ಬೆಂಗಳೂರು: ಕನ್ನಡದ ಖಾಸಗಿ ವಾಹಿನಿಯಲ್ಲಿ ಸರಿಗಮಪ ಕಾರ್ಯಕ್ರಮದ ಜ್ಯೂರಿಯಾಗಿದ್ದ ಎಸ್.ಬಾಲಿ ವಿಧಿವಶರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಎಸ್.ಬಾಲಿ ಅವರ ನಿಧನಕ್ಕೆ ನಿರೂಪಕಿ ಅನುಶ್ರೀ, ನಟಿ ಚಿತ್ಕಲಾ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಖ್ಯಾತ ವಾದ್ಯಗಾರರು, ಸಂಗೀತ ನಿರ್ದೇಶಕರು, ಸರಿಗಮಪ ವೇದಿಕೆಯ ಜ್ಯೂರಿಯಾಗಿದ್ದ ಶ್ರೀ ಎಸ್.ಬಾಲಸುಬ್ರಹ್ಮಣ್ಯಂ ಅವರು, ರಿದಮ್ ಕಿಂಗ್ ಎಂದೇ ಫೇಮಸ್ ಆಗಿದ್ದರು.
ಇನ್ನೂ ಬಾಲಿ ಅವರ ಸಂಗೀತ ಸೇವೆಗೆ ಹಲವು ಪ್ರಶಸ್ತಿಗಳು ದಕ್ಕಿದೆ. ಕರ್ನಾಟಕ ಕಲಾಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಅವರ ಪಾಲಾಗಿತ್ತು. ಇದೀಗ ಅವರ ನಿಧನದಿಂದ ಸಂಗೀತ ಲೋಕಕ್ಕೆ ದೊಡ್ಡ ನಷ್ಟವಾಗಿದೆ.
ಬಾಲಿ ಅವರ ನಿಧನಕ್ಕೆ ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಸೇರಿದಂತೆ ಹಲವು ಸಂಗೀತ ದಿಗ್ಗಜರು ಸಂತಾಪ ಸೂಚಿಸಿದ್ದು, ಬಾಲಿ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


