ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶದ ನಂತರ ಎರಡನೇ ಬಾರಿ ಜೈಲು ಸೇರಿರುವ ನಟ ದರ್ಶನ್ ಮತ್ತು ಅವರ ಸಹಚರರ ಜೈಲುವಾಸ ಇಂದು ಏಳನೇ ದಿನಕ್ಕೆ ಕಾಲಿಟ್ಟಿದೆ. ಈ ಬಾರಿ ಯಾವುದೇ ವಿಶೇಷ ಸೌಲಭ್ಯಗಳಿಲ್ಲದೆ, ದರ್ಶನ್ ಸಾಮಾನ್ಯ ಕೈದಿಗಳಂತೆ ಜೈಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.
ಹಿಂದಿನಂತೆ ಯಾವುದೇ ರಾಜಾತಿಥ್ಯ ಅಥವಾ ಮೊಬೈಲ್ ಬಳಕೆಯ ಅವಕಾಶಗಳಿಲ್ಲ. ದರ್ಶನ್ ಜೈಲಿನ ಆಹಾರಕ್ಕೆ ಹೊಂದಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಿನ್ನೆ ರಾತ್ರಿ ಚಪಾತಿ ಮತ್ತು ಮೊಟ್ಟೆಗಳನ್ನು ಸೇವಿಸಿದ್ದರೆ, ಇಂದು ಬೆಳಗ್ಗೆ ಉಪಾಹಾರಕ್ಕೆ ಅವಲಕ್ಕಿ ಮತ್ತು ಚಿತ್ರಾನ್ನ ಸೇವಿಸಿದ್ದಾರೆ.
ದರ್ಶನ್ ಜೈಲಿಗೆ ಬಂದಾಗಿನಿಂದ ಒಂದು ವಿಷಯವನ್ನು ಮಾತ್ರ ಮರೆತಿಲ್ಲ. ಅದು ದಿನಪತ್ರಿಕೆಗಳನ್ನು ಓದುವುದು! ಪ್ರತಿದಿನ ಬೆಳಗ್ಗೆ ತಪ್ಪದೇ ಅವರು ದಿನಪತ್ರಿಕೆಗಳತ್ತ ಕಣ್ಣಾಡಿಸಿ, ಪ್ರಪಂಚದ ಆಗುಹೋಗುಗಳನ್ನು ತಿಳಿದುಕೊಳ್ಳುತ್ತಿದ್ದಾರೆ. ನಂತರ, ಸಹಚರರ ಜೊತೆ ಮಾತನಾಡಿ ದಿನ ಕಳೆಯುತ್ತಿದ್ದಾರೆ. ಕೆಲವೊಮ್ಮೆ ಒಂಟಿಯಾಗಿ ಕುಳಿತು ಚಿಂತನಶೀಲರಾಗಿದ್ದರೆ, ಮತ್ತೊಮ್ಮೆ ಹೆಚ್ಚು ಮಾತನಾಡುತ್ತಾ ಕಾಲ ಕಳೆಯುತ್ತಿದ್ದಾರೆ.
ಅದೇ ರೀತಿ, ಪ್ರಕರಣದ ಮತ್ತೊಬ್ಬ ಆರೋಪಿ ಪವಿತ್ರಾ ಗೌಡ ಸಹ ಸಹ-ಖೈದಿಗಳೊಂದಿಗೆ ಹೊಂದಿಕೊಳ್ಳುತ್ತಿದ್ದು, ಬೆಳಗಿನ ಉಪಾಹಾರವನ್ನು ಸೇವಿಸಿದ್ದಾರೆ. ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿ ಆಗಸ್ಟ್ 14ರಂದು ಆದೇಶ ಹೊರಡಿಸಿದಾಗಿನಿಂದ ಇಡೀ ತಂಡ ಪೊಲೀಸ್ ವಶದಲ್ಲಿದೆ.
ರಾಜ್ಯದಲ್ಲಿ ಅಮಾನವೀಯ ಕೃತ್ಯ: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಎಸಗಿ ಬೆಂಕಿ ಹಚ್ಚಿ ಹತ್ಯೆ
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


