ನಟಿ ಸಮಂತಾ ರುತ್ ಪ್ರಭು ನಟ ನಾಗಚೈತನ್ಯರಿಂದ ವಿಚ್ಛೇದನ ಪಡೆದುಕೊಂಡು ಬೇರ್ಪಟ್ಟ ಬಳಿಕ ಮತ್ತೊಂದು ವಿವಾಹವಾಗಲಿದ್ದಾರೆ ಎಂಬ ಗುಸುಗುಸು ಈ ಹಿಂದಿನಿಂದಲೂ ಕೇಳಿಬರುತ್ತಲೇ ಇದೆ.
ಅನೇಕ ಬಾರಿ ಕೆಲವರ ಹೆಸರು ಸಮಂತಾ ಹೊಸ ಬಾಯ್‌ಫ್ರೆಂಡ್ ಎಂಬ ತಲೆಬರಹದಡಿ ಕೇಳಿಬಂದಿತ್ತಾದರೂ ಸಹ ಎಲ್ಲವೂ ಊಹಾಪೋಹಗಳಾಗಿಯೇ ಉಳಿದುಹೋದವು. ಆದರೆ ಇದೀಗ ಬಾಲಿವುಡ್ ನಿರ್ದೇಶಕ ರಾಜ್ ನಿಡಿಮೋರು ಜತೆ ಸಮಂತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂಬ ಸುದ್ದಿಗಳು ಹರಿದಾಡಿವೆ.
ಸಮಂತಾ ಹಾಗೂ ರಾಜ್ ನಿಡಿಮೋರು ಕೊಯಂಬತ್ತೂರಿನಲ್ಲಿರುವ ಇಶಾ ಫೌಂಡೇಶನ್‌ನ ಲಿಂಗ ಭೈರವಿ ಆಲಯದಲ್ಲಿ ‘ಭೂತ ಶುದ್ಧಿ ವಿವಾಹ’ದ ಮೂಲಕ ಮದುವೆಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಸಮಂತಾ ಆಚರಣೆಯ ಫೋಟೊಗಳನ್ನು ಹಂಚಿಕೊಂಡಿದ್ದು, ಇಬ್ಬರಿಂದ ಅಧಿಕೃತ ಘೋಷಣೆ ಇನ್ನೂ ಬಾಕಿ ಇದೆ.
ಇನ್ನು ನಟಿ ಸಮಂತಾ ಎರಡನೇ ಮದುವೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದ್ದು, ಸಮಂತಾ ಕೈ ಹಿಡಿದ ವರ ಯಾರು ಎಂದೂ ಸಹ ಹುಡುಕಾಟ ನಡೆದಿವೆ. ಸದ್ಯ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿರುವ ಫ್ಯಾಮಿಲಿ ಮ್ಯಾನ್ ಸೀಸನ್ 3ರ ನಿರ್ದೇಶಕರಾದ ರಾಜ್ ಎಂಬುವರನ್ನೇ ಸಮಂತಾ ಕೈಹಿಡಿದಿದ್ದಾರೆ. ಈ ಹಿಂದೆ ಇದೇ ವೆಬ್‌ಸರಣಿಯ ಎರಡನೇ ಸೀರಿಸ್‌ನಲ್ಲಿ ಸಮಂತಾ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಈ ನಿರ್ದೇಶಕ ರಾಜ್ ನಿಡಿಮೋರು ಈ ಹಿಂದೆ 2015ರಲ್ಲಿ ಶ್ಯಾಮಿಲಿ ಡಿ ಎಂಬುವರನ್ನು ವಿವಾಹವಾಗಿದ್ದರು ಹಾಗೂ ಇವರಿಗೆ ಓರ್ವ ಪುತ್ರಿಯೂ ಸಹ ಇದ್ದಾಳೆ. ಆದರೆ 2022ರಲ್ಲಿ ಈ ಜೋಡಿ ವಿಚ್ಛೇದನ ಪಡೆದುಕೊಂಡು ಬೇರ್ಪಟ್ಟಿತು. ಇಬ್ಬರ ಡಿವೋರ್ಸ್‌ಗೆ ನಿಖರ ಕಾರಣವೇನೆಂಬುದು ಬಹಿರಂಗವಾಗದಿದ್ದರೂ ಸಹ ಶ್ಯಾಮಿಲಿ ಆಗಾಗ ಟೀಕಾತ್ಮಕ ಪೋಸ್ಟ್ ಹಾಕಿ ಎಲ್ಲವೂ ಸರಿ ಇರಲಿಲ್ಲ ಎಂಬುದನ್ನು ಬಿಚ್ಚಿಟ್ಟಿದ್ದರು.
ಇನ್ನು ಶ್ಯಾಮಿಲಿ ಡಿ ಈ ಹಿಂದೆ ರಾಕೇಶ್ ಓಂ ಪ್ರಕಾಶ್ ಮೆಹ್ರಾ ಹಾಗೂ ವಿಶಾಲ್ ಭಾರದ್ವಾಜ್ ರೀತಿಯ ಖ್ಯಾತ ನಿರ್ದೇಶಕರಿಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ತನ್ನ ವಿಭಿನ್ನ ಚಿತ್ರಕಥೆ ಬರಹದಿಂದಾಗಿ ಶ್ಯಾಮಿಲಿ ಖ್ಯಾತಿಯನ್ನು ಪಡೆದಿದ್ದಾರೆ.
ರಾಜ್ ನಿಡಿಮೋರು ಒಟ್ಟು ಆಸ್ತಿ ಸುದ್ದಿ ವರದಿಗಳ ಪ್ರಕಾರ 83 – 85 ಕೋಟಿಯಷ್ಟಿದೆ ಎನ್ನಲಾಗಿದೆ.
ಯುವಕನಿಂದ ಲೈಂಗಿಕ ಕಿರುಕುಳ: ನಟಿ ಆಶಿಕಾ ರಂಗನಾಥ್ ಮಾವನ ಮಗಳು ಆತ್ಮಹತ್ಯೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


