Wednesday, July 8, 2026
spot_img
More
    spot_img
    HomeEntertainmentಅವಕಾಶ ಬೇಕಾದ್ರೆ ಮಂಚಕ್ಕೆ ಬನ್ನಿ ಅಂತಾನೆ; ʼರಾಮಾಚಾರಿʼ ನಿರ್ದೇಶಕ ರಾಮ್‌ ಜಿ ಲೈಂಗಿಕ ಕಿರುಕುಳ ಪೋಸ್ಟ್‌...

    ಅವಕಾಶ ಬೇಕಾದ್ರೆ ಮಂಚಕ್ಕೆ ಬನ್ನಿ ಅಂತಾನೆ; ʼರಾಮಾಚಾರಿʼ ನಿರ್ದೇಶಕ ರಾಮ್‌ ಜಿ ಲೈಂಗಿಕ ಕಿರುಕುಳ ಪೋಸ್ಟ್‌ ವೈರಲ್‌

    ಕನ್ನಡ ಕಿರುತೆರೆಯ ಜನಪ್ರಿಯ ನಿರ್ದೇಶಕರಲ್ಲಿ ಓರ್ವರಾದ ರಾಮ್‌ ಜಿ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿಬಂದಿದೆ.

    Advertisement

    ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಈ ಕುರಿತಾಗಿ ಖಾತೆಯೊಂದನ್ನು ತೆರೆದಿರುವ ಅನಾಮಧೇಯʼ ವ್ಯಕ್ತಿ ಆ ಖಾತೆಗೆ ʼexposing ks ram ji’ (ಎಕ್ಸ್‌ಪೋಸಿಂಗ್‌ ಕೆಎಸ್‌ ರಾಮ್‌ ಜಿ) ಎಂದು ಹೆಸರನ್ನಿಟ್ಟುಕೊಂಡು ರಾಮ್‌ ಜಿ ವಿರುದ್ಧ ನಾಲ್ಕು ವಿಭಿನ್ನ ಪೋಸ್ಟ್‌ ಮಾಡಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

    ಈ ಪೋಸ್ಟ್‌ಗಳಲ್ಲಿ ರಾಮ್‌ ಜಿ ವಿರುದ್ಧ ತೀರ ಗಂಭೀರ ಆರೋಪಗಳಿದ್ದು, ಧಾರಾವಾಹಿಯಲ್ಲಿ ಅವಕಾಶ ಬೇಕಾದರೆ ನನ್ನ ಜೊತೆ ಬರಬೇಕು, ಮಂಚ ಏರಬೇಕು, ಕರೆದಾಗಲೆಲ್ಲ ಬರಬೇಕು ಎಂದು ಹೇಳುತ್ತಾನೆ ಎಂದು ಬರೆಯಲಾಗಿದೆ. ಅಲ್ಲದೇ ಅವಕಾಶ ಕೇಳಿಕೊಂಡು ಬರುವ ಹುಡುಗಿಯರಿಗೆ ಮಧ್ಯರಾತ್ರಿ ವಿಡಿಯೊ ಕರೆ ಮಾಡಿ ಅಸಭ್ಯವಾಗಿ ವರ್ತಿಸುತ್ತಾನೆ ಎಂದು ಬರೆಯಲಾಗಿದೆ. ಈ ಪೋಸ್ಟ್‌ಗಳಲ್ಲಿ ರಾಮ್‌ ಜಿ ಮಾತ್ರವಲ್ಲದೇ ಆತನ ಸಹೋದ್ಯೋಗಿಗಳ ವಿರುದ್ಧವೂ ಸಹ ಲೈಂಗಿಕ ಕಿರುಕುಳದ ಆರೋಪ ಮಾಡಲಾಗಿದೆ.

    ಇನ್ನು ಈ ಪೋಸ್ಟ್‌ಗಳಲ್ಲಿ ರಾಮ್‌ ಜಿ ಅವರನ್ನು ಇಂಡಸ್ಟ್ರಿಯಿಂದ ಬ್ಯಾನ್‌ ಮಾಡಿ ಎಂದೂ ಸಹ ಬರೆಯಲಾಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading