ಚಳಿಗಾಲದಲ್ಲಿ ಒಣ ಚರ್ಮ ಮತ್ತು ತಲೆಯ ತುರಿಕೆ ಸಾಮಾನ್ಯ ಸಮಸ್ಯೆಗಳಾಗಿವೆ. ವಿಶೇಷವಾಗಿ ತಲೆ ಮತ್ತು ಕೂದಲಿಗೆ ಸಂಬಂಧಿಸಿದಂತೆ, ಒಣಚರ್ಮ, ಎಣ್ಣೆಯುಕ್ತ ಚರ್ಮ ಅಥವಾ ಫಂಗಸ್ ಸೋಂಕುಗಳಿಂದ ಉಂಟಾಗುವ ತಲೆಹೊಟ್ಟು (Dandruff) ಜನರ ಜೀವದ ಬಿಸಿಲಾಗಿದೆ. ಚಳಿಗಾಲದಲ್ಲಿ ಈ ತಲೆಹೊಟ್ಟಿನ ತೊಂದರೆ ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದರಿಂದ ಕೂದಲು ದುರ್ಬಲವಾಗುವುದು, ಜಾರುಹೋಗುವುದು ಹಾಗೂ ತಲೆ ತುರಿಕೆ ಪ್ರಾರಂಭವಾಗುವುದುಂಟು.
ತಲೆಹೊಟ್ಟು ನಿವಾರಣೆಗೆ ಹಲವು ಜನರು ಶ್ಯಾಂಪೂಗಳ ಮೊರೆ ಹೋಗುತ್ತಾ ಇದ್ದರೂ, ಶಾಶ್ವತ ಪರಿಹಾರ ಸಿಗುವುದಿಲ್ಲ. ಆದರೆ ಆಯುರ್ವೇದ ವೈದ್ಯರು ಕೆಲವು ನೈಸರ್ಗಿಕ ಮನೆಮದ್ದುಗಳನ್ನು ಶಿಫಾರಸು ಮಾಡುತ್ತಾರೆ, ಇವುಗಳನ್ನು ನಿಯಮಿತವಾಗಿ ಬಳಸಿದರೆ ತಲೆಹೊಟ್ಟಿನ ಸಮಸ್ಯೆಯಿಂದ ಶಾಶ್ವತ ಪರಿಹಾರ ದೊರಕಬಹುದು.ಈ ಮನೆಮದ್ದುಗಳು ಸ್ತ್ರೀಯರಿಗೂ, ಪುರುಷರಿಗೂ ಸಮಾನವಾಗಿ ಪರಿಣಾಮಕಾರಿಯಾಗಿವೆ. ತಲೆ ತುರಿಕೆ, ಕಿರಿಕಿರಿ, ಮುಜುಗರ ಈ ಎಲ್ಲ ಸಮಸ್ಯೆಗಳಿಂದ ಬೇಸರವಾಗಿರುವವರು ಈ ನೈಸರ್ಗಿಕ ಪರಿಹಾರಗಳನ್ನು ಅನುಸರಿಸಿ ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದು.
ತಲೆಹೊಟ್ಟು ಸಮಸ್ಯೆಗೆ ಇಲ್ಲಿವೆ ಕಾರಣಗಳು:
ಸ್ವಚ್ಛತೆಯ ಕೊರತೆ
ಕೂದಲಿಗೆ ಹೆಚ್ಚು ಶ್ಯಾಂಪು ಬಳಕೆ.
ಕೂದಲನ್ನು ಸರಿಯಾಗಿ ಉಜ್ಜಿಕೊಳ್ಳದಿರುವುದು
ಹೇರ್ ಸ್ಟೈಲಿಂಗ್ ಉತ್ಪನ್ನಗಳ ಪ್ರತಿಕೂಲ ಪರಿಣಾಮ
ಚರ್ಮದ ಅಲರ್ಜಿ
ಹಾರ್ಮೋನುಗಳ ಅಸಮತೋಲನ
ಪೌಷ್ಟಿಕಾಂಶದ ಕೊರತೆ

ತಲೆಹೊಟ್ಟು ನಿವಾರಣೆಗೆ ಮನೆಮದ್ದುಗಳು
*ಒಂದು ಸ್ವಚ್ಛ ಬಟ್ಟಲಿನಲ್ಲಿ ಸಮ ಪ್ರಮಾಣದಲ್ಲಿ ನಿಂಬೆ ರಸ ಮತ್ತು ತಾಜಾ ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ನಿಮ್ಮ ತಲೆಚರ್ಮದ ಮೇಲೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ. ನಂತರ 10 ನಿಮಿಷಗಳವರೆಗೆ ಹಾಗೆ ಬಿಡಿ, ತಣ್ಣನೆಯ ನೀರಿನಿಂದ ಕೂದಲನ್ನು ಸ್ವಚ್ಛವಾಗಿ ತೊಳೆಯಿರಿ.ನಿಂಬೆ ರಸದಲ್ಲಿರುವ ಆಮ್ಲೀಯ ಗುಣಗಳು ಫಂಗಸ್‌ಗಳನ್ನು ನಾಶಮಾಡಲು ಸಹಾಯಕವಾಗುತ್ತವೆ, ಇನ್ನು ಮೊಸರು ತಲೆಚರ್ಮವನ್ನು ಆರಾಮವಾಗಿಸಲು ಹಾಗೂ ತಂಪು ನೀಡಲು ಸಹಾಯ ಮಾಡುತ್ತದೆ. ತಲೆಹೊಟ್ಟಿನ ಸಮಸ್ಯೆ ನಿವಾರಣೆಗೆ ಈ ಮನೆಮದ್ದನ್ನು ವಾರದಲ್ಲಿ ಕನಿಷ್ಠ ಎರಡು ಬಾರಿ ಬಳಸುವುದು ಉತ್ತಮ.
*ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ತೆಂಗಿನ ಎಣ್ಣೆ ಇದ್ದೆ ಇರುತ್ತದೆ ಇದನ್ನು ನಿಂಬೆ ರಸದೊಂದಿಗೆ ಬೆರೆಸಿ ನಿಮ್ಮ ನೆತ್ತಿಗೆ ಮಸಾಜ್ ಮಾಡಿ. ಬಳಿಕ 20 ನಿಮಿಷ ಬಿಟ್ಟು ಕೂದಲನ್ನು ಚೆನ್ನಾಗಿ ತೊಳೆದುಕೊಳ್ಳಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.
*ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೆನೆಸಿ, ಬೆಳಿಗ್ಗೆ ಪೇಸ್ಟ್ ಮಾಡಿ, ನೆತ್ತಿಗೆ ಹಚ್ಚಿ. 30 ನಿಮಿಷಗಳ ನಂತರ, ಕೂದಲನ್ನು ತೊಳೆದರೆ, ತುರಿಕೆ ಮತ್ತು ತಲೆಹೊಟ್ಟು ಕಡಿಮೆಯಾಗುತ್ತದೆ.
*ಎಲ್ಲಾ ಮೊಡವೆ-ವಿರೋಧಿ ಮತ್ತು ಶಿಲೀಂಧ್ರ-ವಿರೋಧಿ ಔಷಧಿಯಾಗಿ ಚಹಾ ಮರದ(Tea Tree Oil) ಎಣ್ಣೆಯನ್ನು ಬಳಕೆ ಮಾಡಲಾಗುತ್ತದೆ. ಬ್ಯಾಕ್ಟೀರಿಯಾದ ಸೋಂಕುಗಳ ವಿರುದ್ಧ ಹೋರಾಡುವ ಅಸಾಧಾರಣ ಶಕ್ತಿಯನ್ನು ಇದು ಹೊಂದಿದೆ. ನಿಮ್ಮ ಶಾಂಪೂಗೆ ಒಂದು ಹನಿ ಅಥವಾ ಎರಡು ಹನಿ ಟೀ ಟ್ರೀ ಎಣ್ಣೆಯನ್ನು ಸೇರಿಸಿ ಮತ್ತು ಸಾಮಾನ್ಯವಾಗಿ ತೊಳೆಯಿರಿ.
*ನೀವು ಸರಳವಾಗಿ ಆಪಲ್ ಸೈಡರ್ ವಿನೆಗರ್ ಅನ್ನು ನೀರಿನೊಂದಿಗೆ ಸಮಾನ ಪ್ರಮಾಣದಲ್ಲಿ ಬೆರೆಸಿ ಶಾಂಪೂ ಮಾಡಿಕೊಳ್ಳಬಹುದು. ಬಳಿಕ ಇದನ್ನು ನೆತ್ತಿಗೆ ಹೆಚ್ಚಿ 15 ನಿಮಿಷಗಳ ಕಾಲ ಬಿಟ್ಟು ತಲೆಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಬಹುದು. ಇದು ಪಿಹೆಚ್ ಅನ್ನು ಸಮತೋಲನಗೊಳಿಸಲು ಮತ್ತು ತಲೆಹೊಟ್ಟಿನ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
*ಬೇವಿನ ಎಲೆಗಳನ್ನು ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿ, ನೆತ್ತಿಗೆ ಹಚ್ಚಿ. ಕನಿಷ್ಠ 10 ನಿಮಿಷಗಳ ಕಾಲ ಒಣಗಲು ಬಿಡಿ, ನಂತರ ನಿಮ್ಮ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ. ಇದು ನೆತ್ತಿಯಲ್ಲಿನ ಸೋಂಕನ್ನು ಕಡಿಮೆ ಮಾಡುತ್ತದೆ.
*ಈರುಳ್ಳಿ ರಸವನ್ನು ಹೊರತೆಗೆದು ಕೂದಲಿನ ಬೇರುಗಳಿಗೆ ಹಚ್ಚಿದರೆ, ಇದು ಸಹ ತಲೆಹೊಟ್ಟು ಹೋಗಲಾಡಿಸಲು ತುಂಬಾ ಸಹಾಯ ಮಾಡುತ್ತದೆ
ಲೆಮನ್‌ಗ್ರಾಸ್ ಟೀ: ದೇಹದ ಡಿಟಾಕ್ಸ್‌ಗೂ, ಆರೋಗ್ಯ ವೃದ್ಧಿಗೂ ಪ್ರತಿ ದಿನ ಕುಡಿಯಲೇಬೇಕಾದ ಡ್ರಿಂಕ್!
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


