ನವದೆಹಲಿ: ಇಂದು ( ಫೆಬ್ರವರಿ 1 ) ವಿತ್ತ ಸಚಿವೆ ಕೇಂದ್ರ ಬಜೆಟ್ ಮಂಡಿಸುತ್ತಿದ್ದು, ಸರ್ಕಾರದ ಯೋಜನೆಗಳ ಕುರಿತಾಗಿ ಮಾತನಾಡಿದ್ದಾರೆ. ಇನ್ನು ಬಜೆಟ್ ಆರಂಭವಾಗುತ್ತಿದ್ದಂತೆ ಗದ್ದಲ ಎದ್ದಿದೆ.
ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಆರಂಭಿಸುತ್ತಿದ್ದಂತೆಯೇ ವಿರೋಧ ಪಕ್ಷಗಳು ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಇತ್ತೀಚೆಗಷ್ಟೆ ನಡೆದ ಕುಂಭಮೇಳ ಕಾಲ್ತುಳಿತದ ಕುರಿತು ಮಾತನಾಡಲು ಅನುಮತಿ ನೀಡಬೇಕೆಂದು ಕೇಳಿದವು. ಆದರೆ ಸ್ಪೀಕರ್ ಅನುಮತಿ ನಿರಾಕರಣೆ ಮಾಡಿದರು.
ಈ ಕಾರಣದಿಂದಾಗಿ ಅಸಮಾಧಾನಗೊಂಡ ಸಮಾಜವಾದಿ ಪಕ್ಷದ ಸಂಸದರು ಸದನದಿಂದ ಹೊರನಡೆದರು. ಅತ್ತ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮುಂದುವರಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


