Thursday, March 26, 2026
spot_img
More
    spot_img
    HomeLatest newsರೈಲ್ವೆ ಪ್ರಯಾಣ ದರದಲ್ಲಿ ಅಲ್ಪ ಏರಿಕೆ: 500 ಕಿ.ಮೀ ದೂರಕ್ಕೆ 10 ರೂ. ಹೆಚ್ಚಳ,ಡಿ. 26...

    ರೈಲ್ವೆ ಪ್ರಯಾಣ ದರದಲ್ಲಿ ಅಲ್ಪ ಏರಿಕೆ: 500 ಕಿ.ಮೀ ದೂರಕ್ಕೆ 10 ರೂ. ಹೆಚ್ಚಳ,ಡಿ. 26 ರಿಂದ ಹೊಸ ದರ ಜಾರಿ!

    ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ರೈಲು ಟಿಕೆಟ್ ದರದಲ್ಲಿ ಅಲ್ಪ ಪ್ರಮಾಣದ ಏರಿಕೆ ಮಾಡುವ ಮೂಲಕ ಪ್ರಯಾಣಿಕರಿಗೆ ಶಾಕ್ ನೀಡಿದೆ. ಹೆಚ್ಚುತ್ತಿರುವ ಕಾರ್ಯಾಚರಣಾ ವೆಚ್ಚವನ್ನು ಸರಿದೂಗಿಸಲು ಈ ಕ್ರಮ ಕೈಗೊಳ್ಳಲಾಗಿದ್ದು, ಹೊಸ ದರಗಳು 2025ರ ಡಿಸೆಂಬರ್ 26ರಿಂದ ಜಾರಿಗೆ ಬರಲಿವೆ.

    ದರ ಏರಿಕೆ

    ಸಾಮಾನ್ಯ ರೈಲುಗಳು: 215 ಕಿ.ಮೀ ಗಿಂತ ಹೆಚ್ಚಿನ ದೂರದ ಪ್ರಯಾಣಕ್ಕೆ ಪ್ರತಿ ಕಿ.ಮೀಗೆ 1 ಪೈಸೆ ಏರಿಕೆ.

    ಮೇಲ್/ಎಕ್ಸ್‌ಪ್ರೆಸ್ ರೈಲುಗಳು: ಎಸಿ ಮತ್ತು ನಾನ್-ಎಸಿ ಎರಡೂ ವಿಭಾಗಗಳಲ್ಲಿ ಪ್ರತಿ ಕಿ.ಮೀಗೆ 2 ಪೈಸೆ ಏರಿಕೆ.

    ಯಾರಿಗೆ ವಿನಾಯಿತಿ?: 215 ಕಿ.ಮೀ ಒಳಗಿನ ಪ್ರಯಾಣಿಕರಿಗೆ, ಉಪನಗರ (Suburban) ರೈಲುಗಳಿಗೆ ಮತ್ತು ಮಾಸಿಕ ಸೀಸನ್ ಪಾಸ್ (MST) ಹೊಂದಿರುವವರಿಗೆ ಯಾವುದೇ ದರ ಏರಿಕೆ ಇರುವುದಿಲ್ಲ

    ಅಧಿಕಾರಿಗಳ ಪ್ರಕಾರ, ಈ ಏರಿಕೆಯು ಸಾಮಾನ್ಯ ಜನರ ಮೇಲೆ ದೊಡ್ಡ ಪರಿಣಾಮ ಬೀರದು.500 ಕಿ.ಮೀ ಪ್ರಯಾಣ ನಾನ್-ಎಸಿ ಮೇಲ್ ರೈಲಿನಲ್ಲಿ ಸುಮಾರು 10 ರೂ. ಹೆಚ್ಚಳವಾಗಲಿದೆ.1000 ಕಿ.ಮೀ ಪ್ರಯಾಣ ಸಂಪೂರ್ಣ ಕ್ರಾಂತಿ, ವಂದೇ ಭಾರತ್ ಅಥವಾ ರಾಜಧಾನಿ ಎಕ್ಸ್‌ಪ್ರೆಸ್‌ನಂತಹ ರೈಲುಗಳಲ್ಲಿ ಸುಮಾರು 20 ರೂ. ಹೆಚ್ಚುವರಿ ಪಾವತಿಸಬೇಕಾಗುತ್ತದೆ.

    ರೈಲ್ವೆ ಇಲಾಖೆಯ ನಿರ್ವಹಣಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ. 2024-25ರಲ್ಲಿ ಒಟ್ಟು ನಿರ್ವಹಣಾ ವೆಚ್ಚ 2.63 ಲಕ್ಷ ಕೋಟಿ ರೂ. ತಲುಪಿದೆ. ಇದರಲ್ಲಿ ಮಾನವ ಸಂಪನ್ಮೂಲಕ್ಕೆ 1.15 ಲಕ್ಷ ಕೋಟಿ ರೂ. ಮತ್ತು ಪಿಂಚಣಿಗಾಗಿ 60,000 ಕೋಟಿ ರೂ. ವ್ಯಯವಾಗುತ್ತಿದೆ. ಈ ಆರ್ಥಿಕ ಹೊರೆಯನ್ನು ತಗ್ಗಿಸಲು ದರ ಪರಿಷ್ಕರಣೆ ಅನಿವಾರ್ಯ ಎಂದು ಇಲಾಖೆ ಸಮರ್ಥಿಸಿಕೊಂಡಿದೆ.2025ರ ಜುಲೈನಲ್ಲಿ ಮಾಡಲಾಗಿದ್ದ ದರ ಏರಿಕೆಯಿಂದ ರೈಲ್ವೆಗೆ 700 ಕೋಟಿ ರೂ. ಹೆಚ್ಚುವರಿ ಆದಾಯ ಬಂದಿತ್ತು.

    ಇದೀಗ ಡಿಸೆಂಬರ್‌ನಿಂದ ಜಾರಿಯಾಗುವ ಹೊಸ ದರದಿಂದ 2026ರ ಮಾರ್ಚ್ 31ರೊಳಗೆ ಸುಮಾರು 600 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿಯನ್ನು ರೈಲ್ವೆ ಸಚಿವಾಲಯ ಹೊಂದಿದೆ.ಒಟ್ಟಾರೆಯಾಗಿ, ಒಂದು ವರ್ಷದ ಅವಧಿಯಲ್ಲಿ ರೈಲ್ವೆ ಇಲಾಖೆಯು ಎರಡನೇ ಬಾರಿಗೆ ದರ ಏರಿಕೆ ಮಾಡಿದ್ದು, ದೂರದ ಪ್ರಯಾಣ ಮಾಡುವವರಿಗೆ ತುಸು ದುಬಾರಿಯಾಗಲಿದೆ.

    ರೈಲ್ವೆ ಇಲಾಖೆಯು ಕೇವಲ ಟಿಕೆಟ್ ದರದಿಂದ ಲಾಭ ಗಳಿಸುತ್ತಿಲ್ಲ. ಸಿಬ್ಬಂದಿ ವೇತನ ಮತ್ತು ಪಿಂಚಣಿಗಾಗಿಯೇ ವರ್ಷಕ್ಕೆ ಸುಮಾರು 1.75 ಲಕ್ಷ ಕೋಟಿ ರೂ. ವ್ಯಯಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಇಂಧನ ಮತ್ತು ತಂತ್ರಜ್ಞಾನದ ವೆಚ್ಚವೂ ಹೆಚ್ಚಾಗಿರುವುದರಿಂದ, ಈ 1-2 ಪೈಸೆ ಏರಿಕೆ ಅನಿವಾರ್ಯ ಎಂಬುದು ತಜ್ಞರ ಅಭಿಪ್ರಾಯ.

    ಸೋಷಿಯಲ್ ಮೀಡಿಯಾದಲ್ಲೂ ಮೋದಿ ಅಧಿಪತ್ಯ: ‘ಎಕ್ಸ್’ ಟಾಪ್-10 ಲಿಸ್ಟ್‌ನಲ್ಲಿ ಪ್ರಧಾನಿಯದ್ದೇ ಹವಾ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್ರಾ! ಮನವಮಿ ಹಬ್ಬಕ್ಕೆ ಮಾರುಕಟ್ಟೆ ಬಂದ್ ಆಗುತ್ತಾ? ಹೂಡಿಕೆದಾರರಿಗೆ ಕ್ಲಿಯರ್ ಮಾಹಿತಿ!

    “ಸ್ಟಾಕ್ ಮಾರ್ಕೆಟ್ ಹಾಲಿಡೇ 2026” ಇದೀಗ ಹೂಡಿಕೆದಾರರಲ್ಲಿ ದೊಡ್ಡ ಗೊಂದಲ ಮೂಡಿಸಿದೆ. ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಅಥವಾ ಶುಕ್ರವಾರ ಷೇರು ಮಾರುಕಟ್ಟೆ ಬಂದ್ ಆಗುತ್ತದೆಯಾ? ಎಂಬ ಪ್ರಶ್ನೆ ಟ್ರೇಡರ್‌ಗಳ ನಡುವೆ ಭಾರೀ...

    ಬ್ರೇಕಿಂಗ್! ಮಾರುಕಟ್ಟೆ ರಾಕೆಟ್—ಸೆನ್ಸೆಕ್ಸ್ 1300 ಪಾಯಿಂಟ್ ಜಿಗಿತ! ರೂಪಾಯಿ ಕುಸಿತ, ಚಿನ್ನ ಏರಿಕೆ… ಏನಿದು ಮಿಶ್ರ ಸಿಗ್ನಲ್?

    “ಸ್ಟಾಕ್ ಮಾರ್ಕೆಟ್ 24 ಮಾರ್ಚ್ 2026” ಹೂಡಿಕೆದಾರರಿಗೆ ಒಂದೇ ದಿನದಲ್ಲಿ ರೋಲರ್ ಕೋಸ್ಟರ್ ಅನುಭವ ನೀಡಿದೆ! ಒಂದೆಡೆ ಷೇರು ಮಾರುಕಟ್ಟೆ ಭರ್ಜರಿ ಏರಿಕೆ ಕಂಡಿದ್ದರೆ, ಇನ್ನೊಂದೆಡೆ ರೂಪಾಯಿ ಕುಸಿತ ಮತ್ತು ಚಿನ್ನದ ಬೆಲೆ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading