ಬೆಂಗಳೂರು: ಶಾಸಕ ಯತ್ನಾಳ್ ಅವರು ಯಾವ ಶುಭ ಮುಹೂರ್ತಕ್ಕೂ ಕಾಯದೇ ನನ್ನ ವಿರುದ್ಧ ಯಾವುದೇ ದಾಖಲೆ ಅಥವಾ ವಿಡಿಯೋಗಳಿದ್ದರೆ ತಕ್ಷಣವೇ ಬಿಡುಗಡೆ ಮಾಡಲಿ ಎಂದು ಬಿಜಿಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಇಂದು ಬಿ.ಎಸ್.ಯಡಿಯೂರಪ್ಪ ಅವರ ನಿವಾಸದಲ್ಲಿ ತಮ್ಮ ಬಣದೊಂದಿಗೆ ಸಮಾಲೋಚನೆ ನಡೆಸಿ ಯತ್ನಾಳ್ ಹೇಳಿಕೆ ಸಂಬಂಧ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ ಅವರು, ನನಗೆ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಯಾವ ಅವಶ್ಯಕತೆಯಿಲ್ಲ. ಆದರೆ ಯತ್ನಾಳ್ ಅವರು ಹೊಂದಾಣಿಕೆ ರಾಜಕಾರಣ ಎಂದು ಪಕ್ಷದ ಸಂಘಟನೆಗೆ ಪೆಟ್ಟು ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಬದಲಾವಣೆಯಾಗಲಿ ಎಂದು ಭಾವಿಸುತ್ತಿದ್ದಾರೆ. ಈ ಬಗ್ಗೆ ಅವರೊಂದಿಗೆ ಇನ್ನೂ ಹತ್ತು ಮಂದಿ ಸೇರಿಕೊಳ್ಳಲಿ ನಾನು ಅದಕ್ಕೆಲ್ಲಾ ತಲೆ ಕೆಡೆಸಿಕೊಳ್ಳಲ್ಲ. ಆದರೆ ಯತ್ನಾಳ್ ವಿರುದ್ಧ ಬಿಗು ಕ್ರಮವಾಗಬೇಕೆಂಬುದು ಅಷ್ಟೇ ಕಾರ್ಯಕರ್ತರ ಅಪೇಕ್ಷೆಯಾಗಿದೆ. ಹೀಗಾಗಿ ನಾನು ಈಗಲೂ ಯತ್ನಾಳ್ ಅವರಿಗೆ ಮನವಿ ಮಾಡುವುದೆಂದರೆ ಪಕ್ಷದ ಕಾರ್ಯಕರ್ತರಿಗೆ ಯಾವುದೇ ರೀತಿಯ ಅವಮಾನವಾಗದಂತೆ ನಡೆದುಕೊಳ್ಳಬಾರದು ಎಂದು ಸಲಹೆ ನೀಡಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಗೆ ಬೈಯೋದು ಒಂದೇ ಪದವಿ ಎಂದು ಯತ್ನಾಳ್ ಅಂದುಕೊಂಡಿದ್ದಾರೆ. ಈ ಬಗ್ಗೆ ಮಾಜಿ ಶಾಸಕರುಗಳು ನಮಗೆಲ್ಲವನ್ನು ತಿಳಿಸಿದ್ದಾರೆ. ಆದರೆ ನಾನು ಅವರೆಲ್ಲರಿಗೂ ಅದನ್ನು ಬದಿಗೊತ್ತಿ ಪಕ್ಷದ ಸಂಘಟನೆಗೆ ಕೆಲಸ ಮಾಡಿ ಎಂದಷ್ಟೇ ಹೇಳಿದ್ದೇನೆ. ಶಾಸಕ ಯತ್ನಾಳ್ ಅವರ ವಿರುದ್ಧ ಬಿಜೆಪಿ ಹೈಕಮಾಂಡ್‌ಗೆ ಚಾಡಿ ಹೇಳುವ ಅಥವಾ ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ನಾನು ಹೇಳಿಲ್ಲ. ಅದನ್ನು ಹೇಳುವ ಯಾವ ಅವಶ್ಯಕತೆಯೂ ಇಲ್ಲ ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


