ಇಲ್ಲೊಬ್ಬ ವ್ಯಕ್ತಿ ಒಂದು ವಿಷಯಕ್ಕೆ ಹಠ ಹಿಡಿದು ವಿದ್ಯುತ್ ಕಂಬ ಹತ್ತಿದ್ದಾನೆ . ಕಾರಣವೇನು ಗೊತ್ತೆ ?
ಮದುವೆಯಾದ ವ್ಯಕ್ತಿ ತನ್ನ ಹೆಂಡತಿ ತಂಗಿಯೊಂದಿಗೆ ತನ್ನ ಮದುವೆ ಮಾಡಿಸಬೇಕು ಎಂದು ಹಠ ಹಿಡಿದು ವಿದ್ಯುತ್ ಕಂಬ ಹತ್ತಿದ ಘಟನೆ ಉತ್ತರ ಪ್ರದೇಶದ ಕನ್ನೌಜ್‌ನಲ್ಲಿ ನಡೆದಿದೆ.
ರಾಜ್ ಸಕ್ಸೇನಾ ಎಂಬಾತ 2021ರಲ್ಲಿ ಮದುವೆಯಾಗಿದ್ದ. ಆದರೆ ಮದುವೆಯಾದ ಒಂದು ವರ್ಷದ ನಂತರ ಅನಾರೋಗ್ಯ ಕಾರಣ ಹೆಂಡತಿ ಮೃತಪಟ್ಟಳು. ನಂತರ ಆಕೆಯ ತಂಗಿಯನ್ನೇ ರಾಜ್ ಮದುವೆಯಾಗಿದ್ದ. ಎರಡು ವರ್ಷಗಳ ನಂತರ ರಾಜ್ ಈಗ ತನ್ನ ಎರಡನೇ ಹೆಂಡತಿಯ ತಂಗಿಯ ಜೊತೆ ಪ್ರೀತಿ ಮಾಡುತ್ತಿದ್ದಾನೆ. ಆಕೆಯೂ ತನ್ನನ್ನು ಪ್ರೀತಿಸುತ್ತಿದ್ದಾಳೆಂದು ಹೇಳುತ್ತಿದ್ದಾನೆ.
ಆಕೆಯನ್ನು ಮದುವೆಯಾಗಬೇಕು ಎಂದು ಪತ್ನಿಯ ಬಳಿ ಕೇಳಿದಾಗ ಆಕೆ ಒಪ್ಪಿಗೆ ನೀಡಿಲ್ಲ. ಹಾಗಾಗಿ ಕೋಪಗೊಂಡ ರಾಜ್, ವಿದ್ಯುತ್ ಕಂಬ ಏರಿ, ತನ್ನ ನಾದಿನಿಯನ್ನು ಮದುವೆಯಾಗುವುದಾಗಿ ಪ್ರತಿಭಟನೆ ಮಾಡುತ್ತಿದ್ದಾನೆ.
ಪೊಲೀಸ್ ಅಧಿಕಾರಿಗಳು ಮತ್ತು ಕುಟುಂಬ ಸದಸ್ಯರು ಸುಮಾರು ಏಳು ಗಂಟೆಗಳ ಕಾಲ ಆತನನ್ನು ಮನವೊಲಿಸಲು ಪ್ರಯತ್ನಿಸಿದ್ದು, ಕೊನೆಗೆ ಆತನ ಹೆಂಡತಿ ತಂಗಿಯೊಂದಿಗೆ ಮದುವೆ ಮಾಡಿಸುವುದಾಗಿ ಒಪ್ಪಿಕೊಂಡ ಬಳಿಕ ಕೆಳಗಿಳಿದಿದ್ದಾನೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


