Tuesday, August 11, 2026
spot_img
More
    spot_img
    HomeChampions Trophy 2025ಸ್ಟೇಡಿಯಂನಲ್ಲಿನ ಮಳೆ ನೀರನ್ನು ಇಂಗಿಸಲು ಸ್ಪಾಂಜ್, ಮೋಪ್ ಬಳಕೆ: ಪಾಕ್ ಕರ್ಮಕಾಂಡಕ್ಕೆ ನಕ್ಕ ಕ್ರಿಕೆಟ್ ಜಗತ್ತು;...

    ಸ್ಟೇಡಿಯಂನಲ್ಲಿನ ಮಳೆ ನೀರನ್ನು ಇಂಗಿಸಲು ಸ್ಪಾಂಜ್, ಮೋಪ್ ಬಳಕೆ: ಪಾಕ್ ಕರ್ಮಕಾಂಡಕ್ಕೆ ನಕ್ಕ ಕ್ರಿಕೆಟ್ ಜಗತ್ತು; ವಿಡಿಯೊ ವೈರಲ್

    ಲಾಹೋರ್: ಇಲ್ಲಿನ ಗಡ್ಡಾಫಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ (ಫೆಬ್ರವರಿ 28) ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಲೀಗ್ ಹಂತದ ಹತ್ತನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯಕ್ಕೆ ಮಳೆ ಅಡ್ಡಿಯನ್ನುಂಟುಮಾಡಿದ ಕಾರಣ ಫಲಿತಾಂಶವಿಲ್ಲದೇ ಅಂತ್ಯಗೊಂಡಿದೆ.

    Advertisement

    ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಆರಂಭಿಕ ಆಘಾತ ಅನುಭವಿಸಿದರೂ ಸಹ ಸೆದಿಕ್‌ಉಲ್ಲಾ ಅಟಲ್ ಹಾಗೂ ಅಜ್ಮತುಲ್ಲಾ ಓಮರ್ಜೈ ಜವಾಬ್ದಾರಿಯುತ ಆಟದ ನೆರವಿನಿಂದ 50 ಓವರ್‌ಗಳಲ್ಲಿ 273 ರನ್ ಕಲೆಹಾಕಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯಾಗೆ ಗೆಲ್ಲಲು 274 ರನ್‌ಗಳ ಗುರಿಯನ್ನು ನೀಡಿತು.

    ಈ ಗುರಿಯನ್ನು ಬೆನ್ನಟ್ಟಲು ಆರಂಭಿಸಿ ಶುರುವಿನಿಂದಲೇ ಅಬ್ಬರದ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ 12.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 109 ರನ್ ದಾಖಲಿಸಿತ್ತು. ಈ ಸಮಯಕ್ಕೆ ಶುರುವಾದ ಮಳೆ ಎಲ್ಲಿಯೂ ಬಿಡುವು ಕೊಡಲಿಲ್ಲ. ಹೀಗಾಗಿ ಪಂದ್ಯ ಫಲಿತಾಂಶವಿಲ್ಲದೇ ಅಂತ್ಯಗೊಂಡಿದೆ.

    ಹೀಗೆ ಈ ಟೂರ್ನಿಯಲ್ಲಿ ಮಳೆಯಿಂದ ರದ್ದಾದ ಎರಡನೇ ಪಂದ್ಯ ಇದಾಗಿದ್ದು, ಮಳೆ ಬಂದಾಗ ನೀರು ಇಂಗುವ ಸರಿಯಾದ ತಂತ್ರಜ್ಞಾನವಿಲ್ಲದ ಕಾರಣಕ್ಕಾಗಿ ಪಾಕ್ ಕ್ರಿಕೆಟ್ ಬೋರ್ಡ್ ಟೀಕೆಗೊಳಗಾಗಿದೆ. ಇನ್ನು ನಿನ್ನೆಯ ಪಂದ್ಯದಲ್ಲಿ ಸುರಿದ ಮಳೆಗೆ ಗಡ್ಡಾಫಿ ಮೈದಾನದಲ್ಲಿ ನೀರು ನಿಲುಗಡೆಯಾಗಿತ್ತು.

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ರೀತಿ ಮಳೆ ಬಂದರೆ ಸ್ವಯಂಚಲಿತವಾಗಿ ಇಂಗಿಹೋಗಲಿದೆ. ಇನ್ನೂ ಕೆಲ ಸ್ಟೇಡಿಯಂಗಳಲ್ಲಿ ನಿಂತ ನೀರನ್ನು ಇಂಗಿಸಲು ಯಂತ್ರೋಪಕರಣಗಳಿವೆ. ಆದರೆ ನಿನ್ನೆ ಮೈದಾನದಲ್ಲಿದ್ದ ನೀರನ್ನು ತೆರವುಗೊಳಿಸಲು ಮನೆಗಳಲ್ಲಿ ಬಳಸುವ ಮೋಪ್ ಹಾಗೂ ನೀರನ್ನು ಇಂಗಿಸಲು ಸ್ಪಾಂಜ್ ಬಳಸಿದ್ದಾರೆ. ಅಲ್ಲದೇ ಸಿಬ್ಬಂದಿಯೊಬ್ಬರು ಮೋಪ್ ಬಳಸಿ ನೀರು ತೆರವುಗೊಳಿಸುವಾಗ ಜಾರಿ ಬಿದ್ದ ಘಟನೆ ಕೂಡ ನಡೆದಿದೆ. ಈ ವಿಡಿಯೊ ಹಾಗೂ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಾಕ್ ಕರ್ಮಕಾಂಡ ಕಂಡು ಇಡೀ ಕ್ರಿಕೆಟ್ ಜಗತ್ತು ನಕ್ಕಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading