Tuesday, November 3, 2026
spot_img
More
    spot_img
    HomeLatest newsರಕ್ತನಾಳ ಬ್ಲಾಕೇಜ್ ಸಂಕೇತಗಳು: ಹೃದಯಾಘಾತದ ಅಪಾಯ ತಪ್ಪಿಸಲು ತಿಳಿಯಲೇಬೇಕಾದ ಲಕ್ಷಣಗಳು

    ರಕ್ತನಾಳ ಬ್ಲಾಕೇಜ್ ಸಂಕೇತಗಳು: ಹೃದಯಾಘಾತದ ಅಪಾಯ ತಪ್ಪಿಸಲು ತಿಳಿಯಲೇಬೇಕಾದ ಲಕ್ಷಣಗಳು

    ಇತ್ತೀಚಿನ ದಿನಗಳಲ್ಲಿ ವೇಗದ ಜೀವನಶೈಲಿ, ಒತ್ತಡ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆಯಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಅನೇಕರು ತಮ್ಮ ಆರೋಗ್ಯದಲ್ಲಿ ಕಾಣಿಸಿಕೊಳ್ಳುವ ಆರಂಭಿಕ ಚಿಹ್ನೆಗಳನ್ನು ನಿರ್ಲಕ್ಷಿಸುವುದರಿಂದ ಹೃದ್ರೋಗವು ಮಾರಣಾಂತಿಕ ಹಂತ ತಲುಪುತ್ತಿದೆ.

    ಹೃದಯಕ್ಕೆ ರಕ್ತ ಪೂರೈಸುವ ಧಮನಿಗಳಲ್ಲಿ ಪ್ಲಾಕ್ ಜಮಾವಾಗಿ ರಕ್ತನಾಳ ಕಿರಿದಾಗಿದಾಗ ಅಥವಾ ಸಂಪೂರ್ಣವಾಗಿ ತಡೆಗಟ್ಟಿದಾಗ ಹೃದಯಾಘಾತ ಉಂಟಾಗುತ್ತದೆ. ರಕ್ತನಾಳಗಳು ದೇಹದಾದ್ಯಂತ ಹರಡಿಕೊಂಡಿದ್ದು, ಅಂಗಾಂಗಗಳಿಗೆ ರಕ್ತ ಮತ್ತು ಪೋಷಕಾಂಶಗಳನ್ನು ತಲುಪಿಸುತ್ತವೆ. ಬ್ಲಾಕೇಜ್ ಉಂಟಾದರೆ ಆಮ್ಲಜನಕ ಮತ್ತು ಪೋಷಕಾಂಶಗಳ ಸರಬರಾಜು ತೊಂದರೆಯಾಗುತ್ತದೆ, ಇದರಿಂದ ಆರೋಗ್ಯ ಸಮಸ್ಯೆಗಳು ಗಂಭೀರಗೊಳ್ಳುತ್ತವೆ.

    ರಕ್ತನಾಳಗಳಲ್ಲಿ ಬ್ಲಾಕೇಜ್ ಉಂಟಾಗುವ ಪ್ರಮುಖ ಕಾರಣಗಳಲ್ಲಿ ಅಸ್ವಸ್ಥ ಜೀವನಶೈಲಿ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಹೆಚ್ಚಳ, ಧೂಮಪಾನ, ಬೊಜ್ಜು, ವ್ಯಾಯಾಮದ ಕೊರತೆ ಮುಂತಾದವುಗಳಿವೆ. ಈ ಸಂದರ್ಭ ದೇಹದಲ್ಲಿ ಹಲವು ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕರ ಜೀವನಶೈಲಿಯಿಂದಾಗಿ ಹೃದಯ ಕಾಯಿಲೆಯಿಂದ ಸಾವಿನ ಪ್ರಮಾಣ ಹೆಚ್ಚುತ್ತಿದೆ.

    ರಕ್ತನಾಳಗಳಲ್ಲಿ ಬ್ಲಾಕೆಜ್ ಉಂಟಾದಾಗ ಕಾಣಿಸಿಕೊಳ್ಳುವ ಲಕ್ಷಣಗಳು :

    ಎದೆ ನೋವು:

    ಹೃದಯದ ರಕ್ತನಾಳಗಳು ನಿರ್ಬಂಧಗೊಂಡಾಗ ಎದೆ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ ಲಕ್ಷಣ. ಈ ನೋವು ಹೃದಯಕ್ಕೆ ಆಮ್ಲಜನಕದ ಪೂರೈಕೆ ಕಡಿಮೆಯಾಗುವುದರಿಂದ ಉಂಟಾಗುತ್ತದೆ. ಈ ನೋವು ಮಧ್ಯ ಎದೆಯ ಭಾಗದಲ್ಲಿ ಕಾಣಿಸಿಕೊಳ್ಳಬಹುದು ಮತ್ತು ಅದರ ತೀವ್ರತೆ ಸೌಮ್ಯದಿಂದ ತೀವ್ರವಾಗಿರಬಹುದು.

    ಹೃದಯಾಘಾತದ ಎದೆ ನೋವು ಕೇವಲ ನೋವಾಗಿರದೆ, ಅದು ಎದೆಯಲ್ಲಿ ಒಂದು ರೀತಿಯ ಒತ್ತಡ, ಬಿಗಿತ ಅಥವಾ ಭಾರವಾದ ಅನುಭವವನ್ನು ನೀಡಬಹುದು. ಇದನ್ನು ಸಾಮಾನ್ಯವಾಗಿ ಯಾರೋ ನಿಮ್ಮ ಎದೆಯ ಮೇಲೆ ಒತ್ತಿದಂತೆ ಎಂದು ವಿವರಿಸಲಾಗುತ್ತದೆ. ದೈಹಿಕ ವ್ಯಾಯಾಮ, ಅತಿಯಾದ ಒತ್ತಡ ಅಥವಾ ಭಾರವಾದ ಊಟ ಸೇವಿಸಿದ ನಂತರ ಈ ನೋವು ಉಲ್ಬಣಗೊಳ್ಳಬಹುದು.

    ಅತಿಯಾದ ಆಯಾಸ:

    ಯಾವುದೇ ಕೆಲಸ ಮಾಡದಿದ್ದರೂ ಅತಿಯಾದ ಆಯಾಸ ಅಥವಾ ದೌರ್ಬಲ್ಯ ಅನಿಸುತ್ತಿದ್ದರೆ, ಅದು ರಕ್ತನಾಳಗಳಲ್ಲಿ ಬ್ಲಾಕೇಜ್‌ನ ಪ್ರಮುಖ ಸೂಚನೆ ಆಗಿರಬಹುದು. ನರಗಳಲ್ಲಿ ತಡೆ ಉಂಟಾದಾಗ, ಹೃದಯವು ರಕ್ತವನ್ನು ಪಂಪ್ ಮಾಡಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ.

    ಇದರಿಂದಾಗಿ ದೇಹವು ಪದೇ ಪದೇ ದಣಿವು ಮತ್ತು ದುರ್ಬಲತೆಯನ್ನು ಅನುಭವಿಸುತ್ತದೆ.ಹೃದಯವು ರಕ್ತವನ್ನು ಪರಿಣಾಮಕಾರಿಯಾಗಿ ಪಂಪ್ ಮಾಡಲು ಸಾಧ್ಯವಾಗದಿದ್ದಾಗ, ಸ್ನಾಯುಗಳು ಮತ್ತು ಪ್ರಮುಖ ಅಂಗಗಳಿಗೆ ಅಗತ್ಯವಾದ ಆಮ್ಲಜನಕ ಸಿಗುವುದಿಲ್ಲ. ಇದರಿಂದಾಗಿ ಸಾಮಾನ್ಯ ಚಟುವಟಿಕೆಗಳನ್ನೂ ಮಾಡುವಾಗಲೂ ತೀವ್ರ ಆಯಾಸ ಎದುರಾಗುತ್ತದೆ.

    ಉಸಿರಾಟದ ತೊಂದರೆ

    ನಿಮ್ಮ ಆರೋಗ್ಯವು ಉತ್ತಮವಾಗಿ ಇದ್ದರೂ ಸಹ ನಿಮಗೆ ಉಸಿರಾಟದ ತೊಂದರೆ ಆಗುತ್ತಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ಇದು ರಕ್ತನಾಳಗಳಲ್ಲಿನ ಬ್ಲಾಕೇಜ್ ಅಥವಾ ಹೃದಯದ ರಕ್ತ ಪಂಪ್ ಮಾಡುವ ಸಾಮರ್ಥ್ಯದಲ್ಲಿನ ಇಳಿಕೆಯನ್ನು ಸೂಚಿಸುತ್ತದೆ.

    ಹೃದಯದಲ್ಲಿನ ಅಡಚಣೆಯಿಂದಾಗಿ ದೇಹಕ್ಕೆ ಸಾಕಷ್ಟು ಆಮ್ಲಜನಕ ಸಿಗದಿರುವಾಗ ಈ ರೀತಿಯ ಉಸಿರಾಟದ ಸಮಸ್ಯೆಗಳು ಉಂಟಾಗುತ್ತವೆ.ಸಾಮಾನ್ಯವಾಗಿ ವಿಶ್ರಾಂತಿ ಸಮಯದಲ್ಲಿ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ, ಸಣ್ಣ ಪ್ರಮಾಣದ ದೈಹಿಕ ಚಟುವಟಿಕೆಗಳನ್ನು ಮಾಡುವಾಗ ಉಸಿರಾಟದ ತೊಂದರೆ ಹೆಚ್ಚಾಗಬಹುದು. ಏಕೆಂದರೆ, ಹೃದಯವು ದೇಹದ ಆಮ್ಲಜನಕದ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುವುದಿಲ್ಲ.

    ತಲೆ ಸುತ್ತುವುದು

    ನಿಮಗೆ ಪದೇ ಪದೇ ತಲೆ ಸುತ್ತಿದಂತಾಗಿ ಅಥವಾ ಮೂರ್ಛೆ ಹೋದ ಅನುಭವ ಆಗುತ್ತಿದೆಯೇ? ಹಾಗಾದರೆ ಎಚ್ಚರ! ಇದು ರಕ್ತನಾಳಗಳಲ್ಲಿನ ಬ್ಲಾಕೇಜ್‌ನ ಪ್ರಮುಖ ಲಕ್ಷಣವಾಗಿರಬಹುದು.
    ರಕ್ತನಾಳಗಳಲ್ಲಿ ಬ್ಲಾಕೇಜ್ ಉಂಟಾದಾಗ, ಮೆದುಳಿಗೆ ಅಗತ್ಯವಾದ ಆಮ್ಲಜನಕದ ಪೂರೈಕೆ ಕಡಿಮೆಯಾಗುತ್ತದೆ.

    ಇದರ ಪರಿಣಾಮವಾಗಿ ತಲೆತಿರುಗುವಿಕೆ ಅಥವಾ ಪ್ರಜ್ಞೆ ಕಳೆದುಕೊಳ್ಳುವ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದೇ ಕಾರಣದಿಂದಾಗಿ ರಕ್ತದ ಹರಿವು ಕಡಿಮೆಯಾಗಿ ಮೆದುಳು ಮತ್ತು ದೇಹದ ಇತರೆ ಭಾಗಗಳಿಗೆ ಆಮ್ಲಜನಕ ಸರಿಯಾಗಿ ಸಿಗುವುದಿಲ್ಲ. ಇದು ತಲೆನೋವು, ವಾಕರಿಕೆ ಮತ್ತು ವಾಂತಿಯಂತಹ ಸಮಸ್ಯೆಗಳಿಗೂ ಕಾರಣವಾಗಬಹುದು.

    ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಏರಿಕೆ: ಇಂದಿನಿಂದಲೇ ಜಾರಿ

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search