ಚಿನ್ನಯ್ಯ ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದೇನೆ, ಹೂತಿರುವ ಜಾಗ ತೋರಿಸುತ್ತೇನೆ ಎಂದು ಕೈಯಲ್ಲೊಂದು ಬುರುಡೆ ಹಿಡಿದುಕೊಂಡು ಬಂದಿದ್ದ. ಈಗ ಈ ಬುರುಡೆ ಎಲ್ಲಿಂದ ಬಂತು ಎನ್ನುವ ವಿಚಾರ ಕುರಿತು ತನಿಕೆನಡೆದಿದ್ದು ಸತ್ಯ ಗೊತ್ತಾಗಿದೆ.
ಜಯಂತ್ ನನಗೆ ಬುರುಡೆ ಮತ್ತು ಮೂಳೆ ಕೊಟ್ಟಿದ್ದರು. ಜಯಂತ್ ಮನೆಯಲ್ಲೇ ಮೊದಲು ಬುರುಡೆ, ಮೂಳೆ ನೋಡಿದ್ದು ಎಂದು ಮೊದಲು ಬುರುಡೆ ತಗೆದುಕೊಂಡ ಬಗ್ಗೆ ಚಿನ್ನಯ್ಯ ಹೇಳಿಕೆ ನೀಡಿದ್ದಾನೆ. ನಂತರ ಗಿರೀಶ್ ಮಟ್ಟಣ್ಣನವರ್ ಸೂಚನೆಯಂತೆ ಕೋರ್ಟ್‌ನಲ್ಲಿ ತಾನೇ ಬುರುಡೆ ತಂದಿದ್ದು ಎಂದು ಕೋರ್ಟ್‌ನಲ್ಲಿ ಹೇಳಿದ್ದಾಗಿ ಚಿನ್ನಯ್ಯ ಎಸ್ಐಟಿ ಮುಂದೆ ಚಿನ್ನಯ್ಯ ಹೇಳಿದ್ದಾನೆ.
ಈ ಮಾಹಿತಿ ಆಧರಿಸಿ ಎಸ್ಐಟಿ ಬೆಂಗಳೂರಿಗೆ ಕರೆತಂದು ಜಯಂತ್ ಮನೆಯಲ್ಲಿ ಮಹಜರು ನಡೆಸಿದ್ದಾರೆ.ಜಯಂತ್ ಮನೆಯಲ್ಲೇ ಚಿನ್ನಯ್ಯನ ಹೇಳಿಕೆಯನ್ನು ಮೊದಲು ವಿಡಿಯೋ ಮಾಡಲಾಗಿತ್ತಂತೆ. ವಿಡಿಯೋ ಹೇಳಿಕೆ ಪಡೆದನಂತರ ಅದನ್ನ ಗಿರೀಶ್ ಮಟ್ಟಣ್ಣನವರ್ ಸೂಚನೆಯಂತೆ ಜಯಂತ್ ಡಿಲೀಟ್ ಮಾಡಿದ್ದ. ಬುರುಡೆ ಪ್ಲ್ಯಾನ್ ಬಗ್ಗೆ ಜಯಂತ್ ಮನೆಯಲ್ಲೇ ರಿಹರ್ಸಲ್ ನಡೆದಿದ್ದು ಈ ವಿಡಿಯೋಗಾಗಿ ಪೊಲೀಸರು ವಶಪಡಿಸಿಕೊಂಡಿರುವ ಫೋನ್‌ಗಳನ್ನ ರಿಟ್ರೀವ್ ಮಾಡುತ್ತಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


