ದುಬೈನಲ್ಲಿ ನಡೆಯುತ್ತಿದ್ದ ಅಂತರರಾಷ್ಟ್ರೀಯ ವೈಮಾನಿಕ ಪ್ರದರ್ಶನದ ವೇಳೆ ಭಾರತದ ಹೆಮ್ಮೆಯ, ಬೆಂಗಳೂರಿನ ಎಚ್‌ಎಎಲ್ (HAL) ನಿರ್ಮಿತ ‘ತೇಜಸ್’ ಯುದ್ಧ ವಿಮಾನ ಇಂದು ಮಧ್ಯಾಹ್ನ 2:10ಕ್ಕೆ (ಸ್ಥಳೀಯ ಸಮಯ) ಆಕಾಶದಲ್ಲಿ ಹಾರುತ್ತಿದ್ದಾಗಲೇ ಪತನಗೊಂಡಿದೆ.
ಪ್ರೇಕ್ಷಕರು ನೋಡುತ್ತಿದ್ದಂತೆಯೇ ವಿಮಾನವು ನೆಲಕ್ಕೆ ಅಪ್ಪಳಿಸಿ ದೊಡ್ಡ ಸ್ಫೋಟ ಮತ್ತು ದಟ್ಟವಾದ ಹೊಗೆ ಆವರಿಸಿತು. ಈ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಪೈಲಟ್‌ಗೆ ಏನಾಯಿತು ಎಂಬುದು ಇನ್ನೂ ದೃಢಪಟ್ಟಿಲ್ಲ ಅವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.ತಾಂತ್ರಿಕ ದೋಷವೇ ಅಥವಾ ಪೈಲಟ್‌ನ ದೋಷವೇ ಎಂಬುದನ್ನು ತಿಳಿಯಲು ತಜ್ಞರ ತಂಡ ತನಿಖೆ ಆರಂಭಿಸಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


