ಒಂದು ಆರೋಗ್ಯಕರ ದೇಹ ಮತ್ತು ಎಲ್ಲ ಆಂತರಿಕ ಅಂಗಾಂಗಗಳ ಸರಿಯಾದ ಕಾರ್ಯನಿರ್ವಹಣೆಗೆ, ನಾವು ಸೇವಿಸುವ ಆಹಾರದಲ್ಲಿನ ವಿವಿಧ ಬಗೆಯ ಪೋಷಕಾಂಶಗಳು ವಿಟಮಿನ್ಸ್, ಪ್ರೋಟೀನ್, ನಾರಿನಾಂಶ, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ ಮತ್ತು ಇತರ ಖನಿಜಾಂಶಗಳು ದೇಹಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ಸಿಗಬೇಕು. ಈ ಪೋಷಕಾಂಶಗಳ ಕೊರತೆಯು ದೇಹದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರಲ್ಲಿ, ಕ್ಯಾಲ್ಸಿಯಂ ನಂತಹ ಪ್ರಮುಖ ಖನಿಜಾಂಶದ ಕೊರತೆಯು ಗಂಭೀರ ಪರಿಣಾಮಗಳನ್ನು ಬೀರಬಹುದು.
ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದರೆ, ಅದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಾನವ ದೇಹವು ವಿವಿಧ ಅಂಗಾಂಗಗಳ ಸಂಕೀರ್ಣವಾದರೆ, ನಾವು ಸೇವಿಸುವ ಆಹಾರವೂ ವಿವಿಧ ಪೌಷ್ಟಿಕ ಸತ್ವಗಳ ಸಂಯುಕ್ತವಾಗಿದೆ. ಪ್ರತಿ ಪೌಷ್ಟಿಕಾಂಶಕ್ಕೂ ತನ್ನದೇ ಆದ ನಿರ್ದಿಷ್ಟ ಕಾರ್ಯವಿದೆ. ಯಾವುದೇ ಒಂದು ಪೌಷ್ಟಿಕಾಂಶ ಕಡಿಮೆಯಾದರೂ ಅದಕ್ಕೆ ಸಂಬಂಧಿಸಿದ ಕಾಯಿಲೆಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತವೆ.
ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿಂದ ಕಾಣಿಸಿಕೊಳ್ಳುವ ಲಕ್ಷಣಗಳು
1.ಮೂಳೆಗಳ ದೌರ್ಬಲ್ಯ ಮತ್ತು ಮುರಿತದ ಅಪಾಯ
ಕ್ಯಾಲ್ಸಿಯಂ ಕೊರತೆಯ ಅತ್ಯಂತ ಸಾಮಾನ್ಯ ಲಕ್ಷಣವೆಂದರೆ ಮೂಳೆಗಳು ದುರ್ಬಲಗೊಳ್ಳುವುದು.ನಮ್ಮ ದೇಹದಲ್ಲಿರುವ ಶೇಕಡಾ 99 ರಷ್ಟು ಕ್ಯಾಲ್ಸಿಯಂ ಮೂಳೆಗಳು ಮತ್ತು ಹಲ್ಲುಗಳಲ್ಲಿಯೇ ಸಂಗ್ರಹವಾಗಿರುತ್ತದೆ. ಆದ್ದರಿಂದ, ಕೊರತೆಯು ಅವುಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.ವಯಸ್ಸಾದವರಲ್ಲಿ ಈ ಸಮಸ್ಯೆ ತೀವ್ರವಾಗಿ ಕಂಡುಬರುತ್ತದೆ, ಏಕೆಂದರೆ ಅವರ ಮೂಳೆಗಳು ಈಗಾಗಲೇ ದುರ್ಬಲಗೊಂಡಿರುತ್ತವೆ, ಇದರಿಂದಾಗಿ ಮೂಳೆ ಮುರಿತದ ಅಪಾಯ (ಫ್ರ್ಯಾಕ್ಚರ್) ಹೆಚ್ಚಾಗುತ್ತದೆ.
ದೇಹದಲ್ಲಿ ಕಡಿಮೆ ಕ್ಯಾಲ್ಸಿಯಂ ಪ್ರಮಾಣವು ಮೂಳೆಗಳ ಸಾಂದ್ರತೆಯನ್ನು (Bone Density) ಕಡಿಮೆ ಮಾಡುತ್ತದೆ ಮತ್ತು ಸಣ್ಣಪುಟ್ಟ ಏಟು ಉಂಟಾದರೂ ಮೂಳೆಗಳು ಮುರಿಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸಿದಾಗ ನಿರಂತರ ನೋವು ಕಾಣಿಸಿಕೊಳ್ಳಬಹುದು.
2.ಸ್ನಾಯು ಸೆಳೆತ ಮತ್ತು ಬಿಗಿತ
ಸ್ನಾಯು ಸಂಕೋಚನ (Contraction) ಮತ್ತು ವಿಶ್ರಾಂತಿಗೆ (Relaxation) ಕ್ಯಾಲ್ಸಿಯಂ ಅತ್ಯಗತ್ಯವಾಗಿದೆ.ಕ್ಯಾಲ್ಸಿಯಂ ಕೊರತೆಯು ಸ್ನಾಯುಗಳಲ್ಲಿ ಬಿಗಿತ (Stiffness), ಸೆಳೆತ (Cramps) ಮತ್ತು ಒತ್ತಡಗಳಿಗೆ ಕಾರಣವಾಗಬಹುದು.ಈ ಸೆಳೆತಗಳು ಸಾಮಾನ್ಯವಾಗಿ ತೊಡೆಗಳು, ತೋಳುಗಳು ಮತ್ತು ಕಂಕುಳುಗಳಲ್ಲಿ (Armpits) ಹೆಚ್ಚಾಗಿ ಕಂಡುಬರುತ್ತವೆ.
3.ಹಲ್ಲಿನ ಸಮಸ್ಯೆಗಳು
ಕ್ಯಾಲ್ಸಿಯಂ ಕೊರತೆಯ ಲಕ್ಷಣಗಳಲ್ಲಿ ದುರ್ಬಲಗೊಂಡ ಹಲ್ಲುಗಳು ಪ್ರಮುಖವಾಗಿವೆ.ಕ್ಯಾಲ್ಸಿಯಂ ಕಡಿಮೆಯಾದರೆ ಹಲ್ಲು ನೋವು ಮತ್ತು ಉಳುಕು ಹಲ್ಲು (ಸಡಿಲವಾದ ಹಲ್ಲು) ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.ಕ್ಯಾಲ್ಸಿಯಂ ಕೊರತೆಯು ಹಲ್ಲುಗಳನ್ನು ದುರ್ಬಲಗೊಳಿಸುವುದರಿಂದ, ಇದು ಹಲ್ಲಿನ ಕುಳಿಗಳ (Dental Cavities) ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಹಲ್ಲು ಮುರಿಯುವುದು ಸಹ ಸಾಮಾನ್ಯವಾಗಬಹುದು. ಊದಿಕೊಂಡ ಒಸಡುಗಳು (Gums) ಮತ್ತು ಹಲ್ಲಿನ ಬೇರುಗಳು (Roots) ದುರ್ಬಲಗೊಳ್ಳುವುದು ಸಹ ಕ್ಯಾಲ್ಸಿಯಂ ಕೊರತೆಯಿಂದಾಗಿ ಸಂಭವಿಸಬಹುದು
4.ನಿರಂತರ ಸುಸ್ತು ಮತ್ತು ಆಯಾಸ
ವಿಪರೀತ ಸುಸ್ತು ಮತ್ತು ಆಯಾಸ ಕಾಣಿಸಿಕೊಳ್ಳುವುದು ಕ್ಯಾಲ್ಸಿಯಂ ಕೊರತೆಯ ಮುಖ್ಯ ಸಂಕೇತವಾಗಿದೆ.ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಳ್ಳಲು ಆಗದಿರುವುದು ಅಥವಾ ದಿನಾ ಪೂರ್ತಿ ವಿಶ್ರಾಂತಿ (Rest) ತೆಗೆದುಕೊಂಡರೂ ಕೂಡ ಸುಸ್ತು ಮತ್ತು ವೀಕ್ನೆಸ್ (Weakness) ಮುಂದುವರಿಯುತ್ತಿದ್ದರೆ, ಅದು ಕ್ಯಾಲ್ಸಿಯಂ ಕೊರತೆಯಾಗಿರಬಹುದು.ದೇಹದಲ್ಲಿನ ಶಕ್ತಿಯ ಚಯಾಪಚಯ ಕ್ರಿಯೆಯಲ್ಲಿ (Energy Metabolism) ಕ್ಯಾಲ್ಸಿಯಂ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಕೊರತೆಯು ಶಕ್ತಿಯ ಮಟ್ಟ (Energy Level) ಕಡಿಮೆಯಾಗಲು ಕಾರಣವಾಗುತ್ತದೆ.
5.ರೋಗನಿರೋಧಕ ಶಕ್ತಿ ಕುಗ್ಗುವಿಕೆ
ಸೋಂಕಿನ ಅಪಾಯ: ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು (Immune System) ಅಚ್ಚುಕಟ್ಟಾಗಿ ಕಾಪಾಡುವಲ್ಲಿ ಕ್ಯಾಲ್ಸಿಯಂ ಪಾತ್ರ ಮುಖ್ಯ.ಕ್ಯಾಲ್ಸಿಯಂ ಕೊರತೆಯಾದರೆ, ದೇಹದ ಮೇಲೆ ಸೋಂಕುಕಾರಕ ಕ್ರಿಮಿಗಳು ತಮ್ಮ ಪ್ರಭಾವ ಬೀರುವಂತೆ ಆಗುತ್ತದೆ ಮತ್ತು ವ್ಯಕ್ತಿಗೆ ಕಾಯಿಲೆಗಳು ಬರುವಂತೆ ಮಾಡುತ್ತದೆ.ಇದು ಮುಖ್ಯವಾಗಿ ಉಸಿರಾಟನಾಳದ (Respiratory Tract) ಹಾಗೂ ಕರುಳಿನ ಭಾಗದಲ್ಲಿ (Intestinal Tract) ಸೋಂಕು ಎದುರಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ದುಬೈ ಏರ್ ಶೋನಲ್ಲಿ ತೇಜಸ್ ಯುದ್ಧ ವಿಮಾನ ಪತನ! ಆಘಾತಕಾರಿ ವಿಡಿಯೋ ಇಲ್ಲಿದೆ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


