ಬೆಂಗಳೂರು: ಬಿಬಿಎಂಪಿ ಸಹಾಯಕ ಅಯುಕ್ತರೊಬ್ಬರ ಮೇಲೆ ಲೈಂಗಿಕ ನಿಂದನೆ ಅರೋಪ ಕೇಳಿಬಂದಿದೆ.
ಬಿಬಿಎಂಪಿ ಆಸ್ತಿ ವಿಭಾಗದಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ್ ಮೂರ್ತಿ ಎನ್ನುವವರ ವಿರುದ್ಧ ಕೇಂದ್ರ ಕಚೇರಿಯ ಕೆಲ ಮಹಿಳಾ ಸಿಬ್ಬಂದಿಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಈ ಹಿಂದೆ ಕೂಡ ಶ್ರೀನಿವಾಸ ಮೂರ್ತಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದರೂ ಎನ್ನಲಾಗಿದೆ. ಆಗ ಪಾಲಿಕೆ ನೌಕರರ ಸಂಘದ ಪದಾಧಿಕಾರಿಗಳು ಅಧಿಕಾರಿಗೆ ವಾರ್ನಿಂಗ್ ನೀಡಿ ಮತ್ತೆ ಮಹಿಳೆಯರ ತಂಟೆಗೆ ಹೋಗದಂತೆ ಬುದ್ಧಿವಾದ ಹೇಳಿ ರಾಜಿ ಸಂಧಾನ ಮಾಡಿಸಿದ್ದರು.
ಆ ನಂತರವೂ ಶ್ರೀನಿವಾಸ ಮೂರ್ತಿ ತನ್ನ ಧೋರಣೆ ಬದಲಿಸಿಕೊಳ್ಳದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳಿಗೆ ಮಹಿಳಾ ಸಿಬ್ಬಂದಿಗಳು ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಮಹಿಳಾ ಸಿಬ್ಬಂದಿಳು ವಿಶೇಷ ಆಯುಕ್ತರಿಗೆ ಮತ್ತೊಮ್ಮೆ ಪತ್ರ ಬರೆದು ತಮ್ಮ ಮೇಲಿನ ದೌರ್ಜನ್ಯದ ಬಗ್ಗೆ ದೂರು ನೀಡಿದ್ದಾರೆ.
ಸಹಾಯಕ ಅಯುಕ್ತ ಶ್ರೀನಿವಾಸ ಮೂರ್ತಿ ಅವರು ಮಹಿಳೆಯರನ್ನು ತನ್ನ ಕೊಠಡಿಗೆ ಕರೆಸಿ ಲೈಂಗಿಕವಾಗಿ ನಿಂದನೆ ಮಾಡುತ್ತಾರೆ ಈ ಕುರಿತಂತೆ ಹಿರಿಯ ಅಧಿಕಾರಿಗಳಿಗೆ ಚಾಡಿ ಹೇಳಿದರೆ ನಿಮ್ಮ ಸೇವಾ ಪುಸ್ತಕದಲ್ಲಿ ರೀ ಮಾರ್ಕ ಬರಿತ್ತಿನಿ ಅಂತ ಬೆದರಿಕೆ ಹಾಕುತ್ತಾರೆ ಎಂದು ಮಹಿಳೆಯರು ದೂರಿದ್ದಾರೆ.
ಪ್ರತಿನಿತ್ಯ ಮಹಿಳಾ ಸಿಬ್ಬಂದಿಯನ್ನು 10 ಕ್ಕೂ ಹೆಚ್ಚು ಬಾರಿ ಕೊಠಡಿಗೆ ಕರೆಸಿ ಲೈಂಗಿಕವಾಗಿ ನಿಂದನೆ ಮಾಡುತ್ತಾರೆ ಅನಾವಶ್ಯಕವಾಗಿ..ಅಸಂಬದ್ಧ ವಿಷಯಗಳ ಮಾತನಾಡೋದು..ಕರ್ತವ್ಯಕ್ಕೆ ಅಡ್ಡಿ ಪಡಿಸೋದು. ಏರು ಧ್ವನಿಯಲ್ಲಿ ಬಾಯಿಗೆ ಬಂದಂತೆ ಮಾತನಾಡೋದು. ಸಾರ್ವಜನಿಕರ ಮುಂದೆ ಸಿಬ್ಬಂದಿಗಳನ್ನು ಹೀಯಾಳಿಸುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದರಿಂದ ಆಸ್ತಿ ವಿಭಾಗದ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರೋ ಸಿಬ್ಬಂದಿಗಳು ಮಾನಸಿಕವಾಗಿ .ದೈಹಿಕವಾಗಿ ಖಿನ್ನತೆಗೆ ಒಳಗಾಗಿದ್ದಾರೆ.ಈ ಹಿನ್ನೆಲೆಯಲ್ಲಿ ಸಹಾಯಕ ಅಯುಕ್ತ ಶ್ರೀನಿವಾಸ ಮೂರ್ತಿ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಸಂತ್ರಸ್ಥ ಮಹಿಳೆಯರು ಆಗ್ರಹಿಸಿದ್ದಾರೆ.
ಅವರನ್ನು ವರ್ಗಾವಣೆ ಮಾಡದಿದ್ದರೆ ಇಲ್ಲಿರುವ ಎಲ್ಲಾ ಸಿಬ್ಬಂದಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿ ಎಂದು ಮಹಿಳಾ ಸಿಬ್ಬಂದಿಗಳು ಒತ್ತಾಯಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


