ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಫೆಬ್ರವರಿ 1) 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದ್ದು, ವಿಶೇಷವಾಗಿ ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಉಡುಗೊರೆಯನ್ನೇ ಕೊಟ್ಟಿದ್ದಾರೆ.
ಹೌದು, ಬಜೆಟ್‌ನಲ್ಲಿ 12 ಲಕ್ಷದವರೆಗೂ ಆದಾಯ ತೆರಿಗೆ ಇಲ್ಲ ಎಂದು ಘೋಷಿಸಿರುವ ನಿರ್ಮಲಾ ಸೀತಾರಾಮನ್ ಈ ಮೂಲಕ ಮಧ್ಯಮ ವರ್ಗದ ಜನರ ಮೇಲೆ ಹೆಚ್ಚು ತೆರಿಗೆ ಎಂಬ ಆಪಾದನೆಯಿಂದ ಹೊರಬಂದಿದ್ದಾರೆ.
ಹೀಗೆ 12 ಲಕ್ಷ ರೂಪಾಯಿಗಳವರೆಗೂ ಆದಾಯ ತೆರಿಗೆ ಇಲ್ಲ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಇದೊಂದು ಒಳ್ಳೆ ನಿರ್ಧಾರ ಎಂದು ಸಂಭ್ರಮಿಸಿದ್ದಾರೆ. ಕೊನೆಗೂ ಮಧ್ಯಮ ವರ್ಗದ ಜನರ ಕಷ್ಟ ಸರ್ಕಾರಕ್ಕೆ ಅರಿವಾಯಿತಲ್ಲ ಇನ್ನಾದರೂ ತುಸು ಉಳಿತಾಯದ ಕಡೆ ಗಮನ ಹರಿಸಬಹುದು ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನು ನಿನ್ನೆವರೆಗೂ ಟ್ವಿಟರ್‌ನಲ್ಲಿ ಹಿಗ್ಗಾಮುಗ್ಗಾ ಟ್ರೋಲ್‌ಗೀಡಾಗಿದ್ದ ನಿರ್ಮಲಾ ಸೀತಾರಾಮನ್ ಅವರನ್ನು ಇಂದು ನೆಟ್ಟಿಗರು ಹಾಡಿ ಹೊಗಳಿದ್ದಾರೆ. ನೆಟ್ಟಿಗನೋರ್ವ ಎಐ ಬಳಸಿ ನಿರ್ಮಲಾ ಸೀತಾರಾಮನ್ ಅವರನ್ನು ದೇವತೆ ಹಾಗೆ ಎಡಿಟ್ ಮಾಡಿ ಮಿಡಲ್ ಕ್ಲಾಸ್ ಜನ ಇಂದು ನಿರ್ಮಲಾ ಸೀತಾರಾಮನ್ ಅವರನ್ನು ಹೀಗೆ ದೇವತೆಯ ಹಾಗೆ ನೋಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇಂತಹ ಹಲವಾರು ಟ್ವೀಟ್‌ಗಳು ನಿರ್ಮಲಾ ಸೀತಾರಾಮನ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


