ಒಂದು ಕಾಲದಲ್ಲಿ ‘ಕ್ಯಾನ್ಸರ್’ ಎಂದರೆ ದೂರದ ಮಾತು. ಆದರೆ ಇಂದು ಅದು ಜ್ವರ, ಕೆಮ್ಮಿನಷ್ಟೇ ಸಾಧಾರಣವಾಗಿ ಜನರನ್ನು ಕಾಡುತ್ತಿದೆ. ಇದಕ್ಕೆ ಬೇರೆ ಯಾರೂ ಅಲ್ಲ, ನಮ್ಮ ಬದಲಾದ ಜೀವನಶೈಲಿ ಮತ್ತು ನಾವು ಸೇವಿಸುವ ವಿಷಕಾರಕ ಆಹಾರವೇ ನೇರ ಕಾರಣ!
ಇಂದಿನ ದಿನಗಳಲ್ಲಿ ಏನು ತಿನ್ನಬೇಕು? ಎನ್ನುವುದೇ ಒಂದು ಯಕ್ಷಪ್ರಶ್ನೆ. ಹೊರಗಿನ ಆಹಾರ ಆರೋಗ್ಯಕ್ಕೆ ವಿಷಕಾರಿ ಎಂದು ತಿಳಿದಿದ್ದರೂ, ಉದ್ಯೋಗಸ್ಥರು ಮತ್ತು ಅವಿವಾಹಿತರಿಗೆ ಹೋಟೆಲ್ ಆಹಾರ ಅನಿವಾರ್ಯವಾಗಿದೆ. ಆದರೆ, ಇದೇ ಅನಿವಾರ್ಯತೆ ನಮ್ಮನ್ನು ಸಾವಿನ ದವಡೆಗೆ ತಳ್ಳುತ್ತಿದೆ ಎಂಬುದು ಕಹಿ ಸತ್ಯ.ಕ್ಯಾನ್ಸರ್ ಬರಲು ವಂಶವಾಹಿ ಕಾರಣಗಳು ಕೇವಲ 10% ಇರಬಹುದು. ಆದರೆ ನಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿ ಸುಮಾರು 80 ರಿಂದ 90 ಪ್ರತಿಶತದಷ್ಟು ಪ್ರಭಾವ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಕ್ಯಾನ್ಸರ್ ಕಾರಕ ಅಂಶಗಳು ಹೆಚ್ಚಿರುವ ಸಂಸ್ಕರಿಸಿದ ಆಹಾರ (Processed Food), ಅತಿಯಾದ ಎಣ್ಣೆ ಮತ್ತು ರಾಸಾಯನಿಕಯುಕ್ತ ಆಹಾರಗಳಿಂದ ದೂರವಿರುವುದು ಇಂದಿನ ತುರ್ತು ಅಗತ್ಯವಾಗಿದೆ.ನಮ್ಮ ಆರೋಗ್ಯ ನಮ್ಮ ತಟ್ಟೆಯಲ್ಲಿರುವ ಆಹಾರದ ಮೇಲೆ ಅವಲಂಬಿತವಾಗಿದೆ. ಹೊರಗಿನ ಆಹಾರ ಅನಿವಾರ್ಯವಾದರೂ, ಅದರಲ್ಲಿ ಕನಿಷ್ಠ ಸುರಕ್ಷತೆ ಮತ್ತು ನೈಸರ್ಗಿಕ ಅಂಶಗಳಿರುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಹಾಗಾದರೆ ಕ್ಯಾನ್ಸರ್ ತಡೆಗೆ ಏನನ್ನು ತಿನ್ನಬಾರದು ಎನ್ನುವುದನ್ನು ಮೊದಲು ತಿಳಿದುಕೊಳ್ಳುವುದು ಉತ್ತಮ.
ಸಂಸ್ಕರಿಸಿದ ಮಾಂಸ
ಸಾಸೇಜ್, ಬಕಾನ್ ಮತ್ತು ಡೆಲಿ ಮಾಂಸಗಳಂತಹ ಸಂಸ್ಕರಿಸಿದ ಆಹಾರಗಳು ದೀರ್ಘಕಾಲ ಬಾಳಿಕೆ ಬರಲು ಉಪ್ಪು, ಹೊಗೆ ಮತ್ತು ರಾಸಾಯನಿಕಗಳನ್ನು ಬಳಸಲಾಗುತ್ತದೆ.ಮಾಂಸವನ್ನು ಕೆಡದಂತೆ ಇಡಲು ಬಳಸುವ ನೈಟ್ರೇಟ್ ಮತ್ತು ನೈಟ್ರೈಟ್ ರಾಸಾಯನಿಕಗಳು ದೇಹದೊಳಗೆ ಸೇರಿದಾಗ ‘ನೈಟ್ರೋಸಮೈನ್’ ಆಗಿ ಬದಲಾಗುತ್ತವೆ. ಇವು ನೇರವಾಗಿ ನಮ್ಮ DNA ಮೇಲೆ ದಾಳಿ ಮಾಡಿ ಕ್ಯಾನ್ಸರ್ ಉಂಟುಮಾಡುತ್ತವೆ.ಮಾಂಸವನ್ನು ಅತಿಯಾದ ಶಾಖದಲ್ಲಿ ಅಥವಾ ನೇರವಾಗಿ ಬೆಂಕಿಯಲ್ಲಿ ಸುಟ್ಟು (Grilling/Frying) ಬೇಯಿಸಿದಾಗ ಅದರಲ್ಲಿ ಹೆಟೆರೋಸೈಕ್ಲಿಕ್ ಅಮೈನ್ಸ್ (HCA) ಮತ್ತು ಹೈಡ್ರೋಕಾರ್ಬನ್‌ಗಳು ಉತ್ಪತ್ತಿಯಾಗುತ್ತವೆ. ಇವು ಕ್ಯಾನ್ಸರ್ ಕಾರಕಗಳಾಗಿವೆ (Carcinogenic).
ಸಿಹಿತಿಂಡಿಗಳು
ನಾವು ಕುಡಿಯುವ ತಂಪು ಪಾನೀಯಗಳು, ತಿನ್ನುವ ಸಿಹಿತಿಂಡಿಗಳು ನಾಲಿಗೆಗೆ ರುಚಿ ನೀಡಬಹುದು,ವೈದ್ಯಕೀಯ ಸಂಶೋಧನೆಗಳ ಪ್ರಕಾರ, ಕ್ಯಾನ್ಸರ್ ಕೋಶಗಳು ಬೆಳೆಯಲು ಬೇಕಾದ ಮುಖ್ಯ ಇಂಧನವೇ ಸಕ್ಕರೆ.ನಾವು ಅತಿಯಾದ ಸಕ್ಕರೆ ಅಥವಾ ಸಿಹಿ ಪಾನೀಯ ಸೇವಿಸಿದಾಗ ದೇಹದಲ್ಲಿ ಇನ್ಸುಲಿನ್ ಮಟ್ಟ ದಿಢೀರ್ ಏರಿಕೆಯಾಗುತ್ತದೆ. ಈ ಇನ್ಸುಲಿನ್ ಸಂಚಲನವು ದೇಹದಲ್ಲಿ ಟ್ಯೂಮರ್ (ಗೆಡ್ಡೆ) ಕೋಶಗಳು ವೇಗವಾಗಿ ಬೆಳೆಯಲು ಉತ್ತೇಜನ ನೀಡುತ್ತದೆ.ಸಕ್ಕರೆ ಮಿಶ್ರಿತ ಪಾನೀಯಗಳು ಮತ್ತು ಸೋಡಾಗಳ ಸೇವನೆಯಿಂದ ಸ್ತನ ಕ್ಯಾನ್ಸರ್, ಯಕೃತ್ (Liver) ಮತ್ತು ಕೊಲನ್ ಕ್ಯಾನ್ಸರ್ ಬರುವ ಸಾಧ್ಯತೆ ದಟ್ಟವಾಗಿರುತ್ತದೆ.ಬೇಕರಿ ಉತ್ಪನ್ನಗಳು, ಬಿಳಿ ಬ್ರೆಡ್, ಸೋಡಾ ಮತ್ತು ತಂಪು ಪಾನೀಯಗಳು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ (Glycemic Index) ಹೊಂದಿವೆ.
ಕುರುಕಲು ತಿಂಡಿ
ಫ್ರೆಂಚ್ ಫ್ರೈಸ್, ಆಲೂಗೆಡ್ಡೆ ಚಿಪ್ಸ್ ಅಥವಾ ರಸ್ತೆ ಬದಿಯ ಗರಿಗರಿ ಬಜ್ಜಿ-ಬೋಂಡಾಗಳು ಕಂಡರೆ ಯಾರಿಗೆ ತಾನೇ ಬಾಯಲ್ಲಿ ನೀರೂರುವುದಿಲ್ಲ? ಆದರೆ, ಈ ರುಚಿಯ ಹಿಂದೆ ಅಡಗಿದೆ ಮರಣಾಂತಿಕ ‘ಅಕ್ರಿಲಾಮೈಡ್’ (Acrylamide) ಎಂಬ ರಾಸಾಯನಿಕದ ಸಂಚು!ಮಕ್ಕಳು ಅತಿ ಹೆಚ್ಚು ಇಷ್ಟಪಟ್ಟು ತಿನ್ನುವ ಚಿಪ್ಸ್ ಮತ್ತು ಫ್ರೆಂಚ್ ಫ್ರೈಸ್‌ಗಳು ಕೇವಲ ಬೊಜ್ಜು ಮತ್ತು ಮಧುಮೇಹವನ್ನಷ್ಟೇ ನೀಡುವುದಿಲ್ಲ.ಇವುಗಳಲ್ಲಿರುವ ಅತಿಯಾದ ಉಪ್ಪು ಮತ್ತು ಅನಾರೋಗ್ಯಕರ ಕೊಬ್ಬಿನ ಜೊತೆಗೆ, ಹೆಚ್ಚಿನ ಉರಿಯಲ್ಲಿ ತಯಾರಾದ ಕಾರಣ ಉತ್ಪತ್ತಿಯಾಗುವ ವಿಷಕಾರಿ ಅಂಶಗಳು ಮಕ್ಕಳ ದೈಹಿಕ ಬೆಳವಣಿಗೆಯ ಮೇಲೆ ಮಾರಕ ಪರಿಣಾಮ ಬೀರುತ್ತವೆ.
ಮೈಕ್ರೋವೇವ್ ಪಾಪ್‌ಕಾರ್ನ್
ಪಾಪ್‌ಕಾರ್ನ್ ಪ್ಯಾಕೆಟ್‌ಗಳನ್ನು ತೆರೆದಾಗ ಬರುವ ಆ ಬೆಣ್ಣೆಯ ವಾಸನೆ ನಿಮಗೆ ಇಷ್ಟವಿರಬಹುದು, ಆದರೆ ಆ ವಾಸನೆಯ ಹಿಂದಿರುವುದು ಭೀಕರ ರಾಸಾಯನಿಕ.PFOA ಎಂಬ ಶತ್ರು: ಇನ್‌ಸ್ಟಂಟ್ ಪಾಪ್‌ಕಾರ್ನ್ ಪ್ಯಾಕೆಟ್‌ಗಳಲ್ಲಿ ಬಳಸುವ PFOA (Perfluorooctanoic acid) ಎಂಬ ರಾಸಾಯನಿಕವು ನೇರವಾಗಿ ಕ್ಯಾನ್ಸರ್ ಹರಡಲು ಕಾರಣವಾಗುತ್ತದೆ.ದರಲ್ಲಿ ಬೆಣ್ಣೆಯ ಘಮಕ್ಕೆ ಬಳಸುವ ಡಯಾಸೆಟೈಲ್ (Diacetyl) ಎಂಬ ಅಂಶವು ನಿಮ್ಮ ಶ್ವಾಸಕೋಶದ ಜೀವಕೋಶಗಳನ್ನು ಶಾಶ್ವತವಾಗಿ ಹಾನಿಗೊಳಿಸಿ ಶ್ವಾಸಕೋಶದ ಕ್ಯಾನ್ಸರ್ ತರುವ ಸಾಧ್ಯತೆ ಹೆಚ್ಚಿದೆ.ಇನ್‌ಸ್ಟಂಟ್ ನೂಡಲ್ಸ್ ಹಾಗೂ ‘ರೆಡಿ-ಟು-ಈಟ್’ ಆಹಾರಗಳಲ್ಲಿರುವ ಪ್ರಿಸರ್ವೇಟಿವ್‌ಗಳು ಮತ್ತು ಸಂಸ್ಕರಿಸಿದ ಕೊಬ್ಬು ನಿಮ್ಮ ಜೀರ್ಣಾಂಗವ್ಯೂಹವನ್ನೇ ಕ್ಯಾನ್ಸರ್ ಗೆಡ್ಡೆಯನ್ನಾಗಿ ಮಾಡಬಹುದು.
ಮದ್ಯಪಾನ
ನೀವು ಮದ್ಯ ಸೇವಿಸಿದಾಗ ನಿಮ್ಮ ಲಿವರ್ ಅದನ್ನು ಅಸೆಟಾಲ್ಡಿಹೈಡ್ (Acetaldehyde) ಎಂಬ ಸಂಯುಕ್ತವನ್ನಾಗಿ ವಿಭಜಿಸುತ್ತದೆ. ಇದೊಂದು ನೇರ ‘ಕಾರ್ಸಿನೋಜೆನ್’ (ಕ್ಯಾನ್ಸರ್ ಕಾರಕ) ಆಗಿದ್ದು, ನಿಮ್ಮ DNA ಮೇಲೆ ಪೆಟ್ಟು ನೀಡುತ್ತದೆ.ಮದ್ಯಪಾನವು ಸ್ತ್ರೀಯರ ದೇಹದಲ್ಲಿ ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸುವ ಮೂಲಕ ಸ್ತನ ಕ್ಯಾನ್ಸರ್ಗೆ ನೇರ ಹಾದಿ ಮಾಡಿಕೊಡುತ್ತದೆ.ಬಾಯಿ, ಗಂಟಲು, ಯಕೃತ್ತು (Liver), ಸ್ತನ ಮತ್ತು ಕರುಳಿನ ಕ್ಯಾನ್ಸರ್‌ಗಳಿಗೆ ಮದ್ಯಪಾನವೇ ಪ್ರಮುಖ ಮೂಲ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನೇ ಹಸಿದು ನುಂಗುತ್ತದೆ.
2025ರ ಕರಾಳ ಫ್ಲ್ಯಾಶ್‌ಬ್ಯಾಕ್: 2025ರಲ್ಲಿ ದೇಶವನ್ನು ಬೆಚ್ಚಿಬೀಳಿಸಿದ ಭೀಕರ ದುರಂತಗಳಿವು!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


