ಕನ್ನಡ ಸೇರಿದಂತೆ ಹಲವಾರು ಭಾಷೆಯ ಸಿನಿಮಾಗಳ ಹಾಡುಗಳಿಗೆ ದನಿ ನೀಡಿ ತನ್ನ ಅದ್ಭುತ ಪ್ರತಿಭೆಯಿಂದ ಸ್ಟಾರ್ ಸಿಂಗರ್ ಎನಿಸಿಕೊಂಡಿರುವ ಉದಿತ್ ನಾರಾಯಣ್ ಇದೀಗ ವಿವಾದಕ್ಕೀಡಾಗಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಸ್ಟೇಜ್ ಪರ್ಫಾಮೆನ್ಸ್ ನೀಡುತ್ತಿದ್ದ ವೇಳೆ ಸೆಲ್ಫಿ ತೆಗೆದುಕೊಳ್ಳಲು ಬಂದ ಮಹಿಳಾ ಅಭಿಮಾನಿಗಳನ್ನು ಉದಿತ್ ನಾರಾಯಣ್ ಅಪ್ಪಿ ತುಟಿಗೆ ಮುತ್ತಿಟ್ಟಿದ್ದಾರೆ. ಈ ವಿಡಿಯೊ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸದ್ದು ಮಾಡುತ್ತಿದೆ.
ಇನ್ನು ಉದಿತ್ ನಾರಾಯಣ್ ಅವರ ಈ ನಡೆಗೆ ಅವರ ಅಭಿಮಾನಿಗಳೂ ಸೇರಿದಂತೆ ಎಲ್ಲರೂ ಛೀಮಾರಿ ಹಾಕಿದ್ದಾರೆ. ಇನ್ನೂ ಕೆಲವರು ಇದು ಎಐ ಜನರೇಟೆಡ್ ವಿಡಿಯೊ ಇರಬಹುದು, ಉದಿತ್ ನಾರಾಯಣ್ ಅಂತಹ ವ್ಯಕ್ತಿಯಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿದ್ದಾರೆ. ಆದರೆ ಈ ವಿಡಿಯೊ ರಿಯಲ್ ಆಗಿದ್ದು, ಸದ್ಯ ಉದಿತ್ ನಾರಾಯಣ್ ಟೀಕೆಗೆ ಗುರಿಯಾಗಿದ್ದಾರೆ.
ಇದು ಮಾತ್ರವಲ್ಲದೇ ಈ ಹಿಂದೆ ತನ್ನೊಡನೆ ವೇದಿಕೆಯಲ್ಲಿ ಹಾಡುತ್ತಿದ್ದ ಗಾಯಕಿಯರ ಕೆನ್ನೆಗೂ ಸಹ ಉದಿತ್ ನಾರಾಯಣ್ ಮುತ್ತಿಟ್ಟ ಉದಾಹರಣೆಗಳಿದ್ದು, ಕೆಲವರು ಈ ಅಂಶವನ್ನೂ ಸಹ ಉಲ್ಲೇಖಿಸಿ ಕಿಡಿಕಾರಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


