ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ದಿಂದ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (KSSIDC)ದಲ್ಲಿನ ಗ್ರೂಪ್-ಎ, ಬಿ ಮತ್ತು ಸಿ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಉಳಿಕೆ ವೃಂದದಲ್ಲಿ 33 ಮತ್ತು ಕಲ್ಯಾಣ ಕರ್ನಾಟಕ ವೃಂದದಲ್ಲಿ 11 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಪರೀಕ್ಷೆಗೆ ನೋಂದಣಿಯಾಗಲು ನ.1 ರಿಂದ 14ರವರೆಗೆ ಅವಕಾಶ ನೀಡಲಾಗಿದೆ. ಆಸಕ್ತರು ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಪ್ರಮುಖ ವಿವರಗಳು
ನೇಮಕಾತಿ ಪ್ರಾಧಿಕಾರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ಒಟ್ಟು ಹುದ್ದೆಗಳು: 44
ಉಳಿಕೆ ವೃಂದ: 33
ಕಲ್ಯಾಣ ಕರ್ನಾಟಕ ವೃಂದ: 11
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕನವೆಂಬರ್ 01
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ನವೆಂಬರ್ 14ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ ನವೆಂಬರ್ 15 (ಸಂಜೆ 4 ಗಂಟೆಯೊಳಗೆ)
ಶೈಕ್ಷಣಿಕ ಅರ್ಹತೆಗಳು
ಹುದ್ದೆಯ ಹೆಸರು ವ್ಯವಸ್ಥಾಪಕರುಗ್ರೂಪ್-ಕಲೆ/ವಿಜ್ಞಾನ/ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ
ಸಹಾಯಕ ವ್ಯವಸ್ಥಾಪಕರು / ಹಿರಿಯ ಸಹಾಯಕರುಗ್ರೂಪ್-ಬಿ / ಗ್ರೂಪ್-ಸಿಯಾವುದೇ ಪದವಿ
ಕಿರಿಯ ಸಹಾಯಕರುಗ್ರೂಪ್-ಸಿಪಿಯುಸಿ ಜೊತೆಗೆ ಕಂಪ್ಯೂಟರ್ ಜ್ಞಾನ
ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್)ಗ್ರೂಪ್-ಎಎಂಜಿನಿಯರಿಂಗ್ ಪದವಿ (ಸಿವಿಲ್) ಜೊತೆಗೆ ಮೂರು ವರ್ಷದ ಅನುಭವಸಹಾಯಕ ಅಭಿಯಂತರರು (ಸಿವಿಲ್ / ವಿದ್ಯುತ್)ಗ್ರೂಪ್-ಬಿಸಂಬಂಧಿತ ವಿಷಯದಲ್ಲಿ ಬಿಇ ಪದವಿ
ವಯೋಮಿತಿ (ಕನಿಷ್ಠ 18 ವರ್ಷಗಳು)
ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ (ಸರ್ಕಾರದ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ):
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ: 38 ವರ್ಷಗಳು
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: 41 ವರ್ಷಗಳು
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ: 43 ವರ್ಷಗಳು
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ: ಪರಿಷ್ಕೃತ ಬೆಲೆಗಳು ಇಂದಿನಿಂದಲೇ ಜಾರಿ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


