Saturday, March 28, 2026
spot_img
More
    spot_img
    HomeBreaking Newsಬಿಹಾರ ಚುನಾವಣೆ: ಎಕ್ಸಿಟ್ ಪೋಲ್ ನಿಷೇಧ

    ಬಿಹಾರ ಚುನಾವಣೆ: ಎಕ್ಸಿಟ್ ಪೋಲ್ ನಿಷೇಧ

    ಬಿಹಾರ ವಿಧಾನಸಭೆ ಚುನಾವಣೆ 2025ರ ದಿನಾಂಕ ಘೋಷಣೆಯಾಗಿದೆ. 243 ಕ್ಷೇತ್ರಗಳಿಗೆ ನವೆಂಬರ್ 6, 11ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 14ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಮತ್ತು ಮಹಾಘಟಬಂಧನ್ ಎದುರಾಳಿಗಳು.

    ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ ಕಾರ್ಯ ಮುಕ್ತಾಯಗೊಂಡಿದ್ದು, ರಾಜಕೀಯ ಪಕ್ಷಗಳು ಪ್ರಚಾರದಲ್ಲಿ ಬ್ಯುಸಿಯಾಗಿವೆ. ಬಿಹಾರ ವಿಧಾನಸಭೆ ಹಾಗೂ ಹಲವು ರಾಜ್ಯಗಳಲ್ಲಿ ಉಪ ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಮಹತ್ವದ ಆದೇಶವನ್ನು ಹೊರಡಿಸಿದ್ದು, ಮತದಾನೋತ್ತರ ಸಮೀಕ್ಷೆ (ಎಕ್ಸಿಟ್ ಪೋಲ್) ನಿಷೇಧಿಸಿದೆ.

    ಚುನಾವಣಾ ಆಯೋಗ ತನ್ನ ಆದೇಶದಲ್ಲಿ ಭಾರತದ ಚುನಾವಣಾ ಆಯೋಗವು 2025ರ ಅಕ್ಟೋಬರ್ 6ರಂದು ಬಿಹಾರ ವಿಧಾನಸಭೆ ಚುನಾವಣೆ ಹಾಗೂ ವಿವಿಧ ಉಪ ಚುನಾವಣೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಬಿಹಾರ ಚುನಾವಣೆಯ ಮತದಾನವು ಎರಡು ಹಂತಗಳಲ್ಲಿ ನಡೆಯಲಿದೆ ಎಂದು ಹೇಳಿದೆ.

    ಎಕ್ಸಿಟ್ ಪೋಲ್ ನಿಷೇಧ: ಜನಪ್ರತಿನಿಧಿಗಳ ಕಾಯ್ದೆ, 1951ರ ಸೆಕ್ಷನ್ 126(1)(b) ಪ್ರಕಾರ, ಯಾವುದೇ ಚುನಾವಣಾ ಕ್ಷೇತ್ರದಲ್ಲಿ ಮತದಾನಕ್ಕೂ ಮೊದಲ 48 ಗಂಟೆಗಳನ್ನು ಸೈಲೆನ್ಸ್ ಪಿರಿಯಡ್ ಎಂದು ಘೋಷಣೆ ಮಾಡಲಾಗುತ್ತದೆ. ಈ ಅವಧಿಯಲ್ಲಿ ಟಿವಿ ಅಥವಾ ಇತರ ಮಾಧ್ಯಮಗಳ ಮೂಲಕ ಯಾವುದೇ ಚುನಾವಣಾ ವಿಷಯವನ್ನು ಪ್ರದರ್ಶಿಸುವುದು ನಿಷೇಧಿಸಲಾಗಿದೆ ಎಂದು ತಿಳಿಸಿದೆ.

    ಆಯೋಗ ಈ ಸಮಯದಲ್ಲಿ ಟಿವಿ/ ರೇಡಿಯೋ ವಾಹಿನಿಗಳು ಹಾಗೂ ಕೇಬಲ್ ನೆಟ್‌ವರ್ಕ್‌ಗಳು ತಮ್ಮ ಕಾರ್ಯಕ್ರಮಗಳಲ್ಲಿ ಯಾವುದೇ ರೀತಿಯ ರಾಜಕೀಯ ಅಭಿಪ್ರಾಯ, ಮನವಿ, ಅಥವಾ ಪಕ್ಷ/ ಅಭ್ಯರ್ಥಿಗಳ ಪರ-ವಿರೋಧ ಅಭಿಪ್ರಾಯಗಳನ್ನು ಪ್ರಸಾರ ಮಾಡುವಂತಿಲ್ಲ. ಇದರಲ್ಲಿ ಚುನಾವಣಾ ಪೂರ್ವ ಮತ್ತು ಮತದಾನೋತ್ತರ ಸಮೀಕ್ಷೆಗಳು ಸೇರಿವೆ ಎಂದು ಹೇಳಿದೆ.

    ಜನಪ್ರತಿನಿಧಿಗಳ ಕಾಯ್ದೆ, 1951ರ ಸೆಕ್ಷನ್ 126A ಪ್ರಕಾರ ನವೆಂಬರ್ 6ರ ಗುರುವಾರ ಬೆಳಗ್ಗೆ 7 ರಿಂದ ನವೆಂಬರ್ 11ರ ಮಂಗಳವಾರ ಸಂಜೆ 6.30ರ ತನಕ ಎಕ್ಸಿಟ್ ಪೋಲ್ ನಡೆಸುವುದು ಅಥವಾ ಅದರ ಫಲಿತಾಂಶವನ್ನು ಮುದ್ರಣ, ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಪ್ರಕಟಿಸುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

    ಈ ನಿಯಮ ಉಲ್ಲಂಘನೆ ಮಾಡಿದಲ್ಲಿ ಗರಿಷ್ಠ 2 ವರ್ಷದ ಶಿಕ್ಷೆ ಅಥವಾ ದಂಡ ಅಥವಾ ಎರಡನ್ನು ವಿಧಿಸಬಹುದು. ಆದ್ದರಿಂದ ಮಾಧ್ಯಮ ಸಂಸ್ಥೆಗಳು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಚುನಾವಣೆಗೆ ಸಹಕಾರ ನೀಡಬೇಕು ಎಂದು ಆಯೋಗ ಮನವಿ ಮಾಡಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್ರಾ! ಮನವಮಿ ಹಬ್ಬಕ್ಕೆ ಮಾರುಕಟ್ಟೆ ಬಂದ್ ಆಗುತ್ತಾ? ಹೂಡಿಕೆದಾರರಿಗೆ ಕ್ಲಿಯರ್ ಮಾಹಿತಿ!

    “ಸ್ಟಾಕ್ ಮಾರ್ಕೆಟ್ ಹಾಲಿಡೇ 2026” ಇದೀಗ ಹೂಡಿಕೆದಾರರಲ್ಲಿ ದೊಡ್ಡ ಗೊಂದಲ ಮೂಡಿಸಿದೆ. ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಅಥವಾ ಶುಕ್ರವಾರ ಷೇರು ಮಾರುಕಟ್ಟೆ ಬಂದ್ ಆಗುತ್ತದೆಯಾ? ಎಂಬ ಪ್ರಶ್ನೆ ಟ್ರೇಡರ್‌ಗಳ ನಡುವೆ ಭಾರೀ...

    ಬ್ರೇಕಿಂಗ್! ಮಾರುಕಟ್ಟೆ ರಾಕೆಟ್—ಸೆನ್ಸೆಕ್ಸ್ 1300 ಪಾಯಿಂಟ್ ಜಿಗಿತ! ರೂಪಾಯಿ ಕುಸಿತ, ಚಿನ್ನ ಏರಿಕೆ… ಏನಿದು ಮಿಶ್ರ ಸಿಗ್ನಲ್?

    “ಸ್ಟಾಕ್ ಮಾರ್ಕೆಟ್ 24 ಮಾರ್ಚ್ 2026” ಹೂಡಿಕೆದಾರರಿಗೆ ಒಂದೇ ದಿನದಲ್ಲಿ ರೋಲರ್ ಕೋಸ್ಟರ್ ಅನುಭವ ನೀಡಿದೆ! ಒಂದೆಡೆ ಷೇರು ಮಾರುಕಟ್ಟೆ ಭರ್ಜರಿ ಏರಿಕೆ ಕಂಡಿದ್ದರೆ, ಇನ್ನೊಂದೆಡೆ ರೂಪಾಯಿ ಕುಸಿತ ಮತ್ತು ಚಿನ್ನದ ಬೆಲೆ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading