Saturday, March 28, 2026
spot_img
More
    spot_img
    HomeNational/ Internationalರಾಜ್ಯಸಭೆ ಆರು ಸ್ಥಾನಗಳಿಗೆ ಉಪಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

    ರಾಜ್ಯಸಭೆ ಆರು ಸ್ಥಾನಗಳಿಗೆ ಉಪಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

    ನವದೆಹಲಿ: ದೇಶದ ನಾಲ್ಕು ರಾಜ್ಯಗಳಲ್ಲಿ ಖಾಲಿ ಇರುವ ರಾಜ್ಯಸಭೆಯ ಆರು ಸ್ಥಾನಗಳಿಗೆ ಉಪಚುನಾವಣೆ ದಿನಾಂಕ ಘೋಷಣೆಯಾಗಿದೆ.

    ಈ ಕುರಿತು ಭಾರತೀಯ ಚುನಾವಣಾ ಆಯೋಗ ಮಾಹಿತಿ ನೀಡಿದ್ದು, ಡಿಸೆಂಬರ್‌.20ರಂದು ಮತದಾನ ನಡೆಯಲಿದೆ.

    ಆಂಧ್ರಪ್ರದೇಶದಲ್ಲಿ ಮೂರು, ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಹರಿಯಾಣದಲ್ಲಿ ತಲಾ ಒಂದು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

    ಈ ಉಪಚುನಾವಣೆಯು ವೈಎಸ್‌ಆರ್‌ಸಿಪಿ ಸದಸ್ಯರಾದ ವೆಂಕಟರಮಣ ರಾವ್‌ ಮೋಪಿದೇವಿ, ಬೀಡಾ ಮಸ್ತಾನ್‌ ರಾವ್‌ ಯಾದವ್‌ ಹಾಗೂ ಆರ್‌.ಕೃಷ್ಣಯ್ಯ ಅವರು ಆಗಸ್ಟ್‌ನಲ್ಲಿ ತಮ್ಮ ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

    ಇನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಬಿಜೆಡಿ ಸುಜೀತ್‌ ಕುಮಾರ್‌ ಅವರನ್ನು ಉಚ್ಛಾಟನೆ ಮಾಡಿತ್ತು. ಬಳಿಕ ಅವರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

    ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಜವಾಹರ್‌ ಸಿರ್ಕಾರ್‌ ಅವರು ಏಪ್ರಿಲ್‌ನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

    ಇನ್ನು ಹರಿಯಾಣದಲ್ಲಿ ಬಿಜೆಪಿಯ ಕ್ರಿಶನ್‌ ಲಾಲ್‌ ಪನ್ವಾರ್‌ ಅವರು ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿ ಒಂದು ಸ್ಥಾನ ತೆರವಾಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್ರಾ! ಮನವಮಿ ಹಬ್ಬಕ್ಕೆ ಮಾರುಕಟ್ಟೆ ಬಂದ್ ಆಗುತ್ತಾ? ಹೂಡಿಕೆದಾರರಿಗೆ ಕ್ಲಿಯರ್ ಮಾಹಿತಿ!

    “ಸ್ಟಾಕ್ ಮಾರ್ಕೆಟ್ ಹಾಲಿಡೇ 2026” ಇದೀಗ ಹೂಡಿಕೆದಾರರಲ್ಲಿ ದೊಡ್ಡ ಗೊಂದಲ ಮೂಡಿಸಿದೆ. ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಅಥವಾ ಶುಕ್ರವಾರ ಷೇರು ಮಾರುಕಟ್ಟೆ ಬಂದ್ ಆಗುತ್ತದೆಯಾ? ಎಂಬ ಪ್ರಶ್ನೆ ಟ್ರೇಡರ್‌ಗಳ ನಡುವೆ ಭಾರೀ...

    ಬ್ರೇಕಿಂಗ್! ಮಾರುಕಟ್ಟೆ ರಾಕೆಟ್—ಸೆನ್ಸೆಕ್ಸ್ 1300 ಪಾಯಿಂಟ್ ಜಿಗಿತ! ರೂಪಾಯಿ ಕುಸಿತ, ಚಿನ್ನ ಏರಿಕೆ… ಏನಿದು ಮಿಶ್ರ ಸಿಗ್ನಲ್?

    “ಸ್ಟಾಕ್ ಮಾರ್ಕೆಟ್ 24 ಮಾರ್ಚ್ 2026” ಹೂಡಿಕೆದಾರರಿಗೆ ಒಂದೇ ದಿನದಲ್ಲಿ ರೋಲರ್ ಕೋಸ್ಟರ್ ಅನುಭವ ನೀಡಿದೆ! ಒಂದೆಡೆ ಷೇರು ಮಾರುಕಟ್ಟೆ ಭರ್ಜರಿ ಏರಿಕೆ ಕಂಡಿದ್ದರೆ, ಇನ್ನೊಂದೆಡೆ ರೂಪಾಯಿ ಕುಸಿತ ಮತ್ತು ಚಿನ್ನದ ಬೆಲೆ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading