ಬೆಂಗಳೂರು: 2025ರ ವರ್ಷ ಮುಗಿಯಲು ಇನ್ನು ಕೇವಲ 7 ದಿನಗಳಷ್ಟೇ ಬಾಕಿ ಇವೆ. ಈ ಹೊತ್ತಿನಲ್ಲಿ ಖ್ಯಾತ ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿ (Swiggy) ತನ್ನ 10ನೇ ಆವೃತ್ತಿಯ ‘ಹೌ ಇಂಡಿಯಾ ಸ್ವಿಗ್ಗಿಡ್’ (How India Swiggy’d) ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ, ಭಾರತೀಯರ ಆಹಾರದ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಈ ವರ್ಷವೂ ಬಿರಿಯಾನಿಯೇ ‘ಆಹಾರದ ರಾಜ’ನಾಗಿ ಮೆರೆದಿದೆ.
ಪಿಜ್ಜಾ, ಬರ್ಗರ್‌ಗಳ ಎಷ್ಟೇ ಟ್ರೆಂಡ್ ಇದ್ದರೂ ಬಿರಿಯಾನಿಯ ಜನಪ್ರಿಯತೆ ಕುಗ್ಗಿಲ್ಲ. ಸತತ 10ನೇ ವರ್ಷ ಕೂಡ ಬಿರಿಯಾನಿ ಅಗ್ರಸ್ಥಾನದಲ್ಲಿದೆ.
ಒಟ್ಟು ಆರ್ಡರ್‌ಗಳು: 93 ಮಿಲಿಯನ್ (9.3 ಕೋಟಿ).
ಪ್ರತಿ ನಿಮಿಷಕ್ಕೆ: 194 ಬಿರಿಯಾನಿಗಳು ಆರ್ಡರ್ ಆಗಿವೆ.
ಪ್ರತಿ ಸೆಕೆಂಡಿಗೆ: 3.25 ಬಿರಿಯಾನಿಗಳು
ಚಿಕನ್ ಬಿರಿಯಾನಿ ಕ್ರೇಜ್ ಒಟ್ಟು ಬಿರಿಯಾನಿಗಳಲ್ಲಿ 57.7 ಮಿಲಿಯನ್ ಆರ್ಡರ್‌ಗಳು ಕೇವಲ ಚಿಕನ್ ಬಿರಿಯಾನಿಯದ್ದೇ ಆಗಿದೆ.
ಬಿರಿಯಾನಿಯ ಅಧಿಪತ್ಯದ ನಂತರದ ಸ್ಥಾನಕ್ಕಾಗಿ ಪಾಶ್ಚಿಮಾತ್ಯ ಖಾದ್ಯಗಳ ನಡುವೆ ಈ ವರ್ಷ ಭರ್ಜರಿ ಪೈಪೋಟಿ ಏರ್ಪಟ್ಟಿತ್ತು. ಸ್ವಿಗ್ಗಿ ವರದಿಯ ಪ್ರಕಾರ, ಬರೋಬ್ಬರಿ 44.2 ಮಿಲಿಯನ್ ಆರ್ಡರ್‌ಗಳನ್ನು ಪಡೆಯುವ ಮೂಲಕ ಬರ್ಗರ್ ಎರಡನೇ ಅತ್ಯಂತ ಜನಪ್ರಿಯ ಆಹಾರವಾಗಿ ಹೊರಹೊಮ್ಮಿದೆ.
ಬರ್ಗರ್‌ಗೆ ತೀವ್ರ ಪೈಪೋಟಿ ನೀಡಿದ ಪಿಜ್ಜಾ, 40.1 ಮಿಲಿಯನ್ ಆರ್ಡರ್‌ಗಳೊಂದಿಗೆ ಮೂರನೇ ಸ್ಥಾನವನ್ನು ಅಲಂಕರಿಸಿದೆ. ಈ ನಡುವೆ ಪಿಜ್ಜಾ ವಿಭಾಗದಲ್ಲಿ ಅಚ್ಚರಿಯ ದಾಖಲೆಯೊಂದು ಸೃಷ್ಟಿಯಾಗಿದ್ದು, ಗ್ರಾಹಕರೊಬ್ಬರು ಒಂದೇ ಆರ್ಡರ್‌ನಲ್ಲಿ ₹47,578 ಮೌಲ್ಯದ ಪಿಜ್ಜಾಗಳನ್ನು ತರಿಸಿಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ.
ಇನ್ನು ಸಸ್ಯಾಹಾರಿ ಖಾದ್ಯಗಳ ಪಟ್ಟಿಯಲ್ಲಿ ದಕ್ಷಿಣ ಭಾರತದ ಹೆಮ್ಮೆ ದೋಸೆ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. 26.2 ಮಿಲಿಯನ್ ಆರ್ಡರ್‌ಗಳೊಂದಿಗೆ ದೋಸೆಯು ಸಸ್ಯಾಹಾರಿಗಳ ಆಲ್-ಟೈಮ್ ಫೇವರೆಟ್ ಆಹಾರವಾಗಿ ಮುಂದುವರಿದಿದೆ.
ಭಾರತೀಯರ ಸಂಜೆಯ ಹರಟೆ ಮತ್ತು ‘ಟೀ ಟೈಮ್’ ಎಂಬುದು ಕೇವಲ ಅಭ್ಯಾಸವಲ್ಲ, ಅದೊಂದು ಸಂಪ್ರದಾಯ ಎಂಬುದು ಸ್ವಿಗ್ಗಿ ವರದಿಯಿಂದ ಮತ್ತೊಮ್ಮೆ ದೃಢಪಟ್ಟಿದೆ. 2025ರಲ್ಲಿ ಸಂಜೆಯ ಸ್ನ್ಯಾಕ್ಸ್ ವಿಭಾಗದಲ್ಲಿ ಸಮೋಸಾ ಮತ್ತು ಚಹಾ ಜೋಡಿ ಅಧಿಪತ್ಯ ಸಾಧಿಸಿದೆ. ಬರೋಬ್ಬರಿ 3.42 ಮಿಲಿಯನ್ ಸಮೋಸಾಗಳು ಜನರ ಹೊಟ್ಟೆ ಸೇರಿದರೆ, ಇವುಗಳಿಗೆ ಸಾಥ್ ನೀಡಲು 2.9 ಮಿಲಿಯನ್ ಕಪ್‌ಗಳಷ್ಟು ಘಮಘಮಿಸುವ ಶುಂಠಿ ಚಹಾವನ್ನು ಆರ್ಡರ್ ಮಾಡಲಾಗಿದೆ.
ಇನ್ನು ಸಿಹಿ ಪ್ರಿಯರ ವಿಷಯಕ್ಕೆ ಬಂದರೆ, ಭಾರತೀಯರು ಈ ವರ್ಷ ಸಕ್ಕರೆ ಅಂಶವಿರುವ ಖಾದ್ಯಗಳಿಗೂ ಮನಸೋತಿದ್ದಾರೆ. ಹಬ್ಬದ ದಿನಗಳಷ್ಟೇ ಅಲ್ಲದೆ ಸಾಮಾನ್ಯ ದಿನಗಳಲ್ಲೂ ಗುಲಾಬ್ ಜಾಮೂನ್, ಕಾಜು ಕಟ್ಲಿ ಮತ್ತು ಬೇಸನ್ ಲಡ್ಡುಗಳು ಅತಿ ಹೆಚ್ಚು ಮಾರಾಟವಾದ ಸಿಹಿ ತಿನಿಸುಗಳಾಗಿ ಹೊರಹೊಮ್ಮಿವೆ. ಇವುಗಳ ಜೊತೆಗೆ ಪಾಶ್ಚಿಮಾತ್ಯ ರುಚಿಯಾದ ಚಾಕೊಲೇಟ್ ಕೇಕ್ ಸಹ ಸಿಹಿ ಪ್ರಿಯರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡು ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ನಗರವಾಸಿಗಳು ತಡರಾತ್ರಿಯಲ್ಲಿ ಹಸಿವಾದಾಗ ಹೆಚ್ಚಾಗಿ ‘ವೆಜ್ ಪಿಜ್ಜಾ’ ಮೊರೆ ಹೋಗಿದ್ದಾರೆ. ಅದೇ ರೀತಿ ಮಧ್ಯಾಹ್ನ 3ರಿಂದ ಸಂಜೆ 7ರ ಅವಧಿಯಲ್ಲಿ ಬರ್ಗರ್‌ಗಳ ಆರ್ಡರ್ ಅತಿ ಹೆಚ್ಚಾಗಿರುತ್ತದೆ (ಸುಮಾರು 10.5 ಮಿಲಿಯನ್ ಬರ್ಗರ್‌ಗಳು ಈ ಸಮಯದಲ್ಲಿ ಮಾರಾಟವಾಗಿವೆ,2025ರಲ್ಲಿ ಭಾರತೀಯರು ನಮ್ಮ ಸೇವೆಯನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಈ ಬೃಹತ್ ಪ್ರಮಾಣದ ಆರ್ಡರ್‌ಗಳು ಆಹಾರ ವಿತರಣಾ ಕ್ಷೇತ್ರದಲ್ಲಿ ನಮ್ಮ ಸಾಧನೆಯ ಮೈಲಿಗಲ್ಲು, ಎಂದು ಸ್ವಿಗ್ಗಿ ಮಾರ್ಕೆಟ್‌ಪ್ಲೇಸ್‌ನ ಸಿಇಒ ರೋಹಿತ್ ಕಪೂರ್ ಸಂತಸ ವ್ಯಕ್ತಪಡಿಸಿದ್ದಾರೆ
ಮುಂದಿನ 5–10 ವರ್ಷಗಳಲ್ಲಿ ತಾಮ್ರಕ್ಕೆ ಚಿನ್ನದ ಮೌಲ್ಯ?ತಾಮ್ರದ ದರ ಚಿನ್ನದ ಮಟ್ಟಕ್ಕೆ ಏರಲಿದೆಯೇ?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


