ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ನಡೆದ ಮಾಳಿಂಗರಾಯ ಜಾತ್ರೆಯ ಅಚ್ಚರಿಯ ಘಟನೆ ನಡೆದಿದೆ. 2025 ರ ಜಾತ್ರೆಯಲ್ಲಿ ದೇವರಿಗೆ ಅರ್ಪಿಸಲಾದ ತೆಂಗಿನಕಾಯಿ ಹರಾಜಿನಲ್ಲಿ ಭಕ್ತನೊಬ್ಬ ಬರೋಬ್ಬರಿ ₹5,71,001 ರೂ.ನೀಡಿದ ಸಂಗತಿ ಎಲ್ಲರನ್ನೂ ಅಚ್ಚರಿಗೆಡುಸಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ವಿವಿಧ ಆಚರಣೆಗಳ ನಂತರ ಮಾಳಿಂಗರಾಯ ಜಾತ್ರೆ ಅದ್ದೂರಿಯಾಗಿ ನಡೆಯಿತು. ಜಾತ್ರೆಯ ಕೊನೆ ಹಂತದಲ್ಲಿ ದೇವರಿಗೆ ಅರ್ಪಿಸಲಾದ ವಸ್ತುಗಳ ಹರಾಜು ಮಾಡುವ ಪರಂಪರೆ ಅನುಸರಿಸಲಾಗಿದೆ. ಈ ಹರಾಜಿನಲ್ಲಿ ದೇವರ ಗದ್ದುಗೆ ಮೇಲೆ ಪೂಜಿಸಲಾದ ತೆಂಗಿನಕಾಯಿ ಪ್ರಮುಖ ಆಕರ್ಷಣೆಯಾಗಿ ಹರಾಜು ಆರಂಭದಲ್ಲಿ 100 ರೂಪಾಯಿನಿಂದ ಪ್ರಾರಂಭವಾಗಿ ಕ್ರಮೇಣ ಹೆಚ್ಚುತ್ತಾ ಹೋಗಿ ಕೊನೆಗೆ ತಲುಪಿದ ಬೆಲೆ ₹5,71,001 ರೂ.!
ಈ ಭಾರಿ ಮೊತ್ತಕ್ಕೆ ವಿಜಯಪುರ ಜಿಲ್ಲೆಯ ತಿಕೋಟಾ ಗ್ರಾಮದ ಮಾಹಾವೀರ ಹರಕೆ ಎಂಬ ಭಕ್ತ ತೆಂಗಿನಕಾಯಿಯನ್ನ ಖರೀದಿಸಿ ಮಾಳಿಂಗರಾಯನ ಮೇಲಿನ ತಮ್ಮ ಭಕ್ತಿಯನ್ನು ಸಾರಿದ್ದಾರೆ.ಮಾಹಾವೀರ ಅವರ ಮೊದಲ ಭಾರಿ ಅಲ್ಲ. ಹಿಂದೆಯೂ ಅವರು ಇದೇ ತೆಂಗಿನಕಾಯಿ ಹರಾಜಿನಲ್ಲಿ ₹6,50,001 ರೂಪಾಯಿಗೆ ತೆಂಗಿನಕಾಯಿ ಪಡೆದ ಅನುಭವವಿದೆ.
ಇದು ನಮಗೆ ದೇವರ ಮೇಲಿರುವ ಭಕ್ತಿ ಹಾಗೂ ನಂಬಿಕೆ. ಮಾಳಿಂಗರಾಯನ ಕೃಪೆಯಿಂದ ನಮಗೆ ಒಳಿತಾಗಿದೆ. ನಮಗೆ ಮಾಳಿಂಗರಾಯ ಸಂಪತ್ತು ಸಮೃದ್ದಿ ನೀಡಿದ್ದಾನೆ. ಹಿಂದೊಮ್ಮೆ ನಾನೇ ಹೆಚ್ಚು ಹರಾಜು ಕೂಗಿ ಪಡೆದಿದ್ದೆ ಈಗ ಮತ್ತೆ ನನಗೆ ದೇವರ ತೆಂಗಿನಕಾಯಿ ಸಿಕ್ಕಿದ್ದು ನನ್ನ ಪುಣ್ಯ ಎಂದು ಮಾಹಾವೀರ ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


