Saturday, March 28, 2026
spot_img
More
    spot_img
    HomeBreaking Newsಅಮೆರಿಕದಲ್ಲಿ ಮತ್ತೊಂದು ದುರಂತ: 'ಟ್ರಂಪ್‌ರನ್ನು ಕೊಲ್ಲಿ' ಎಂದು ಬರೆದಿದ್ದ ಬಂದೂಕಿನಿಂದ ದಾಳಿ

    ಅಮೆರಿಕದಲ್ಲಿ ಮತ್ತೊಂದು ದುರಂತ: ‘ಟ್ರಂಪ್‌ರನ್ನು ಕೊಲ್ಲಿ’ ಎಂದು ಬರೆದಿದ್ದ ಬಂದೂಕಿನಿಂದ ದಾಳಿ

    ಅಮೆರಿಕದ ಮಿನ್ನಿಯಾಪೊಲಿಸ್‌ನಲ್ಲಿ ನಡೆದ ಮತ್ತೊಂದು ಸಾಮೂಹಿಕ ಗುಂಡಿನ ದಾಳಿಯಲ್ಲಿ ಭಯಾನಕ ಅಂಶ ಬಹಿರಂಗವಾಗಿದೆ. ಅನನ್ಸಿಯೇಷನ್ ಕ್ಯಾಥೋಲಿಕ್ ಚರ್ಚ್ ಶಾಲೆಯ ಮೇಲೆ ನಡೆದಈ ಘಟನೆಯಲ್ಲಿ 8 ಮತ್ತು 10 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, 17 ಮಂದಿ ಗಾಯಗೊಂಡಿದ್ದಾರೆ.

    ನ್ಯೂಕ್ ಇಂಡಿಯಾ ಎಂದು ಬರೆದ ಬಂದೂಕುಗಳು
    23 ವರ್ಷದ ರಾಬಿನ್ ವೆಸ್ಟ್‌ಮನ್ ರೈಫಲ್, ಶಾಟ್‌ಗನ್ ಹಾಗೂ ಪಿಸ್ತೂಲ್‌ಗಳೊಂದಿಗೆ ಶಾಲೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾನೆ. ನಂತರ ಆತ ಪಾರ್ಕಿಂಗ್ ಸ್ಥಳದಲ್ಲಿ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ಮೇಲೆ “ನ್ಯೂಕ್ ಇಂಡಿಯಾ”, “ಡೊನಾಲ್ಡ್ ಟ್ರಂಪ್‌ರನ್ನು ಕೊಲ್ಲಬೇಕು”, “ಇಸ್ರೇಲ್ ಸುಟ್ಟುಹಾಕಬೇಕು”, “ನಿಮ್ಮ ದೇವರು ಎಲ್ಲಿದ್ದಾನೆ?” ಎಂಬಂತಹ ಆಘಾತಕಾರಿ ಬರಹಗಳು ಕಂಡುಬಂದಿವೆ.

    ಆತ್ಮಹತ್ಯೆಗೆ ಮುನ್ನ ಯೂಟ್ಯೂಬ್ ವಿಡಿಯೋ
    ದಾಳಿಯ ಕೆಲ ಗಂಟೆಗಳ ಮುನ್ನ ವೆಸ್ಟ್‌ಮನ್ ತನ್ನ “Robin W” ಯೂಟ್ಯೂಬ್ ಚಾನೆಲ್‌ನಲ್ಲಿ ಶಸ್ತ್ರಾಸ್ತ್ರಗಳು ಮತ್ತು ಆಘಾತಕಾರಿ ಸಂದೇಶಗಳಿದ್ದ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದ. ಯೂಟ್ಯೂಬ್ ಅವುಗಳನ್ನು ತೆಗೆದುಹಾಕಿದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ವೈರಲ್ ಆಗಿವೆ.

    ತನಿಖೆ ತೀವ್ರಗೊಂಡಿದೆ
    ವೆಸ್ಟ್‌ಮನ್ ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿರದಿದ್ದರೂ, ಅವನ ಬರಹಗಳು ಉಗ್ರ ಸಂಘಟನೆಗಳ ಪ್ರಭಾವದ ಸೂಚನೆಯೇ? ಎಂಬ ಕೋಣೆಯಲ್ಲಿ ತನಿಖೆ ಸಾಗುತ್ತಿದೆ. ಈ ಘಟನೆ ಅಮೆರಿಕಾದಲ್ಲಿ ಗನ್ ಕಂಟ್ರೋಲ್, ಭದ್ರತೆ ಮತ್ತು ಅಂತರಾಷ್ಟ್ರೀಯ ಸಂಬಂಧಗಳ ಕುರಿತು ಮತ್ತೊಂದು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

    ಜ್ಞಾಪಕ ಶಕ್ತಿ ವೃದ್ಧಿಗೆ ರಾಮಬಾಣ: ಬ್ರಾಹ್ಮಿಯ ಅದ್ಭುತ ಔಷಧೀಯ ಗುಣಗಳ ಬಗ್ಗೆ ನಿಮಗೆ ಗೊತ್ತೇ?


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್ರಾ! ಮನವಮಿ ಹಬ್ಬಕ್ಕೆ ಮಾರುಕಟ್ಟೆ ಬಂದ್ ಆಗುತ್ತಾ? ಹೂಡಿಕೆದಾರರಿಗೆ ಕ್ಲಿಯರ್ ಮಾಹಿತಿ!

    “ಸ್ಟಾಕ್ ಮಾರ್ಕೆಟ್ ಹಾಲಿಡೇ 2026” ಇದೀಗ ಹೂಡಿಕೆದಾರರಲ್ಲಿ ದೊಡ್ಡ ಗೊಂದಲ ಮೂಡಿಸಿದೆ. ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಅಥವಾ ಶುಕ್ರವಾರ ಷೇರು ಮಾರುಕಟ್ಟೆ ಬಂದ್ ಆಗುತ್ತದೆಯಾ? ಎಂಬ ಪ್ರಶ್ನೆ ಟ್ರೇಡರ್‌ಗಳ ನಡುವೆ ಭಾರೀ...

    ಬ್ರೇಕಿಂಗ್! ಮಾರುಕಟ್ಟೆ ರಾಕೆಟ್—ಸೆನ್ಸೆಕ್ಸ್ 1300 ಪಾಯಿಂಟ್ ಜಿಗಿತ! ರೂಪಾಯಿ ಕುಸಿತ, ಚಿನ್ನ ಏರಿಕೆ… ಏನಿದು ಮಿಶ್ರ ಸಿಗ್ನಲ್?

    “ಸ್ಟಾಕ್ ಮಾರ್ಕೆಟ್ 24 ಮಾರ್ಚ್ 2026” ಹೂಡಿಕೆದಾರರಿಗೆ ಒಂದೇ ದಿನದಲ್ಲಿ ರೋಲರ್ ಕೋಸ್ಟರ್ ಅನುಭವ ನೀಡಿದೆ! ಒಂದೆಡೆ ಷೇರು ಮಾರುಕಟ್ಟೆ ಭರ್ಜರಿ ಏರಿಕೆ ಕಂಡಿದ್ದರೆ, ಇನ್ನೊಂದೆಡೆ ರೂಪಾಯಿ ಕುಸಿತ ಮತ್ತು ಚಿನ್ನದ ಬೆಲೆ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading