Tuesday, November 3, 2026
spot_img
More
    spot_img
    HomeLatest newsಬೇರೆ ಜಾತಿಯವನು ಎಂಬ ಕಾರಣಕ್ಕೆ ಮನೆಯವರು ಕೊಂದ ಯುವಕನ ಮೃತದೇಹವನ್ನೇ ಮದುವೆಯಾದ ಪ್ರೇಯಸಿ!

    ಬೇರೆ ಜಾತಿಯವನು ಎಂಬ ಕಾರಣಕ್ಕೆ ಮನೆಯವರು ಕೊಂದ ಯುವಕನ ಮೃತದೇಹವನ್ನೇ ಮದುವೆಯಾದ ಪ್ರೇಯಸಿ!

    ಪ್ರೀತಿಯೇ ಸರ್ವಶ್ರೇಷ್ಠ, ಉಳಿದೆಲ್ಲವೂ ಅವುಗಳ ಮುಂದೆ ಲೆಕ್ಕಕ್ಕಿಲ್ಲ ಎಂಬುದನ್ನು ನಿಜ ಪ್ರೇಮಿಗಳು ಹಲವಾರು ಸಾಬೀತುಪಡಿಸಿ ಬೂಟಾಟಿಕೆಯ ಪ್ರೀತಿ ಹಾಗೂ ಜಾತಿ ಪ್ರಿಯರಿಗೆ ಮಾನವೀಯತೆಯ ಪಾಠ ಮಾಡಿದ ಹಲವು ಘಟನೆಗಳನ್ನು ನಾವು ಕಂಡಿದ್ದೇವೆ.

    ಇದೀಗ ನೆರೆಯ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಸಹ ಅಂತಹದ್ದೇ ಘಟನೆ ನಡೆದಿದ್ದು, ಮನೆಯವರು ತನ್ನ ಪ್ರಿಯಕರನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದು, ಪ್ರೇಯಸಿ ಆತನ ಮೃತದೇಹವನ್ನೇ ಮದುವೆಯಾಗಿದ್ದಾಳೆ.

    ತನ್ನ ಸಹೋದರ ಮೂಲಕ ಪರಿಚಯವಾದ ಸಕ್ಷಮ್ ಟಾಟೆ (20) ಎಂಬ ಯುವಕನ ಜತೆ ಸ್ನೇಹ ಬೆಳೆಸಿದ ಯುವತಿ ಆಂಚಲ್ ಆಗಾಗ ಆತನ ಮನೆಗೆ ಭೇಟಿ ನೀಡುತ್ತಾ ಬಂದಿದ್ದಾಳೆ. ಈ ವೇಳೆ ಇಬ್ಬರ ನಡುವೆ ಪ್ರೀತಿ ಮೂಡಿದ್ದು, ಸಕ್ಷಮ್ ಟಾಟೆ ಬೇರೆ ಜಾತಿಗೆ ಸೇರಿದ ಯುವಕ ಎಂಬ ಕಾರಣಕ್ಕೆ ಆಂಚಲ್ ಕಡೆಯವರು ಆತನನ್ನು ಬಿಟ್ಟುಬಿಡುವಂತೆ ಮಗಳಿಗೆ ತಿಳಿಸಿದ್ದಾರೆ.

    ಆದರೂ ಸಹ ಇಬ್ಬರೂ ದೂರವಾಗದೇ ತಮ್ಮ ಪ್ರೀತಿಯನ್ನು ಮುಂದುವರಿಸುವುದಾಗಿ ಹೇಳಿಕೊಂಡಿದ್ದು, ಇದರಿಂದಾಗಿ ಕುಪಿತರಾದ ಹುಡುಗಿಯ ತಂದೆ ಹಾಗೂ ಸಹೋದರ ಸಕ್ಷಮ್ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದಾರೆ.

    ಇತ್ತ ತನ್ನ ಪ್ರಿಯಕರನ ಅಂತ್ಯಕ್ರಿಯೆಗೆ ಬಂದ ಆಂಚಲ್ ಹರಿಶಿನ ಹಾಗೂ ಕುಂಕುಮ ಹಚ್ಚಿಕೊಂಡು ಸಕ್ಷಮ್ ಮೃತದೇಹವನ್ನೇ ವಿವಾಹವಾಗಿದ್ದಾಳೆ. ಘಟನೆ ಕುರಿತು ಮಾತನಾಡಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾಳೆ.

    ಯುವಕನಿಂದ ಲೈಂಗಿಕ ಕಿರುಕುಳ: ನಟಿ ಆಶಿಕಾ ರಂಗನಾಥ್ ಮಾವನ ಮಗಳು ಆತ್ಮಹತ್ಯೆ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search