ಮೊರದಾಬಾದ್ (ಉತ್ತರ ಪ್ರದೇಶ): ಚುನಾವಣಾ ಆಯೋಗದ ಎಸ್‌ಐಆರ್ ಚಾಲ್ತಿಯಲ್ಲಿದ್ದು, ಇದಕ್ಕೆಂದು ಶಿಕ್ಷಕರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಈ ಕುರಿತು ಅಸಮಾಧಾನಗಳೂ ಸಹ ಇದ್ದು, ಶಿಕ್ಷಕರನ್ನು ಬಳಕೆ ಮಾಡಬಾರದು, ಬದಲಾಗಿ ಚುನಾವಣಾ ಇಲಾಖೆಯ ಸಿಬ್ಬಂದಿಯನ್ನು ಬಳಕೆ ಮಾಡಬೇಕು ಎಂಬ ಕೂಗು ಸಹ ಇದೆ.
ಆದರೆ ಸಮೀಕ್ಷೆ ಮಾಡಲು ಬೇಕಾದಷ್ಟು ಸಿಬ್ಬಂದಿ ಬಲ ತಮ್ಮಲ್ಲಿಲ್ಲ ಎಂಬ ಕಾರಣವನ್ನು ನೀಡುವ ಚುನಾವಣಾ ಆಯೋಗ ಶಿಕ್ಷಕರ ಕೊಡುಗೆ ಅತ್ಯಗತ್ಯ ಎಂದು ಹೇಳಿದೆ. ಇದರಿಂದಾಗಿ ಶಿಕ್ಷಕರು ಎಸ್‌ಐಆರ್ ಸಮೀಕ್ಷೆಯಲ್ಲಿ ಮನೆ ಮನೆಗೆ ತೆರಳಿ ಮತದಾರರ ಕುರಿತು ಪರಿಶೀಲಿಸಿ ದತ್ತಾಂಶಗಳನ್ನು ಅಪ್‌ಲೋಡ್ ಮಾಡಬೇಕಿದೆ.
ಅನೇಕ ಶಿಕ್ಷಕರು ಈ ಕೆಲಸ ತಮಗೆ ಕಷ್ಟಕರವಾಗಿದೆ ಎಂದು ದೂರಿದ್ದಾರೆ. ಕೆಲ ಶಿಕ್ಷಕರು ಸಾವಿಗೀಡಾಗಿದ್ದಾರೆ. ಇದೀಗ ಎಸ್‌ಐಆರ್ ಕರ್ತವ್ಯದಿಂದಾಗಿ ಒತ್ತಡಕ್ಕೊಳಗಾಗಿರುವ ಬೂತ್ ಮಟ್ಟದ ಅಧಿಕಾರಿ, ಶಿಕ್ಷಕ ಸರ್ವೇಶ್ ಸಿಂಗ್ ಎಂಬುವರು ವಿಡಿಯೊ ಮಾಡಿ ಹಾಗೂ ಪತ್ರವನ್ನು ಬರೆದು ಸಾವಿಗೆ ಶರಣಾಗಿದ್ದಾರೆ.
46 ವರ್ಷ ವಯಸ್ಸಿನ ಸರ್ವೇಶ್ ಸಿಂಗ್ ವಿಡಿಯೊದಲ್ಲಿ ಗೋಳಾಡುತ್ತಾ ಮಾತನಾಡಿದ್ದು, ‘ಅಮ್ಮ ನನ್ನನ್ನು ಕ್ಷಮಿಸಿಬಿಡು. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊ. ನನಗೆ ಟಾಸ್ಕ್ ಮುಗಿಸಲು ಆಗಲಿಲ್ಲ. ನಾನು ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದಾರೆ. ಅಲ್ಲದೇ ಯಾರನ್ನೂ ಸಹ ತನ್ನ ಸಾವಿಗೆ ಕಾರಣರೆಂದು ದೂರಬಾರದು ಮತ್ತು ತನ್ನ ಸಾವಿನ ಬಗ್ಗೆ ಕುಟುಂಬದವರಿಗೆ ಪ್ರಶ್ನೆ ಮಾಡಬಾರದು ಎಂದೂ ಸಹ ಮನವಿ ಮಾಡಿಕೊಂಡಿದ್ದಾರೆ.
ಇನ್ನು ತಾನು ತೀವ್ರ ಸುಸ್ತಾಗಿದ್ದು, ಕಳೆದ ಇಪ್ಪತ್ತು ದಿನಗಳಿಂದ ಸರಿಯಾಗಿ ನಿದ್ರೆ ಮಾಡಲು ಆಗಿಲ್ಲ ಎಂದು ತನ್ನ ಒತ್ತಡವನ್ನು ಬಿಚ್ಚಿಟ್ಟಿರುವ ಸರ್ವೇಶ್ ತನಗೆ ನಾಲ್ವರು ಪುಟ್ಟ ಹೆಣ್ಣುಮಕ್ಕಳಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ. ಬೇರೆ ಎಲ್ಲರೂ ಟಾಸ್ಕ್ ಮುಗಿಸಿದರು, ಆದರೆ ನನಗೆ ಆಗಲಿಲ್ಲ ಎಂದು ತಿಳಿಸಿದ್ದಾರೆ. ಸಹೋದರಿಗೆ ಸಂದೇಶ ನೀಡಿರುವ ಸರ್ವೇಶ್ ತನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಎರಡು ಪೇಜ್ ಡೆತ್‌ನೋಟ್ ಬರೆದಿರುವ ಸರ್ವೇಶ್ ತಾನು ಹಗಲು, ರಾತ್ರಿ ಕಷ್ಟಪಟ್ಟರೂ ಎಸ್‌ಐಆರ್ ಟಾರ್ಗೆಟ್ ಮುಟ್ಟಲಾಗಲಿಲ್ಲ. ರಾತ್ರಿ ಸಮಯದಲ್ಲಿ ಆತಂಕದಿಂದಾಗಿ ನನಗೆ ನನ್ನನ್ನೇ ಸಹಿಸಿಕೊಳ್ಳಲಾಗಲಿಲ್ಲ. ದಿನಕ್ಕೆ ಎರಡರಿಂದ ಮೂರು ಗಂಟೆ ಮಾತ್ರ ನಿದ್ರೆ. ನನಗೆ ನಾಲ್ಕರು ಹೆಣ್ಣು ಮಕ್ಕಳಿದ್ದಾರೆ, ನನ್ನನ್ನು ಕ್ಷಮಿಸಿಬಿಡಿ ಎಂದು ಉಲ್ಲೇಖಿಸಿದ್ದಾರೆ.
ಯುವಕನಿಂದ ಲೈಂಗಿಕ ಕಿರುಕುಳ: ನಟಿ ಆಶಿಕಾ ರಂಗನಾಥ್ ಮಾವನ ಮಗಳು ಆತ್ಮಹತ್ಯೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


