕಾಸ್ವಾಮಿ ಎಂಬಾತ ತನ್ನ ಪ್ರಿಯತಮೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣ ನಟ ದರ್ಶನ್ ತನ್ನ ಆಪ್ತರ ಜತೆಗೂಡಿ ಆತನನ್ನು ಬೆಂಗಳೂರಿಗೆ ಕರೆಸಿ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ದರ್ಶನ್, ಪವಿತ್ರಾ ಸೇರಿ ಇತರೆ ಆರೋಪಿಗಳನ್ನು ಬಂಧಿಸಿದ್ದರು. ಆದರೆ ಡಿ ಗ್ಯಾಂಗ್‌ನ ಏಳು ಮಂದಿ ರಾಜ್ಯ ಹೈಕೋರ್ಟ್‌ನಲ್ಲಿ ಹಲವು ಕಾರಣಗಳನ್ನು ನೀಡಿ ಬೇಲ್ ಪಡೆದು ಹೇಗೋ ಹೊರಬಿದ್ದಿದ್ದರು.
ಆದರೆ ಪೊಲೀಸರು ಹೈಕೋರ್ಟ್ ಬೇಲ್ ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸುಪ್ರೀಂ ಛೀಮಾರಿ ಹಾಕಿದೆ. ಅಲ್ಲದೇ ಬೇಲ್ ರದ್ದುಗೊಳಿಸಿ ದರ್ಶನ್ ಹಾಗೂ ಗ್ಯಾಂಗ್ ಅನ್ನು ಮತ್ತೆ ಜೈಲಿಗೆ ಅಟ್ಟಿದೆ. ಇನ್ನು ದರ್ಶನ್ ಪರ ವಕೀಲರು ಹೈಕೋರ್ಟ್ ನಂಬಿಸಿದ ಹಾಗೆ ಸುಪ್ರೀಂ ಕೋರ್ಟ್ ಮುಂದೆ ಸಹ ಕೊಲೆ ನಡೆದಾಗ ದರ್ಶನ್ ಜಾಗದಲ್ಲೇ ಇರಲಿಲ್ಲ, ದರ್ಶನ್ ಅವರನ್ನು ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ಸಿಲುಕಿಸುವ ಯತ್ನ ನಡೆದಿದೆ ಎಂದು ಹೇಳಿತ್ತು. ಆದರೆ ಇದ್ಯಾವುದನ್ನೂ ನಂಬದ ಸುಪ್ರೀಂ ಕೋರ್ಟ್ ಲಭ್ಯವಿರುವ ಸಾಕ್ಷಿಗಳ ಆಧಾರದ ಮೇಲೆ ಆದೇಶವನ್ನು ಹೊರಡಿಸಿದ್ದು, ಪ್ರಕರಣದ ಕುರಿತು ಈ ಕೆಳಕಂಡ ಅಂಶಗಳನ್ನು ಬಹಿರಂಗಪಡಿಸಿದೆ. ಈ ಮೂಲಕ ದರ್ಶನ್ ಹಾಗೂ ಗ್ಯಾಂಗ್ ಕಟ್ಟಿದ ಸುಳ್ಳಿನ ಕಥೆಗಳು ವ್ಯರ್ಥವಾಗಿವೆ.
1.ಈ ಕೊಲೆ ಹಠಾತ್ ಪ್ರಚೋದನೆ, ಭಾವನೆ ಸ್ಫೋಟಿಸಿ ಮಾಡಿರುವುದಲ್ಲ
2.ಸಾಕ್ಷ್ಯ ನೋಡಿದಾಗ ಪೂರ್ವಯೋಜಿತ, ಸಂಘಟಿತ ಅಪರಾಧವಾಗಿದೆ
3. ನಟ ದರ್ಶನ್ ತನಿಖೆಯ ಹಾದಿ ತಪ್ಪಿಸಲು ಪ್ರಭಾವವನ್ನು ಬೀರಿದ್ದಾರೆ
4. ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ ದಿನದ ದುಡಿಯವವನ ಹತ್ಯೆ
5. ಸಿಸಿಟಿವಿ, ಕಾಲ್ ರೆಕಾರ್ಡ್ ಸೇರಿ ಪ್ರಮುಖ ಸಾಕ್ಷಾಧಾರಗಳ ನಾಶ ಯತ್ನ
6. ಪವಿತ್ರಾ, ದರ್ಶನ್ ನಿರಂತರ ಸಂಪರ್ಕ, ಕೊಲೆ ನಡೆದಾಗ ಸ್ಥಳದಲ್ಲಿದ್ದರು
7. ಕೊಲೆಗೂ ಮುನ್ನ ದರ್ಶನ್ ಇತರ ಆರೋಪಿಗಳ ಜತೆ ಸಂಪರ್ಕ ಸಾಬೀತು
8. ಸೆಲೆಬ್ರಿಟಿ ಆದ ಮಾತ್ರಕ್ಕೆ ನಟ ದರ್ಶನ್ ಕಾನೂನಿಗಿಂತ ದೊಡ್ಡವರೇನಲ್ಲ
9. ಉನ್ನತ, ಪ್ರಭಾವಶಾಲಿ ಆದರೂ ಕಾನೂನು ವ್ಯಾಪ್ತಿಯಿಂದ ಹೊರಗಿಲ್ಲ
10. ದರ್ಶನ್ ಸಾಕ್ಷ್ಯವನ್ನು ನಾಶ ಮಾಡಬಹುದು, ಬೆದರಿಕೆ ಹಾಕಬಹುದು
11. ದರ್ಶನ್ ಜನಸಾಮಾನ್ಯರಲ್ಲ, ಆರ್ಥಿಕ, ರಾಜಕೀಯವಾಗಿ ಸದೃಢ
12. ಜೈಲು ನಿಯಮ ಗಾಳಿಗೆ ತೂರಿದ್ದರೂ ಹೈಕೋರ್ಟ್ ಜಾಮೀನು ಕೊಟ್ಟಿದೆ
13. ಪ್ರಮುಖ ವಿಚಾರಗಳಲ್ಲಿ ಹೈಕೋರ್ಟ್ ತನ್ನ ವಿವೇಚನೆಯನ್ನು ಬಳಸಿಲ್ಲ
14. ಅನಾರೋಗ್ಯ ಕಾರಣಗಳ ಆಧಾರದ ಮೇಲೆ ಹೈಕೋರ್ಟ್ ಜಾಮೀನು
15. ವೈದ್ಯ ವರದಿಯಂತೆ ದರ್ಶನ್‌ಗೆ ಸಕ್ಕರೆ ಕಾಯಿಲೆ, ಹೃದಯ ಸಮಸ್ಯೆ ಇದೆ
16. ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದರೂ ತುರ್ತಾಗಿ ಅಲ್ಲ ಎಂಬುದು ಸ್ಪಷ್ಟ
17. ಜಾಮೀನು ಪಡೆದ ಬಳಿಕ ದರ್ಶನ್ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆದಿಲ್ಲ
18. ಜಾಮೀನು ದುರುಪಯೋಗ ಇಲ್ಲ, ಆದರೆ, ತನಿಖೆ ಹಾದಿ ತಪ್ಪಿಸುವ ಪ್ರಯತ್ನ
19. ಪವಿತ್ರಾಗೌಡ ಮನೆಯ ಸಿಸಿಟಿವಿ ದೃಶ್ಯಗಳು ಆರೋಪಿಗಳಿಂದ ನಾಶ
20. ದರ್ಶನ್ ಜಾಮೀನು ಬಳಿಕ ಸಾಕ್ಷಿಗಳ ಜತೆ ವೇದಿಕೆ ಹಂಚಿಕೊಂಡಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ `FIR’ ದಾಖಲು.!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


