ಬೆಂಗಳೂರು: ಬಿಜೆಪಿಯ ಹಲವು ಶಾಸಕರು ನನಗೆ ಆಮಿಷವೊಡ್ಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮ ಕ್ಷೇತ್ರಕ್ಕೆ 280 ಕೋಟಿ ಯೋಜನೆಗಳನ್ನು ತಡೆಹಿಡಿದು, ಸ್ಥಗಿತಗೊಳಿಸಿದ್ದರು. ಅನುದಾನಕ್ಕಾಗಿ ಎಷ್ಟೇ ಹೇಳಿದರೂ ಸ್ಪಂದಿಸಿರಲಿಲ್ಲ. ಆಗ ನಾವು ಇವರಂತೆ ನಡೆದುಕೊಂಡೆವಾ? ಎಂದು ಪ್ರಶ್ನೆ ಮಾಡಿದರು. ನಮಗೂ ಸಂದರ್ಭ ಬರುತ್ತದೆ ಎಂದು ಸುಮ್ಮನಾದೆವು. ಬಿಜೆಪಿಯ ಶಾಸಕರೇ ನಮಗೆ ಆಮಿಷವೊಡ್ಡಿದ್ದರು ಎಂದು ಹೊಸ ಬಾಂಬ್ ಸಿಡಿಸಿದರು.
ಇನ್ನು ನಾವು ವಿಪಕ್ಷದಲ್ಲಿ ಇದ್ದಾಗ ಬಿಜೆಪಿಯ ಹಲವು ಶಾಸಕರು ಬಂದು ನಮಗೆ ಆಮಿಷವೊಡ್ಡಿದ್ದರು. ಬಿಟ್ ಕಾಯಿನ್ ಹಗರಣ, ಪಿಎಸ್‌ಐ, ಕೆಕೆಆರ್‌ಡಿಬಿ ಅವ್ಯವಹಾರಗಳನ್ನು ಬಯಲು ಮಾಡಬೇಡಿ. ನಾವು ನಿಮಗೆ ಡಬಲ್ ಅನುದಾನ ಕೊಡಿಸುತ್ತೇವೆ ಎಂದು ಬಿಜೆಪಿಯ ಶಾಸಕರೇ ನನಗೆ ಸದನದಲ್ಲೇ ಬಂದು ಮನವಿ ಮಾಡಿದ್ದರು. ಆಮಿಷ ಕೂಡ ಒಡ್ಡಿದ್ದರು. ಅವರೆಲ್ಲಾ ಯಾರ್ಯಾರು ಎಂದು ನಾನು ಹೇಳಲೇ? ನಾವು ಅವರ ಬಗ್ಗೆ ಮಾತನಾಡಬಹುದು. ರೂಲಿಂಗ್ ಪಾರ್ಟಿ ಎಂಎಲ್‌ಎ ಯಾರಿರುತ್ತಾರೆ ಅವರಿಗೆ ಸ್ವಲ್ಪ ಜಾಸ್ತಿ ಅನುದಾನ ಸಿಗುತ್ತೆ. ಅದು ಸಹಜ. ಹಾಗಂತ ನಾವು ಯಾರಿಗೂ ಅನುದಾನ ಬಿಡುಗಡೆಯಲ್ಲಿ ವಿಳಂಬ ಮಾಡಿಲ್ಲ. ಪ್ರಗತಿಪಥ, ಕಲ್ಯಾಣ ಪಥದಲ್ಲಿ ಎಲ್ಲರಿಗೂ ಅನುದಾನ ಕೊಟ್ಟಿದ್ದೇವೆ. ಜೆಜೆಎಂ ಯೋಜನೆಯಡಿ ಇವರು ಕೇಂದ್ರದಿಂದ ಸೆಂಕ್ಷನ್ ಮಾಡಿಕೊಂಡು ತರುತ್ತಿದ್ದಾರೆ, ಅದು ಕಾಂಗ್ರೆಸ್ ನಾಯಕರಿಗೆ ಅಥವಾ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಹೋಗ್ತಿದೆಯಾ? ಎತ್ತಿನಹೊಳೆ ಪ್ರಾಜೆಕ್ಟ್ ವಿಚಾರದಲ್ಲೂ ಹಾಗೆ. ಸುಮ್ಮನೆ ಬಿಜೆಪಿಯವರು ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ. ಕೇಂದ್ರದಲ್ಲಿ ನಿಮ್ಮದೇ ಸರ್ಕಾರವಿದೆ. ನಮಗೂ ಸಹಕಾರ ನೀಡಲು ಹೇಳಿ. ಭದ್ರಾ ಸೇರಿದಂತೆ ಹಲವು ನೀರಾವರಿ ಯೋಜನೆಗಳಿಗೆ ಅನುದಾನ ಕೊಡಿಸಿ ಎಂದು ತಿರುಗೇಟು ನೀಡಿದರು.
ಕರ್ನಾಟಕ ಮುಂಗಾರು ಅಧಿವೇಶನಕ್ಕೆ ಮುಹೂರ್ತ ಫಿಕ್ಸ್
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


