ಮೈಸೂರು: ರಾಜ್ಯದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದಿನದಿಂದ ದಿನಕ್ಕೆ ಭಾರೀ ಸದ್ದು ಮಾಡುತ್ತಿದ್ದು, ಇದೀಗ ಕಾನೂನು ವಿರುದ್ಧ ಮಾಡುತ್ತಿದ್ದ ಖಾತೆ, ಕಂದಾಯವನ್ನು ರದ್ದುಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನಗರಾಭಿವೃದ್ಧಿ ಕಾಯ್ದೆಯ ಪ್ರಕಾರ ಕೆಲಸ ಮಾಡಲು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಸೂಚನೆ ನೀಡಿದ್ದಾರೆ. ನಗರಾಭಿವೃದ್ಧಿ ಕಾಯ್ದೆಯ ಪ್ರಕಾರ ಮುಡಾದಲ್ಲಿ ಖಾತೆ ಕಂದಾಯ ಮಾಡುವಂತಿಲ್ಲ. ಹೀಗಿದ್ದರೂ ಮುಡಾದಲ್ಲಿ ಅಧಿಕಾರಿಗಳು ಖಾತೆ ಕಂದಾಯ ಮಾಡುತ್ತಿದ್ದರು. ಇದೀಗ ಇದನ್ನು ರದ್ದುಗೊಳಿಸಲಾಗಿದೆ.
ಸದ್ಯ ಕಾರ್ಪೋರೇಷನ್, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ಗೆ ಅಧಿಕಾರ ಹಸ್ತಾಂತರ ಮಾಡಲಾಗಿದ್ದು, ಮುಡಾ ಸೈಟುಗಳ ಖಾತೆ ಕಂದಾಯ ಮಾಡಲು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.
ಈ ಮೂಲಕ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಇಷ್ಟು ದಿನ ಮಾಡುತ್ತಿದ್ದ ಖಾತೆ ಕಂದಾಯ ಸೇರಿ ಇತರೆ ಸೇವೆ ಸಂಪೂರ್ಣ ಸ್ಥಗಿತವಾಗಿದ್ದು, ಕೇವಲ ಡೆವಲಪ್ಮೆಂಟ್ ವರ್ಕ್ ಸೇವೆ ಮಾತ್ರ ಲಭ್ಯವಿರಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


