Wednesday, May 13, 2026
spot_img
More
    spot_img
    HomeEntertainmentಅನುಶ್ರೀ ಮದುವೆಯಾಗಲಿರುವ ಹುಡುಗನ ಫೋಟೊ ವೈರಲ್;‌ ಯಾರು ವರ?

    ಅನುಶ್ರೀ ಮದುವೆಯಾಗಲಿರುವ ಹುಡುಗನ ಫೋಟೊ ವೈರಲ್;‌ ಯಾರು ವರ?

    ಖ್ಯಾತ ನಿರೂಪಕಿ ಅನುಶ್ರೀ ಮದುವೆ ನಿಶ್ಚಯವಾಗಿದೆ. ಅನುಶ್ರೀ ಕೊಡಗು ಮೂಲದ ರೋಷನ್ ನನ್ನು ಮದುವೆಯಾಗಲಿದ್ದಾರೆ. ಬೆಂಗಳೂರಿನಲ್ಲಿ ಅನುಶ್ರೀ ಮದುವೆ ನೆರವೇರಲಿದೆ.ಕನ್ನಡದ ಖ್ಯಾತ ನಟಿ, ನಿರೂಪಕಿ ಮದುವೆ ಬಗ್ಗೆ ಇದ್ದ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಅನುಶ್ರೀ ಮದುವೆ ಕೊನೆಗೂ ನಿಗದಿಯಾಗಿದೆ. ಮೂಲಗಳ ಪ್ರಕಾರ ಆಗಸ್ಟ್ 28 ಕ್ಕೆ ಅನುಶ್ರೀ ಮದುವೆ ನಡೆಯಲಿದೆ. ಈ ಮಂಗಳೂರು ಬೆಡಗಿ ಕೊಡಗು ಮೂಲದ ಉದ್ಯಮಿ ರೋಷನ್ ಅವರನ್ನು ವರಿಸಲಿದ್ದಾರೆ.ಅನುಶ್ರೀ ಮದುವೆಯಾಗಲು ಹೊರಟಿರುವ ಹುಡುಗ ರೋಷನ್ ಕಾರ್ಪೋರೆಟ್ ಉದ್ಯಮಿ.ಎಲ್ಲರೂ ಅಂದುಕೊಂಡಂತೆ ಇದು ಲವ್ ಮ್ಯಾರೇಜ್ ಅಲ್ಲ. ಕುಟುಂಬದವರೇ ನೋಡಿ ಗೊತ್ತು ಮಾಡಿದ ಮದುವೆ. ಅಂದರೆ ಅರ್ರೆಜ್ದ್ ಮ್ಯಾರೇಜ್. ಈಗಾಗಲೇ ಎರಡೂ ಕುಟುಂಬಗಳು ಮದುವೆಗೆ ಸಕಲ ಸಿದ್ಧತೆಗಳನ್ನು ಮಾಡುತ್ತಿವೆ.

    ನಟಿ ಅನುಶ್ರೀ ಅವರ ವಿವಾಹ ಕುರಿತಾಗಿ ಹರಿದಾಡುತ್ತಿದ್ದ ಸುದ್ದಿಗೆ ಈಗ ಸ್ಪಷ್ಟತೆ ಬಂದಿದೆ. ಕೊಡಗು ಮೂಲದ ರೋಷನ್ ಎಂಬ ಯುವಕನ ಜೊತೆ ಅನುಶ್ರೀ ಅವರ ಮದುವೆ ನಡೆಯಲಿದೆ ಎಂಬ ಸುದ್ದಿ ಈಗ ಅಧಿಕೃತವಾಗಿದೆ. ಈ ಮೊದಲು ಕೂಡ ಇಂತಹ ವದಂತಿಗಳು ಹರಿದಿದ್ದರಿಂದ ಅನೇಕರು ನಂಬಿರಲಿಲ್ಲ. ಆದರೆ ಈಗ ಅನುಶ್ರೀ ಹಾಗೂ ರೋಷನ್ ಜೊತೆಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮದುವೆ ವಿಚಾರಕ್ಕೆ ದೃಢತೆ ನೀಡಿದೆ.ರೋಷನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಖಾತೆ ಹೊಂದಿದ್ದು, ಅನುಶ್ರೀ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ರೋಷನ್ ಅವರನ್ನು ಫಾಲೋ ಮಾಡುತ್ತಿದ್ದಾರೆ. ಆದ್ರೆ, ರೋಷನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಡಿಸ್ಪ್ಲೇನಲ್ಲಿ ತಮ್ಮ ಫೋಟೋ ಇರಿಸಿಲ್ಲ ಬದಲಾಗಿ ಒಂದು ನಾಯಿ ಮರಿ ಫೋಟೋ ಇದೆ. ಈ ಕಾರಣದಿಂದ ಅವರ ನಿಜವಾದ ಗುರುತು ಜನರಿಗೆ ತಿಳಿಯಲಿಲ್ಲ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋಗಳಿಂದ ರೋಷನ್ ಮತ್ತು ಅನುಶ್ರೀ ನಡುವೆ ಸಂಬಂಧ ಇದ್ದಂತೆ ಕಾಣಿಸುತ್ತಿದೆ.ಒಂದು ಪೂಜೆ ಕಾರ್ಯಕ್ರಮದಲ್ಲಿ ಈ ಜೋಡಿ ಭಾಗವಹಿಸಿದ್ದು, ಕಾರ್ಯಕ್ರಮದ ವೇಳೆ ಅವರಿಬ್ಬರು ಒಂದೇ ಫ್ರೇಮಿನಲ್ಲಿ ಕಾಣಿಸಿಕೊಂಡ ಫೋಟೋಗಳನ್ನು ಅಲ್ಲಿದ್ದ ಕೆಲವರು ಕ್ಲಿಕ್ಕಿಸಿದ್ದಾರೆ. ಈ ಚಿತ್ರಗಳು ಇದೀಗ ಹಲವು ಫ್ಯಾನ್ ಪೇಜ್‌ಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳಲ್ಲಿ ಸಂತೋಷ ಉಲ್ಲಾಸವನ್ನುಂಟುಮಾಡಿವೆ.ಆದರೆ, ಅನುಶ್ರೀ ಇನ್ನೂ ಈ ಸುದ್ದಿಯನ್ನು ಅಧಿಕೃತವಾಗಿ ಖಚಿತಪಡಿಸಿಲ್ಲ.

    ಕೊನೆಗೂ ಹಸೆಮಣೆ ಏರಲು ಸಜ್ಜಾದ ಕರಾವಳಿ ಬೆಡಗಿ ಆ್ಯಂಕರ್ ಅನುಶ್ರೀ ಮದುವೆ ಮುಹೂರ್ತ ಫಿಕ್ಸ್

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬೆಂಗಳೂರಿನಲ್ಲಿ ಮುಂಗಾರು ಆರ್ಭಟ: ಆಲಿಕಲ್ಲು ಮಳೆ, ಗುಡುಗು-ಸಿಡಿಲಿಗೆ ನಗರ ತತ್ತರ

    ಬೆಂಗಳೂರು: ಸಂಜೆ ಐಟಿ ರಾಜಧಾನಿ ಬೆಂಗಳೂರಿನ ಮೇಲೆ ಪ್ರಕೃತಿ ತನ್ನ ಕೋಪವನ್ನು ಸಂಪೂರ್ಣವಾಗಿ ತೋರಿಸಿತು. ಕಾರ್ಮೋಡ ಕವಿದ ಆಕಾಶದಿಂದ ಮೊದಲು ಗುಡುಗು-ಸಿಡಿಲಿನ ಆರ್ಭಟ, ಬಳಿಕ ಆಲಿಕಲ್ಲು ಮಳೆ ಮತ್ತು ಜೋರು ಗಾಳಿ ನಗರವನ್ನು...

    ಇಂಡೋನೇಷ್ಯಾದ ಡೇ-ಕೇರ್‌ನಲ್ಲಿ 53 ಮಕ್ಕಳಿಗೆ ನಡೆದ ಅಮಾನವೀಯ ದೌರ್ಜನ್ಯ: ವಿಡಿಯೋ ನೋಡಿ ಜಗತ್ತೇ ಬೆಚ್ಚಿ ಬಿದ್ದಿತು

    ಇಂಡೋನೇಷ್ಯಾದ ಜಾವಾ ದ್ವೀಪದ ಯೋಗ್ಯಕರ್ತ ನಗರದಲ್ಲಿ ನಡೆದ ಒಂದು ಆಘಾತಕಾರಿ ಘಟನೆ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. 'ಲಿಟಲ್ ಅರೇಶಾ' ಎಂಬ ಡೇ-ಕೇರ್ ಕೇಂದ್ರದಲ್ಲಿ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ 53 ಮಕ್ಕಳನ್ನು...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading