ಬೆಂಗಳೂರು: ಸರ್ಕಾರಿ ವ್ಯಾಜ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ಪರಿಹರಿಸಲು ರೂಪಿಸಲಾಗಿರುವ ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ವಿಧೇಯಕವನ್ನು ವಿಧಾನಪರಿಷತ್‍ನಲ್ಲಿ ಯಾವುದೇ ತಿದ್ದುಪಡಿ ಇಲ್ಲದೆ ಅಂಗೀಕರಿಸಲಾಯಿತು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು ವಿಧೇಯಕ ಮಂಡಿಸಿ ಸರ್ಕಾರಿ ಇಲಾಖೆಗಳು ಮತ್ತು ಅಧಿಕಾರಿಗಳು ಭಾಗಿಯಾಗಿರುವ ವ್ಯಾಜ್ಯಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಇತ್ಯರ್ಥಪಡಿಸುವುದು ಈ ವಿಧೇಯಕದ ಮುಖ್ಯ ಉದ್ದೇಶ ಎಂದು ಹೇಳಿದರು.
ಅಲ್ಲದೆ ಈ ವಿಧೇಯಕವು ರಾಜ್ಯದಲ್ಲಿ ವಾಜ್ಯಗಳ ಸಂಖ್ಯೆಯನ್ನು ಕಡಿಮೆ ಮಾಡಲು ಹಾಗೂ ಸಾರ್ವಜನಿಕರಿಗೆ ತ್ವರಿತ ನ್ಯಾಯ ಒದಗಿಸಲು ಸಹಾಯ ಮಾಡುತ್ತದೆ.
ರಾಜ್ಯದ ನ್ಯಾಯಾಲಯ ಮತ್ತು ಶಾಸನಬದ್ಧ ನ್ಯಾಯ ಮಂಡಳಿಗಳ ಮುಂದೆ ಸರ್ಕಾರಿ ವ್ಯಾಜ್ಯಗಳ ನಡೆಸುವ ಕುರಿತಂತೆ ನಿಯಮ, ಆದೇಶ, ಅಧಿಸೂಚನೆ, ಸುತ್ತೋಲೆ ಮುಂತಾದವುಗಳಿವೆ. ರಾಜ್ಯದಲ್ಲಿ ಪರಿಣಾಮಕಾರಿ ವ್ಯಾಜ್ಯ ನಿರ್ವಹಣಾ ಕಾರ್ಯ ವ್ಯವಸ್ಥೆ ಇಲ್ಲದಿರುವುದರಿಂದಾಗಿ ರಾಜ್ಯವು ಅನೇಕ ಮಹತ್ವದ ದಾವೆಗಳಲ್ಲಿ ವಿಫಲಗೊಂಡಿರುವುದನ್ನು ಗಮನಿಸಲಾಗಿದೆ.
ಈ ನಿಟ್ಟಿನಲ್ಲಿ ಸರ್ಕಾರಿ ವ್ಯಾಜ್ಯ ನಿರ್ವಹಣೆಯ ವಿಷಯದಲ್ಲಿ ದಕ್ಷತೆ ಮತ್ತು ಜವಾಬ್ದಾರಿಯುತ ನಿರ್ವಹಣೆ ಖಚಿತಪಡಿಸಿಕೊಳ್ಳಲು ಪರಿಣಾಮಕಾರಿ ಕಾನೂನನ್ನು ಅಧಿನಿಯಮಿತಗೊಳಿಸುವುದು ಅಗತ್ಯವೆಂದು ಈ ವಿಧೇಯಕ ಜಾರಿಗೊಳಿಸಲಾಗಿದೆ.
ವಿಧೇಯಕದ ಮೇಲೆ ಬಿಜೆಪಿ ಸದಸ್ಯ ಮಾತನಾಡಿ, ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದರು.
ವಿಧಾನಪರಿಷತ್‌ನಲ್ಲಿ 3 ವಿಧೇಯಕಗಳ ಹಿಂಪಡೆತ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


