Saturday, September 19, 2026
spot_img
More
    spot_img
    HomeBreaking Newsಬಿಹಾರ ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿಗೆ ಮೇಲುಗೈ ಎಂದು ಟ್ವೀಟ್‌ ಮಾಡಿ ಡಿಲಿಟ್‌ ಮಾಡಿದ ಡಿಡಿ...

    ಬಿಹಾರ ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿಗೆ ಮೇಲುಗೈ ಎಂದು ಟ್ವೀಟ್‌ ಮಾಡಿ ಡಿಲಿಟ್‌ ಮಾಡಿದ ಡಿಡಿ ನ್ಯೂಸ್!

    ನಿನ್ನೆ ( ನವೆಂಬರ್‌ 6 ) ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯಿತು. 121 ಕ್ಷೇತ್ರಗಳಲ್ಲಿ ನಡೆದ ಮತದಾನದಲ್ಲಿ 64.46% ಮತದಾನವಾಗಿದೆ. ಇನ್ನು ನವೆಂಬರ್‌ 11ರಂದು ಎರಡನೇ ಹಂತದ ಮತದಾನ ನಡೆಯಲಿದೆ.

    Advertisement

    ಕಳೆದ ಎರಡು ತಿಂಗಳಿನಿಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಈ ಹಿಂದಿನ ವಿಧಾನಸಭಾ ಚುನಾವಣೆಗಳು ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಮತಗಳ್ಳತನ ನಡೆದಿದೆ ಎಂದು ಗಂಭೀರ ಆರೋಪವನ್ನು ಮಾಡಿದ್ದು, ನಿನ್ನೆ ನಡೆದ ಚುನಾವಣೆಯಲ್ಲೂ ಸಹ ಮತಗಳ್ಳತನ ಆಗಿದೆ ಎಂದು ಹಲವರು ಎಕ್ಸ್‌ ಖಾತೆಯಲ್ಲಿ ಅನುಮಾನ ಹೊರಹಾಕಿದ್ದಾರೆ.

    ಒಬ್ಬನೇ ವ್ಯಕ್ತಿ ಇದೇ ವರ್ಷ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿರುವುದು ಹಾಗೂ ನಿನ್ನೆಯೂ ಸಹ ಮತದಾನ ಮಾಡಿರುವುದು ಮತಗಳ್ಳತನದ ಆರೋಪಕ್ಕೆ ನಿದರ್ಶನ ಎಂದು ಆರೋಪಿಸಿದ್ದಾರೆ. ಹೀಗೆ ಬಿಜೆಪಿ ವಿರುದ್ಧ ಗಂಭೀರ ಆರೋಪಗಳು ಕೇಳಿಬರುತ್ತಿರುವಾಗಲೇ ಡಿಡಿ ನ್ಯೂಸ್‌ ಹಿಂದಿ ತನ್ನ ಎಕ್ಸ್‌ ಖಾತೆಯಲ್ಲಿ ಬಿಜೆಪಿ ಮೊದಲ ಹಂತದ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದೆ ಎಂದು ಬರೆದುಕೊಂಡಿತ್ತು.

    ಹೀಗೆ ಮೊದಲ ಹಂತದಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿ ಎರಡನೇ ಹಂತದಲ್ಲಿ ತನ್ನ ಅಲೆಯನ್ನು ಮುಂದುವರಿಸಲಿದೆ ಎಂದು ಬರೆದುಕೊಂಡಿದ್ದ ಡಿಡಿ ನ್ಯೂಸ್ ಮತಗಳ್ಳತನ ಆರೋಪದ ಬೆಂಕಿಗೆ ತುಪ್ಪ ಸುರಿದಿತ್ತು. ಅಂದಹಾಗೆ ಡಿಡಿ ನ್ಯೂಸ್‌ ಸ್ವಂತಿಕೆಯಿಂದ ಈ ಪೋಸ್ಟ್‌ ಹಂಚಿಕೊಂಡಿರಲಿಲ್ಲ. ಬದಲಾಗಿ ನರೇಂದ್ರ ಮೋದಿ ಹಿಂದಿಯಲ್ಲಿ ಮಾಡಿದ್ದ ಟ್ವೀಟ್‌ ಅನ್ನು ಇಂಗ್ಲಿಷ್‌ಗೆ ಅನುವಾದಿಸಿತ್ತು. ಆದರೆ ಎಲ್ಲಿಯೂ ಇದನ್ನು ನರೇಂದ್ರ ಮೋದಿ ಹೇಳಿದ್ದಾರೆ ಅಥವಾ ಟ್ವೀಟ್‌ ಮಾಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಬರೆದುಕೊಂಡು ಪತ್ರಿಕಾಧರ್ಮ ಮೆರೆದಿರಲಿಲ್ಲ.

    ಹೀಗೆ ಬಿಜೆಪಿ ಫ್ಯಾನ್‌ಕ್ಲಬ್‌ ರೀತಿ ಟ್ವೀಟ್‌ ಮಾಡಿದ್ದ ಡಿಡಿ ನ್ಯೂಸ್‌ ಹಿಂದಿ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾದ ನಂತರ ಡಿಡಿ ತನ್ನ ಆ ಟ್ವೀಟ್‌ ಅನ್ನು ಡಿಲಿಟ್‌ ಮಾಡಿಕೊಂಡು ಸೈಲೆಂಟ್‌ ಆಗಿದೆ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ಆಗಲ್ಲ 2028ಕ್ಕೆ ದೊಡ್ಡ ಕ್ರಾಂತಿಯಾಗುತ್ತೆ ಎಂದ ಡಿಕೆಶಿ

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading