ಗೂಗಲ್ ಕ್ರೋಮ್‌ಗೆ ಸೆಡ್ಡು ಹೊಡಲು ತಯಾರಿ ನಡೆಸಿರುವ ಜೊಹೊ ಈಗ ಡಿಜಿಟಲ್ ಪೇಮೆಂಟ್ ಕ್ಷೇತ್ರಕ್ಕೆ ಕಾಲಿಡಲು ಸಜ್ಜಾಗಿದೆ. ಗೂಗಲ್ ಪೇ, ಪೇಟಿಎಂಗೆ ಸೆಡ್ಡು ಹೊಡೆಯಲು ಜೊಹೊ ಪೇ ಎಂಬ ಅಪ್ಲಿಕೇಶನ್ ಬಿಡುಗಡೆ ಮಾಡಲು ತಯಾರಿ ನಡೆಸಿದೆ.
ಜೊಹೊ ಕಾರ್ಪೊರೇಷನ್ ಡಿಜಿಟಲ್ ಪಾವತಿ ಮಾರುಕಟ್ಟೆಗೆ ಜೊಹೊ ಪೇ ಎಂಬ ಹೆಸರಿನಲ್ಲಿ ಪ್ರವೇಶ ಮಾಡಲಿದೆ. ಈ ಹೊಸ ಮಾದರಿ ಯುಪಿಐ ಆಧಾರಿತ ಪೇಮೆಂಟ್ ಅಪ್ಲಿಕೇಶಷ್ ವಿಶೇಷತೆಗಳ ಕುರಿತು ಮಾಹಿತಿ ನೀಡಿದೆ.
ಭಾರತದಲ್ಲಿ ಡಿಜಿಟಲ್ ಪಾವತಿಯಲ್ಲಿ ಪೋನ್ ಪೇ, ಪೇಟಿಎಂ, ಗೂಗಲ್ ಪೇ ಮುಂಚೂಣಿಯಲ್ಲಿದೆ. ಇದೀಗ ಜೊಹೊ ಪೇ ಮಾರುಕಟ್ಟೆಗೆ ಬಂದರೆ ಭಾರೀ ಸ್ಪರ್ಧೆ ಎದುರಾಗಲಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಜೊಹೊ ಜೊಹೊ ಬ್ಯುಸಿನೆಸ್ ಎಂಬುದರ ಮೂಲಕ ವ್ಯವಹಾರಗಳಿಗೆ ಡಿಜಿಟಲ್ ಲೆಕ್ಕ ಸೇವೆಗಳನ್ನು ಒದಗಿಸುತ್ತಿದೆ. ಮೊದಲ ಬಾರಿಗೆ ಕಂಪನಿಯು ಸಾಮಾನ್ಯ ಗ್ರಾಹಕರಿಗಾಗಿ ಯುಪಿಐ ಆಧಾರಿತ ಪಾವತಿ ಅಪ್ಲಿಕೇಶನ್ ಬಿಡುಗಡೆ ಮಾಡುತ್ತಿದೆ.
ಜೊಹೊ ಪೇ ಅಪ್ಲಿಕೇಶನ್ ಅನ್ನು ಸ್ವತಂತ್ರ ಮೊಬೈಲ್ ಅಪ್ಲಿಕೇಶನ್ ಆಗಿ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಈ ಅಪ್ಲಿಕೇಶನ್‌ನಲ್ಲಿ ಸಮಸ್ಯೆ ಪರಿಹಾರಕ್ಕಾಗಿ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಹೊಸ ಅಪ್ಲಿಕೇಶನ್ ವಾಟ್ಸ್‌ಪ್ ಪೇಗಿಂತ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.
ಈಗಾಗಲೇ ಜೋಹೊ ಕಂಪನಿಯು ಅಭಿವೃದ್ಧಿಪಡಿಸಿದ ಅರಟ್ಟೈ ಆ್ಯಪ್ ಬಹಳ ಜನಪ್ರಿಯವಾಗಿದೆ. 75 ಲಕ್ಷಕ್ಕೂ ಅಧಿಕ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಈಗ ಅರಟ್ಟೈ ಮತ್ತು ಜೋಹೊ ಪೇ ಒಟ್ಟಿಗೆ ಕಾರ್ಯ ನಿರ್ವಹಣೆ ಮಾಡಲಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆ ನಿರೀಕ್ಷೆ ಮಾಡಲಾಗಿದೆ.
ಅರಟ್ಟೈ ಮತ್ತು ಜೋಹೊ ಪೇ ಪ್ರಮುಖ ವಿಶೇಷತೆ ಎಂದರೆ ಜನರು ಚಾಟ್ ಮಾಡುತ್ತಿರುವಾಗಲೇ ಹಣವನ್ನು ಕಳಿಸಬಹುದು ಮತ್ತು ಸ್ವೀಕರಿಸಬಹದು. ಇದು ವಾಟ್ಸಪ್ ಪೇಮೆಂಟ್‌ನಲ್ಲಿಯೂ ಲಭ್ಯವಿದೆ. ಆದರೆ ಭಾರತದ್ದೇ ಆದ ಜೋಹೊ ಪೇಯನ್ನು ಜನರು ಹೆಚ್ಚು ಡೌನ್‌ಲೋಡ್ ಮಾಡಿಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಡಿಜಿಟಲ್ ಪಾವತಿಯ್ಲಿ ಭಾರತ ವಿಶ್ವದಲ್ಲೇ ಅತ್ಯಂತ ಕ್ಷಿಪ್ರವಾಗಿ ಬೆಳೆಯುತ್ತಿದೆ. ಪ್ರತಿ ತಿಂಗಳು ಯುಪಿಐ ಮೂಲಕ ಕೋಟ್ಯಾಂತರ ರೂ.ವಹಿವಾಟು ನಡೆಯುತ್ತದೆ. ಇಂತಹ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಜೋಹೊ ಪೇ ಮಾರುಕಟ್ಟೆಗೆ ಪ್ರವೇಶ ಮಾಡುತ್ತಿದೆ. ಇದು ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಹೊಸ ಸ್ಪರ್ಧೆಗೆ ಕಾರಣವಾಗಲಿದೆ.
ಜೋಹೊ ಪೇ ಈಗಾಗಲೇ ತಯಾರಾಗಿದ್ದು, ವಿವಿಧ ಹಂತದ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಪ್ರತಿನಿತ್ಯದ ವ್ಯವಹಾರಗಳಿಗೆ ಡಿಜಿಟಲ್ ಪಾವತಿಗಳನ್ನು ಬಳಕೆ ಮಾಡುವ ಲಕ್ಷಾಂತರ ಬಳಕೆದಾರರಿಗೆ ನಂಬಿಕಸ್ಥ ಸೇವೆ ನೀಡುವ ಗುರಿಯೊಂದಿದೆ ಜೋಹೊ ಪೇ ಮಾರುಕಟ್ಟೆ ಪ್ರವೇಶ ಮಾಡುತ್ತಿದೆ.
ಕಂಪನಿಯು ಇನ್ನೂ ಅಧಿಕೃತವಾಗಿ ಜೋಹೊ ಪೇ ಯಾವಾಗ ಬಿಡುಗಡೆ ಎಂದು ಘೋಷಣೆ ಮಾಡಿಲ್ಲ. ಆದರೆ ಮುಂದಿನ ತ್ರೈಮಾಸಿಕದೊಳಗೆ ಈ ಅಪ್ಲಿಕೇನ್ ಐಒಎ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗುವ ನಿರೀಕ್ಷೆ ಇದೆ.
ವಿವಿಧ ಕೇಂದ್ರ ಸಚಿವರು ಭಾರತದಲ್ಲೇ ತಯಾರಾಗಿರುವ ಅರಟ್ಟೈ ಆ್ಯಪ್ ಬಳಕೆ ಮಾಡುವಂತೆ ಕರೆ ನೀಡಿದ ಬಳಿಕ ಲಕ್ಷಾಂತರ ಜನರು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್ ಲಭ್ಯವಿದ್ದು, ಡೌನ್‌ಲೋಡ್ ಸಹ ಪ್ರತಿದಿನ ಹೆಚ್ಚಾಗುತ್ತಲೇ ಇದೆ.
ಈಗ ಡಿಜಿಟಲ್ ಪಾವತಿಗಾಗಿ ಜೋಹೊ ಪೇ ಬಿಡುಗಡೆ ಮಾಡಿದರೂ ಸಹ ಜನರು ಅದನ್ನು ಸ್ವಾಗತಿಸಲಿದ್ದಾರೆ. ಸ್ವದೇಶಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಬಳಕೆ ಮಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


