ಹೊಸದಿಲ್ಲಿ: ಛತ್ ಪೂಜೆ ಆಚರಣೆಗಳು ವಿಜೃಂಭನೆಯಿಂದ ನಡೆದಿದ್ದು, ದೆಹಲಿಯ ಯಮುನಾ ತೀರದಲ್ಲಿ ಪುಣ್ಯ ಸ್ನಾನ ಮಾಡಲು ಸಿದ್ಧತೆಗಳು ನಡೆದಿವೆ.
ಇನ್ನು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದ ಸರ್ಕಾರ ಛತ್ ಪೂಜೆಗಾಗಿ ದೆಹಲಿಯನ್ನು ಸಿದ್ಧಪಡಿಸಿದ್ದು, ಯಮುನಾ ನದಿ ತೀರವನ್ನೂ ಸಹ ಶುದ್ಧೀಕರಿಸುವ ಯತ್ನ ನಡೆಸಿದೆ.
ಚುನಾವಣೆ ಸಂದರ್ಭದಲ್ಲಿ ಕಲುಷಿತ ಯಮುನಾ ನದಿಯನ್ನು ಸ್ವಚ್ಛಗೊಳಿಸಲಿದ್ದೇವೆ ಎಂದು ಪ್ರಣಾಳಿಕೆಗಳಲ್ಲಿ ದೊಡ್ಡ ಆಶ್ವಾಸನೆ ನೀಡಿದ್ದ ಬಿಜೆಪಿ ಸರ್ಕಾರ ಇನ್ನೂ ಸಹ ಆ ಆಶ್ವಾಸನೆ ಪೂರೈಸುವಲ್ಲಿ ಯಶಸ್ವಿಯಾಗಿಲ್ಲ.
ಇದೇ ಯಮುನಾ ನದಿಯ ಕಲುಷತೆಯ ವಿಚಾರವಾಗಿ ಮತ್ತೊಮ್ಮೆ ಬಿಜೆಪಿ ಟೀಕೆಗೀಡಾಗಿದ್ದು, ಎಎಪಿ ನಾಯಕ ಸೌರಭ್ ಭಾರದ್ವಾಜ್ ಬಿಜೆಪಿ ಸರ್ಕಾರ ನರೇಂದ್ರ ಮೋದಿ ಛತ್ ಪೂಜೆಯಂದು ಯಮುನಾ ನದಿಯಲ್ಲಿ ಪುಣ್ಯ ಸ್ನಾನ ಮಾಡುವ ಸಲುವಾಗಿ ನಕಲಿ ನದಿತೀರವನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಯಮುನಾ ತೀರದ ಬಳಿ ವಿಸ್ತಾರವಾದ ಪ್ರತ್ಯೇಕ ತೀರವನ್ನು ಮಾಡಿ ಅಲ್ಲಿಗೆ ಯಮುನಾ ನದಿ ನೀರಿನ ಬದಲು ದೆಹಲಿ ನಗರಕ್ಕೆ ನೀಡಲಾಗುವ ಕುಡಿಯುವ ನೀರನ್ನು ತುಂಬಿಸಲಾಗಿದೆ, ಅದೂ ಸಹ ಫಿಲ್ಟರ್ಡ್ ನೀರು ಎಂದು ಫೋಟೊ ಸಮೇತ ಆರೋಪಿಸಿದ್ದಾರೆ.
ಆಪ್ ನಾಯಕ ಸೌರಭ್ ಭಾರದ್ವಾಜ್ ಮಾತ್ರವಲ್ಲದೇ ಅನೇಕ ನೆಟ್ಟಿಗರು ಸಹ ಈ ಕುರಿತು ಟ್ವೀಟ್ ಮಾಡಿದ್ದು, ಇದೇ ರೀತಿಯ ಆರೋಪವನ್ನು ಮಾಡಿದ್ದಾರೆ. ಯಮುನಾ ನದಿಯ ಬಳಿ ಕಟ್ಟೆ ಹಾಕಿ ನೀರು ತುಂಬಿಸಿರುವ ಬೃಹತ್ ಹೊಂಡದ ಫೋಟೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಟ್ರಂಪ್ ಆಗಮನವಾದಾಗ ಮುಂಬೈನ ಧಾರಾವಿ ಸ್ಲಂ ಅನ್ನು ದೊಡ್ಡ ಬಟ್ಟೆಗಳಿಂದ ಮುಚ್ಚಿದ್ದು ಮತ್ತೊಮ್ಮೆ ನೆಟ್ಟಿಗರಿಗೆ ನೆನಪಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


