Wednesday, November 4, 2026
spot_img
More
    spot_img
    HomeEntertainment2025ರ ಮೊದಲಾರ್ಧದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಟಾಪ್‌ 10 ಚಿತ್ರಗಳ ಪಟ್ಟಿ; ನಂಬರ್‌ 1 ಯಾವುದು?

    2025ರ ಮೊದಲಾರ್ಧದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಟಾಪ್‌ 10 ಚಿತ್ರಗಳ ಪಟ್ಟಿ; ನಂಬರ್‌ 1 ಯಾವುದು?

    ಇಂದು ( ಜುಲೈ 1 ) 2025ರ ದ್ವಿತೀಯಾರ್ಧ ಆರಂಭವಾಗಿದ್ದು, ನಿನ್ನೆಗೆ ಮೊದಲಾರ್ಧ ಮುಕ್ತಾಯಗೊಂಡಿದೆ. ಇನ್ನು ಈ ಅವಧಿಯಲ್ಲಿ ಭಾರತದ ಎಲ್ಲ ಭಾಷೆಯ ಚಿತ್ರರಂಗಗಳೂ ಸೇರಿದಂತೆ ಹಲವಾರು ಚಿತ್ರಗಳು ಬಿಡುಗಡೆಯಾಗಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಒಟ್ಟು 16 ಚಿತ್ರಗಳು ಮಾತ್ರ 100 ಕೋಟಿ ರೂ ಕ್ಲಬ್‌ ಸೇರಿವೆ.

    ಸದ್ಯ ಧನುಷ್‌ ನಟನೆಯ ಕುಬೇರಾ ಇಂದಿಗೆ 95 ಕೋಟಿ ಗಡಿ ದಾಟಿದ್ದು, ಈ ಒಂದು ಚಿತ್ರ ಬಿಟ್ಟು ಇಲ್ಲಿಯವರೆಗೆ ಬಿಡುಗಡೆಯಾಗಿರುವ ಇನ್ಯಾವ ಚಿತ್ರವೂ 100ರ ಗಡಿ ದಾಟುವ ಸಾಧ್ಯತೆಗಳಿಲ್ಲ. ಇನ್ನು ಈ 16 ಚಿತ್ರಗಳ ಪೈಕಿ ಒಂದು ಚಿತ್ರ ಮಾತ್ರ 500 ಕೋಟಿ ಕ್ಲಬ್‌ ಸೇರಿದೆ. ಹೌದು, ವಿಕ್ಕಿ ಕೌಶಾಲ್‌ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಚಿತ್ರ 716.91 ಕೋಟಿ ರೂ ಗ್ರಾಸ್‌ ಕಲೆಕ್ಷನ್‌ ಮಾಡಿ ಅಗ್ರಸ್ಥಾನದಲ್ಲಿದೆ. ಟಾಪ್‌ 10 ಪಟ್ಟಿ ಮುಂದಿದೆ.

    ಕಲೆಕ್ಷನ್
    1. ಛಾವಾ (ಹಿಂದಿ ) – 716.91 ಕೋಟಿ ಗ್ರಾಸ್
    2. ಸಂಕ್ರಾಂತಿಕಿ ವಸ್ತುನ್ನಾಂ ( ತೆಲುಗು ) – 220.08 ಕೋಟಿ‌ ಗ್ರಾಸ್
    3. ಹೌಸ್‌ಫುಲ್‌ 5 ( ಹಿಂದಿ ) – 217.15 ಕೋಟಿ ಗ್ರಾಸ್
    4. ರೈಡ್‌ 2 ( ಹಿಂದಿ ) – 2063.4 ಕೋಟಿ ಗ್ರಾಸ್
    5. ಗುಡ್‌ ಬ್ಯಾಡ್‌ ಅಗ್ಲಿ ( ತಮಿಳು ) – 180.8 ಕೋಟಿ ಗ್ರಾಸ್
    6. ಗೇಮ್‌ ಚೇಂಜರ್‌ ( ತೆಲುಗು ) – 156.03 ಕೋಟಿ ಗ್ರಾಸ್
    7. ಸಿತಾರೆ ಜಮೀನ್‌ ಪಾರ್‌ ( ಹಿಂದಿ ) – 151.4 ಕೋಟಿ ಗ್ರಾಸ್
    8. ತುಡರುಮ್‌ ( ಮಲಯಾಳಂ ) – 141.58 ಕೋಟಿ ಗ್ರಾಸ್
    9. ಸ್ಕೈ ಫೋರ್ಸ್‌ ( ಹಿಂದಿ ) – 135. 51 ಕೋಟಿ ಗ್ರಾಸ್
    10. ಸಿಕಂದರ್‌ ( ಹಿಂದಿ ) – 130.39 ಕೋಟಿ ಗ್ರಾಸ್
      ( ಕಲೆಕ್ಷನ್‌ ಮೂಲ: ಸ್ಯಾಕ್‌ನಿಕ್‌ ವೆಬ್‌ಸೈಟ್‌ )

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search